More

    ಆಸ್ತಿಯ ಆಸೆಗಾಗಿ ಮಹಿಳೆಯ ಕೊಲೆ?

    ಹನುಮಸಾಗರ: ಸಮೀಪದ ಮಡಿಕೇರಿ ಗ್ರಾಮದಲ್ಲಿ ಆಸ್ತಿ ಆಸೆಗಾಗಿ ಗಂಡನ ಸಂಬಂಧಿಕರೇ ಮಹಿಳೆಯೊಬ್ಬರನ್ನು ಕೊಲೆ ಮಾಡಿದ್ದಾರೆ.

    ಹನಮವ್ವ ಹನುಮಪ್ಪ ಡಗ್ಗಿ (55) ಮೃತ ದುರ್ದೈವಿ. ಮೃತೆಯ ಪತಿ ಹನುಮಪ್ಪ ಕಳೆದ ಒಂದು ವರ್ಷದ ಹಿಂದೆ ಮೃತ ಪಟ್ಟಿದ್ದು, ಈ ದಂಪತಿಗೆ ಮಕ್ಕಳು ಆಗಿದ್ದಿಲ್ಲ. ಗಂಡನ ಹೆಸರಿನಲ್ಲಿ ಮಡಿಕೇರಿ ಗ್ರಾಮದಲ್ಲಿರುವ 5 ಎಕರೆ ಜಮೀನು ಆಸೆಗಾಗಿ ಹನುಮವ್ವಳನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕಳೆದ ಕೆಲ ತಿಂಗಳಿಂದ ಚಳಗೇರಿಯ ತಮ್ಮನ ಮನೆಯಲ್ಲಿ ವಾಸವಿದ್ದಳು. ಜ.9 ರಂದು ಮಡಿಕೇರಿಯಲ್ಲಿ ಜರುಗಿದ ಜಾತ್ರೆಗೆ ಆಗಮಿಸಿದ್ದ ಹನುಮವ್ವ, ಎಳ್ಳಮಾವಾಸ್ಯೆ ಮುಗಿಸಿ ಮರಳಿ ಚಳಗೇರಿಗೆ ಹೋಗಬೇಕೆಂದು ಮಡಿಕೇರಿಯ ಪತಿಯ ಮನೆಯಲ್ಲಿ ವಾಸವಿದ್ದಳು.

    ಈ ವೇಳೆ ಪತಿಯ ಸಂಬಂಧಿಕರೇ ಜ.13 ರಂದು ಆಕೆಯನ್ನು ಕೊಂದು, ನಂತರ ಆತ್ಮಹತ್ಯೆ ಎಂದು ಬಿಂಬಿಸಲು, ಮನೆಯಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ದೇಹ ಅರೆಬರೆಯಾಗಿ ಸುಟ್ಟಿದೆ. ಈ ಸಂಬಂಧ ವ್ಯಕ್ತಿಯೊಬ್ಬನ್ನು ಬಂಧಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸಿಪಿಐ ನಿಂಗಪ್ಪ ಎನ್.ಆರ್. ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts