More

    ಮದುವೆಗೆ ಅಗ್ನಿ ದೇವನ ಕೃಪೆ ಎಂದರೆ ಇದೆನಾ?: ಮೊದಲ ಬಾರಿಯ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ಮಹಾಪೂರ!

    ಲಂಡನ್​: ವೃತ್ತಿಪರ ಸಾಹಸಿಗನೊಬ್ಬ ತನ್ನ ಪ್ರೀತಿಯ ಪ್ರೇಯಸಿಗೆ ವಿನೂತನವಾಗಿ ಮದುವೆ ಪ್ರಸ್ತಾಪ ಮಾಡಿದ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ರಿಕಿ ಆ್ಯಶ್​ (52) ಎಂಬ ಸಾಹಸಿಗ ತನ್ನ ಕಾಲಿನಿಂದ ತೋಳಿನವರೆಗೂ ಬೆಂಕಿ ಉರಿಯುವಂತೆ ನೆಲದ ಮೇಲೆ ಮಂಡಿಯೂರಿ ಕುಳಿತು ಮುಂದೆ ಕೈಚಾಚಿ ಪ್ರೇಯಸಿಗೆ ಮದುವೆ ಪ್ರಸ್ತಾಪ ಮಾಡುತ್ತಿರುವುದು ವೈರಲ್​ ಆಗಿರುವ ಫೋಟೋದಲ್ಲಿದೆ.

    ಅಂದಹಾಗೆ ರಿಕಿ ಕರೊನಾ ವೈರಸ್​ ನರ್ಸ್​ ಕತ್ರಿನಾ ಡಾಬ್ಸನ್​ (48) ಎಂಬಾಕೆಯನ್ನು ಲವ್​ ಮಾಡುತ್ತಿದ್ದಾರೆ. ಪ್ರಿಯಕರನ ವಿನೂತನ ಮದುವೆ ಪ್ರಸ್ತಾಪ ಕಂಡು ಕತ್ರಿನಾ ಒಂದು ಕ್ಷಣ ಮೂಕವಿಸ್ಮಿತಳಾದಳು. ಕೊನೆಗೆ ಮದುವೆ ಕತ್ರಿನಾ ಗ್ರೀನ್​ ಸಿಗ್ನಲ್​ ನೀಡಿದಳು. ಇದರಿಂದ ರಿಕಿ ಸ್ಥಳದಲ್ಲೇ ಸಂತಸ ವ್ಯಕ್ತಪಡಿಸಿದರು.

    ಕತ್ರಿನಾ ಕೆಂಟ್​ನಲ್ಲಿರುವ ವಿಲಿಯಂ ಆಸ್ಪತ್ರೆಯಲ್ಲಿ ಹಾರ್ವೇ ಆಸ್ಪತ್ರೆಯಲ್ಲಿ ಕರೊನಾ ವೈರಸ್​ ಘಟಕದಲ್ಲಿ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಿಯಕರ ಪ್ರಪೋಸ್​ ಬಗ್ಗೆ ತುಂಬಾ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ನಾಟಿಂಗ್​ಹ್ಯಾಮ್​ನ ಸಾಹಸಿಗನಾಗಿರುವ ರಿಕಿ ಸ್ಟಂಟ್​ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ.

    ಈ ರೀತಿಯ ಮದುವೆ ಪ್ರಸ್ತಾಪ ಇದೇ ಮೊದಲಾಗಿದ್ದು, ರಿಕಿ ಅವರಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತದೆ. ವೃತ್ತಿಯಲ್ಲಿ ಸಾಹಸಿಗನಾಗಿದ್ದರಿಂದ ರಿಕಿಯವರಿಗೆ ಅದು ಸುಲಭವಾಯಿತು. ಹಾಗಾಂತ ಇದನ್ನು ಯಾರೂ ಸಹ ಅನುಸರಿಸಬಾರದು ಎಂಬುದು ಅವರ ಅಭಿಪ್ರಾಯವಾಗಿದೆ. (ಏಜೆನ್ಸೀಸ್​)

    VIDEO| ಬೆತ್ತಲೆಯಾಗಿ ದೇವಸ್ಥಾನ ಪ್ರವೇಶಿಸಿದ ಮಹಿಳೆಯಿಂದ ಅಸಭ್ಯ ವರ್ತನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts