More

    ನ. 12ಕ್ಕೆ ಪ್ರಧಾನಿಯಿಂದ ಜೆಎನ್​ಯುನಲ್ಲಿರುವ ವಿವೇಕಾನಂದರ ಪ್ರತಿಮೆ ಅನಾವರಣ

    ನವದೆಹಲಿ: ಜವಾಹರ‌ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್​ಯು) ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2020 ನ. 12ರ ಗುರುವಾರ ಸಂಜೆ 6:30ಕ್ಕೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಜೆಎನ್​ಯು ಘೋಷಿಸಿದೆ.

    ಕಾರ್ಯಕ್ರಮದ ಬಗ್ಗೆ ಜೆಎನ್​ಯು ಉಪಕುಲಪತಿ ಎಂ. ಜಗದೀಶ್​ ಕುಮಾರ್​ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತೀಯರ ಅತ್ಯಂತ ಪ್ರಿಯವಾದ ಪ್ರಬುದ್ಧ ಮತ್ತು ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರಾಗಿದ್ದಾರೆ. ಸ್ವಾತಂತ್ರ್ಯ, ಅಭಿವೃದ್ಧಿ, ಸಾಮರಸ್ಯ ಮತ್ತು ಶಾಂತಿ ಸಂದೇಶಗಳಿಂದ ಅಸಂಖ್ಯಾತ ಭಾರತೀಯರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ವಿವೇಕಾನಂದರು ಯಾವಾಗಲು ಶಿಕ್ಷಣ ಮತ್ತು ಭಾರತೀಯ ಒಳಿತಿನ ಬಗ್ಗೆ ಮಾತನಾಡುತ್ತಿದ್ದರು. ಅದರಲ್ಲೂ ಮೂಲಸೌಲಭ್ಯದಿಂದ ವಂಚಿತರಾದವರ ಬಗ್ಗೆ ಧ್ವನಿ ಏರಿಸುತ್ತಿದ್ದರು. ಅವರ ಪ್ರತಿಮೆಯನ್ನು ಹಳೆಯ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಜೆಎನ್​ಯುನಲ್ಲಿ ಸ್ಥಾಪಿಸಲಾಗಿದೆ. ಇದಕ್ಕಾಗಿ ಹಳೆಯ ವಿದ್ಯಾರ್ಥಿಗಳಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: VIDEO| ಅಮೆರಿಕ ಚುನಾವಣೆ: ಸುಳ್ಳಾಗಲಿಲ್ಲ ಪ್ರಾಣಿಗಳು ನುಡಿದ ಭವಿಷ್ಯ..!

    ಪ್ರಧಾನಿ ಮೋದಿ ಅವರು ತಮ್ಮ ಬರಹ ಹಾಗೂ ಭಾಷಣಗಳಲ್ಲಿ ಆಗಾಗ ವಿವೇಕಾನಂದರ ಜೀವನ ಸಂದೇಶಗಳನ್ನು ಯುವಕರಿಗೆ ನೆನಪು ಮಾಡುತ್ತಿರುತ್ತಾರೆ. ಜೆಎನ್​ಯು ಆವರಣದಲ್ಲಿ ಸ್ಥಾಪಿತವಾಗಿರುವ ಈ ಮಣ್ಣಿನ ಮಗನ ಪ್ರತಿಮೆಯನ್ನು ಪ್ರಧಾನಿ ಮೋದಿ ಅವರು ಅನಾವರಣಗೊಳಿಸಲಿದ್ದು, ನಾವು ಅವರಿಗೆ ಕೃತಜ್ಞರಾಗಿರುತ್ತೇವೆ. ಉದ್ಘಾಟನಾ ಕಾರ್ಯಕ್ರಮವೂ ಜೆಎನ್​ಯು ಫೇಸ್​ಬುಕ್​ ಪೇಜ್​ನಲ್ಲಿ ನೇರಪ್ರಸಾರ ಆಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ರಸ್ತೆ ಜಾಗ ಮಾರಾಟಕ್ಕಿದೆ..! ಖರೀದಿಗೂ ಮುನ್ನ ಎಚ್ಚರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts