More

    ಪ್ರಧಾನಿ ನರೇಂದ್ರ ಮೋದಿಯವರ ಬ್ರಸೆಲ್ಸ್ ಪ್ರಯಾಣ ರದ್ದು; ಭಾರತ-ಯುರೋಪಿಯನ್​ ಒಕ್ಕೂಟದ ಶೃಂಗಸಭೆ ದಿನ ಮುಂದೂಡಿಕೆ

    ಬೆಲ್ಜಿಯಂ: ಭಾರತ-ಯುರೋಪಿಯನ್​ ಒಕ್ಕೂಟದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಸೆಲ್ಸ್​ಗೆ ತೆರಳಬೇಕಿದ್ದ ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣ ರದ್ದುಗೊಂಡಿದೆ.

    ಕೊರೊನಾ ವೈರಸ್ ಆತಂಕ ಎಲ್ಲೆಡೆ ಮನೆ ಮಾಡಿದೆ. ಪಸರಿಸುತ್ತಿರುವ ವೇಗವೂ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರು ಬ್ರಸೆಲ್ಸ್​ಗೆ ತೆರಳುತ್ತಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

    ಕೊರೊನಾ ವೈರಸ್​ ಹರಡುತ್ತಿರುವ ಈ ಸಂದರ್ಭದಲ್ಲಿ ವಿದೇಶಿ ಪ್ರಯಾಣ ಸರಿಯಲ್ಲ ಎಂದು ಎರಡೂ ರಾಷ್ಟ್ರಗಳ ಆರೋಗ್ಯ ಇಲಾಖೆಗಳು ಸಲಹೆ ನೀಡಿವೆ. ಹಾಗಾಗಿ ಸದ್ಯ ಶೃಂಗಸಭೆ ನಡೆಸಲಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರೂ ಬ್ರಸೆಲ್ಸ್​ಗೆ ತೆರಳುವುದಿಲ್ಲ. ಬರುವ ದಿನಗಳಲ್ಲಿ ಪರಸ್ಪರ ಅನುಕೂಲಕರ ದಿನವನ್ನು ನೋಡಿಕೊಂಡು ಶೃಂಗಸಭೆಯನ್ನು ನಿಗದಿ ಮಾಡಲಾಗುವುದು ಎಂದು ಎಂಇಎಯ ವಕ್ತಾರ ರವೀಶ್​ ಕುಮಾರ್​ ತಿಳಿಸಿದ್ದಾರೆ.

    ಈ ವರ್ಷದ ಭಾರತ-ಯುರೋಪಿಯನ್ ಒಕ್ಕೂಟದ ಶೃಂಗಸಭೆ ಮಾರ್ಚ್​ 13ರಂದು ಬೆಲ್ಜಿಯಂನ ಬ್ರಸೆಲ್ಸ್​ನಲ್ಲಿ ನಡೆಯಬೇಕಿತ್ತು. ಬ್ರಸೆಲ್ಸ್​ನಲ್ಲಿ ಇರುವ ಯುರೋಪಿಯನ್ ಒಕ್ಕೂಟದ ಆಡಳಿತ ಕಚೇರಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಯುರೋಪಿಯನ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts