More

    ಸೂಲಿನ ಭಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮೋದಿಯವರನ್ನು ಕರೆಸಿ ರೋಡ್ ಶೋ – ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ

    ಪುತ್ತೂರು: ಜಿಲ್ಲೆಗೆ ಪ್ರಧಾನಿ ಮೋದಿ ಬೇಟಿ ನೀಡಿದ ಸಂದರ್ಭದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮೀಪಕ್ಕೂ ಹೋಗಿಲ್ಲ. ಆದರೆ ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಬಂದಾಗ ಮಾತ್ರ ಅವರಿಗೆ ಸಮಾಜ ಸುಧಾರಕ, ಆಧ್ಯಾತ್ಮ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳ ನೆನಪಾಗಿದೆ. ಈ ಹಿಂದೆ ಎಂದೂ ಪ್ರಕಟವಾಗದ ಬ್ರಹ್ಮಶ್ರೀ ನಾರಾಯಣ ಗುರುಗಳ ಮೇಲಿನ ಗೌರವ ಈಗ ಪ್ರಕಟಗೊಂಡಿದೆ. ಜಿಲ್ಲೆಯಲ್ಲಿ ಸೋಲಿನ ಭಯದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಮೇಲೆ ತೋರಿಸಿದ ನಾಟಕೀಯ ಗೌರವಾರ್ಪಣೆಯನ್ನು ಸಲ್ಲಿಸಿದ್ದಾರೆಯೇ ವಿನಃ ಅದು ಅವರ ಮೇಲಿನ ಗೌರವದಿಂದಲ್ಲ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದ್ದಾರೆ.

    ಬಿಜೆಪಿಯವರು ಚುನಾವಣೆಯ ಸೂಲಿನ ಭಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮೋದಿಯವರನ್ನು ಕರೆಸಿ ರೋಡ್ ಶೋ ಮಾಡಿದ್ದು, ಈ ಸಂದರ್ಭ ಒಂದು ಕಾಲನ್ನು ನಾರಾಯಣ ಗುರುಸ್ವಾಮಿ ಪುತ್ಥಳಿಯ ಪೀಠದ ಮೇಲಿಟ್ಟು ಹಾರಾರ್ಪಣೆ ಮಾಡುವ ಮೂಲಕ ಗೌರವದ ಹೆಸರಿನಲ್ಲಿ ಪ್ರತಿಮೆಗೆ ಅಗೌರವ ಸಲ್ಲಿಸಿದ್ದಾರೆ. ಬಿಜೆಪಿ ಸರ್ಕಾರವು ೨೦೨೨ನೇ ಇಸವಿಯಲ್ಲಿ ನಾರಾಯಣ ಗುರುಗಳ ಸ್ತಬ್ಧಿಚಿತ್ರವನ್ನು ಗಣರಾಜ್ಯೋತ್ಸವದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡದೆ ಅವಮಾನಿಸಿತ್ತು. ಆ ಸಂದರ್ಭದಲ್ಲಿ ಮುಂದಿನ ಸಲ ನೀಡುತ್ತೇವೆ ಎಂದಿದ್ದರೂ, ೨೦೨೩ನೇ ಮತ್ತು ೨೦೨೪ನೇ ಇಸವಿಯಲ್ಲಾದರೂ ಅವಕಾಶ ನೀಡದೆ ವಂಚಿಸಲಾಯಿತು. ಅಲ್ಲದೆ ಶಾಲಾ ಪಠ್ಯಪುಸ್ತಕದಿಂದಲೂ ನಾರಾಯಣ ಗುರುಗಳ ಪಾಠವನ್ನು ತೆಗೆದು ಹಾಕಲಾಗಿತ್ತು. ಆಗೆಲ್ಲಾ ನಾರಾಯಣ ಗುರುಗಳಿಗೆ ಆಗಿರುವ ಅವಮಾನಗಳ ಬಗ್ಗೆ ತುಟಿ ಪಿಟಿಕ್ಕೆನ್ನದ ಮೋದಿ ಚುನಾವಣೆಯಲ್ಲಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿಯಾಗಿರುವ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಸಿಗುತ್ತಿರುವ ಅಪಾರ ಜನಬೆಂಬಲ ಕಂಡು ಅದನ್ನು ತಪ್ಪಿಸುವ ಉದ್ದೇಶದಿಂದಲೇ ಮೋದಿಯವರು ನಾರಾಯಣಗುರುಗಳಿಗ ಗೌರವ ನೀಡುವ ನಾಟಕ ಮಾಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ರೈ ಅಂಕೊತಿಮಾರ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ಡಯಾಸ್, ಎಸ್.ಸಿ ಘಟಕದ ಅಧ್ಯಕ್ಷ ಮುಕೇಶ್ ಕೆಮ್ಮಿಂಜೆ, ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts