More

    ರಂಗಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿ

    ಹನಗೋಡು: ರಂಗ ಕಲೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಹೇಳಿದರು.

    ಹನಗೋಡು ಹೋಬಳಿಯ ಕಚುವಿನಹಳ್ಳಿ ದೊಡ್ಡಮ್ಮ ತಾಯಿ ದೇವಾಲಯ ಆವರಣದಲ್ಲಿ ಗ್ರಾಮದ ಕಲಾ ತಂಡದವರು ಇತ್ತೀಚೆಗೆ ಆಯೋಜಿಸಿದ್ದ ಶನಿ ಪ್ರಭಾವ-ವಿಕ್ರಮ ವಿಜಯ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಪೌರಾಣಿಕ ನಾಟಕಗಳು ನಮ್ಮ ಪೂರ್ವಿಕರ ಕೊಡುಗೆಗಳಾಗಿದ್ದು, ಇವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ದು ಗ್ರಾಮೀಣ ಸೊಗಡಿನ ಕಲೆಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.

    ನಾಟಕದಲ್ಲಿ ಬರುವ ಉತ್ತಮ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕ ಜೀವನ ಸಾಗಿಸಬೇಕು ಎಂದರು.

    ತಾ.ಪಂ.ಮಾಜಿ ಸದಸ್ಯ ಕೆ.ಗಣಪತಿ ಮಾತನಾಡಿ, ಯಾವ ಮನುಷ್ಯನಲ್ಲಿ ಕಲೆ ಅಡಗಿರುತ್ತದೆಯೋ ಅಂತಹವರ ಅಂತಃಕರಣ ಶುದ್ಧಿಯಾಗಿರುತ್ತದೆ. ರಂಗಭೂಮಿಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸರಿದಾರಿಗೆ ತರುವ ಸಾಮರ್ಥ್ಯವಿದೆ. ಮನುಷ್ಯನಿಗೆ ಶಿಸ್ತುಬದ್ಧ ಜೀವನವನ್ನು ಕಲಿಸುತ್ತದೆ. ರಂಗಭೂಮಿಗೆ ಎಂದೂ ಸಾವಿಲ್ಲ. ಇದು ಶ್ರೇಷ್ಠ ಕ್ಷೇತ್ರವಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ನೇರಳಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಗೀತಾ ಸುರೇಶ್, ಉಪಾಧ್ಯಕ್ಷೆ ರುಕ್ಮಿಣಿ ಸುರೇಶ್, ಸದಸ್ಯ ಅಮಾಸೇಗೌಡ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹೇಶ್, ಹನಗೋಡು ಸೊಸೈಟಿ ಮಾಜಿ ಅಧ್ಯಕ್ಷ ಲೋಕೇಶ್, ನಿರ್ದೇಶಕ ಉಜ್ಜನೀಗೌಡ, ಗ್ರಾ.ಪಂ.ಮಾಜಿ ಸದಸ್ಯ ಕೆ.ಬಿ ಉಜ್ಜನೀಗೌಡ, ಕೆ.ಎಸ್. ಆನಂದ್, ಯ.ಮಾದೇಗೌಡ, ಚಿ.ಯ.ರೇವಣ್ಣ, ಮುಖಂಡ ಶಿವರಾಂ, ಮಾದೇಗೌಡ, ಸಣ ್ಣತಮ್ಮೇಗೌಡ, ಸ್ವಾಮಿಗೌಡ, ಮೋಟೇಗೌಡ, ಕಾಳಪ್ಪ, ರಾಜೇಶ್, ಕೆ.ಎಸ್ ರಾಜು, ಸುಜೇಂದ್ರ, ಸಣ್ಣು ಉಜ್ಜನೀಗೌಡ, ನಾಗೇಂದ್ರ, ರಾಜೇಗೌಡ, ಮಹೇಶ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts