ಕತಾರ್​ ಭಾರತೀಯ ಸಮುದಾಯದ ಪರವಾಗಿ ನಟ ಪ್ರಮೋದ್​ ಶೆಟ್ಟಿ ದಂಪತಿಗೆ ಸನ್ಮಾನ

Pramod Supritha
Published on

ಕತಾರ್​: ಕರ್ನಾಟಕದ ಪ್ರಖ್ಯಾತ ಚಲನಚಿತ್ರ ನಟರಾದ ಪ್ರಮೋದ್ ಶೆಟ್ಟಿ ಹಾಗೂ ಅವರ ಪತ್ನಿ ನಟಿ ಸುಪ್ರೀತ ಶೆಟ್ಟಿ ಅವರನ್ನು ಕತಾರಿನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿ ಇರುವ ಸಭಾಂಗಣದಲ್ಲಿ ಭಾರತೀಯ ಸಮುದಾಯದ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.

ಮಣಿಪಾಲ್ ವಿಶ್ವವಿದ್ಯಾಲಯದ ಉಪಕುಲಪತಿಗಳು ಮತ್ತು ಭಾರತೀಯ ದಂತ ವೈದ್ಯ ಸಮಿತಿಯ ಅಧ್ಯಕ್ಷ ಡಾ. ಸುರೇಂದ್ರ ಶೆಟ್ಟಿ, ತುಳು ಚಲನಚಿತ್ರ ನಿರ್ದೇಶಕ ಕಿಶೋರ್ ಶೆಟ್ಟಿ, ಜಾನಪದ ಕಲಾವಿದರಾದಂತ ಡಾ. ನಿರಂಜನ್ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.

katar

ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಮಣಿಕಂಠ, ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಸೇರಿದಂತೆ ಸಭೆಯಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

katar (1)
Katar (2)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net