More

    ಕೆಪಿಸಿಸಿ ಅಧ್ಯಕ್ಷರ ಮಾತು ತಿರಸ್ಕರಿಸಬೇಡಿ ; ಪಕ್ಷದ ಸೂಚನೆ ಪಾಲಿಸಲಿ ಜಮೀರ್ ಅಹ್ಮದ್ ; ಶಾಸಕ ಡಾ.ಜಿ.ಪರಮೇಶ್ವರ್ ಹೇಳಿಕೆ

    ತುಮಕೂರು : ಕಾಂಗ್ರೆಸ್‌ನಲ್ಲಿ ಪಕ್ಷದ ಅಧ್ಯಕ್ಷರ ಆದೇಶವನ್ನು ಎಲ್ಲರೂ ಪಾಲಿಸಬೇಕು, ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿದ್ದು ಅವರೇ ನಮ್ಮ ಹೈಕಮಾಂಡ್. ಹಾಗಾಗಿ ಅವರ ಹೇಳಿಕೆಯನ್ನು ಯಾರೂ ತಿರಸ್ಕರಿಸಬಾರದು, ಅವರ ಮಾತಿಗೆ ಎಲ್ಲರೂ ಗೌರವ ನೀಡಲೇಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.

    ತುಮಕೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಸಿಎಂ ಆಗಬೇಕೆಂಬ ಆಸೆ ನನ್ನ ಅಭಿಮಾನಿಗಳಿಗೂ ಇದೆ, ಎಲ್ಲ ಮುಖಂಡರು, ಅಭಿಮಾನಿಗಳಿಗೂ ಅವರ ನಾಯಕ ಸಿಎಂ ಆಗಬೇಕೆಂಬ ಆಸೆ ಸಹಜ, ಇದಕ್ಕೂ ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು, ಜಮೀರ್ ಅಹ್ಮದ್ ಪಕ್ಷದ ಅಧ್ಯಕ್ಷರ ಸೂಚನೆ ಪಾಲಿಸಬೇಕು ಎಂದರು.

    ಸಿಎಂ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಎಂದು ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ, ಜಮೀರ್ ವಿರುದ್ಧ ಕ್ರಮಕೈಗೊಳ್ಳುವಂತಹದ್ದು ಏನೂ ಆಗಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ತರುವುದು ನಮ್ಮ ಗುರಿ. ಯಾವುದೇ ಬಣಕ್ಕೂ ಅವಕಾಶವಿಲ್ಲ ಎಂದರು.

    ಭಿನ್ನಾಭಿಪ್ರಾಯಗಳಿದ್ದು ನಮ್ಮ ಪಕ್ಷದ ಉಸ್ತುವಾರಿ ಸರ್ಜೆವಾಲ್ ರಾಜ್ಯಕ್ಕೆ ಆಗಮಿಸಿ ಸರಿಪಡಿಸುತ್ತಾರೆ, ಬಿಜೆಪಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದ್ದು ಕಾಂಗ್ರೆಸ್ ಅಧಿಕಾರ ಹಿಡಿಯುವ ವಾತಾವರಣ ರಾಜ್ಯದೆಲ್ಲೆಡೆ ಕಾಣಿಸುತ್ತಿದೆ ಎಂದರು.

    ರಾಜ್ಯದಲ್ಲಿ ಕೋವಿಡ್‌ನಿಂದ ಜನತೆ ತತ್ತರಿಸಿದ್ದಾರೆ, ಸರ್ಕಾರ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುವಲ್ಲಿ ಸಂಪೂರ್ಣ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ಕಾಂಗ್ರೆಸ್ ಜನರ ಬಳಿ ಹೋಗಿ, ಅವರ ಕಷ್ಟಗಳಿಗೆ ಸ್ಪಂದಿಸುತ್ತಿದೆ. ಬಡವರಿಗೆ, ಅಗತ್ಯವಿರುವವರಿಗೆ ದಿನಸಿಕಿಟ್, ಹೆಲ್ತ್ ಕಿಟ್ ನೀಡಿ ಸಹಾಯ ಹಸ್ತ ಚಾಚಿದೆ ಎಂದರು.

    ಬಡವರಿಗೆ ನೆರವಾಗುವುದು ಕರ್ತವ್ಯ: ಕರೊನಾ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ವಾನವೀಯ ದೃಷ್ಟಿಯಿಂದ ನೆರವಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದ ಗೊಲ್ಲಹಳ್ಳಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೊರಟಗೆರೆ ಕ್ಷೇತ್ರದ ಬಡವರಿಗೆ ದಿನಸಿಕಿಟ್ ವಿತರಣೆಗೆ ತೆರಳಿದ ಟ್ರಕ್‌ಗಳಿಗೆ ಚಾಲನೆ ನೀಡಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಸಾವಿರಾರು ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆಗೆ ಮುಂದಾಗಿದೆ. ಸೋಮವಾರದಿಂದ ಕ್ಷೇತ್ರದಲ್ಲಿ ವಿತರಣೆ ನಡೆಯಲಿದೆ ಎಂದರು. ಈ ಕರೊನಾ ಸಂಕಷ್ಟದಲ್ಲಿ ಜನರಿಗೆ ಸರ್ಕಾರಕ್ಕಿಂತಲೂ ಸಂ, ಸಂಸ್ಥೆಗಳು, ವಿರೋಧ ಪಕ್ಷಗಳು ಮುಖಂಡರು, ಕಾರ್ಯಕರ್ತರು ಹೆಚ್ಚಿನ ನೆರವಾಗುವ ಮೂಲಕ ಜನರ ಸಂಕಷ್ಟದಲ್ಲಿ ತಾವು ಭಾಗಿಯಾಗಿರುವುದು ಉತ್ತಮ ಸಂದೇಶ ನೀಡಿದೆ, ಭವಿಷ್ಯದಲ್ಲಿಯೂ ಎದುರಾಗಬಹುದಾದ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಜನರೊಂದಿಗೆ ಇರಲಿದೆ ಎಂದರು.

    ಲಾಕ್‌ಡೌನ್ ಅನಿವಾರ್ಯತೆಯಿಂದ ಬಹಳಷ್ಟು ಜನರಿಗೆ ಆಹಾರ, ಔಷಧ ಖರೀದಿಸಲು ತೊಂದರೆಯಾಯಿತು. ಕೃಷಿ ವಾಡುವವರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಕಾಡಿದರೆ, ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ಶಕ್ತಿ ಮೀರಿ ಸಹಾಯ ವಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
    ಕರೊನಾ ನಿಗ್ರಹಕ್ಕೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸೇರಿ ಎಲ್ಲ ಇಲಾಖೆಗಳು ಬಹಳಷ್ಟು ಶ್ರಮ ವಹಿಸಿ ಜೀವನವನ್ನೇ ಮುಡುಪಾಗಿಟ್ಟು ಕೆಲಸ ವಾಡುತ್ತಿದ್ದಾರೆ. ನನ್ನ ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕೆಂಬ ಉದ್ದೇಶದಿಂದ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ 10 ವೈದ್ಯರನ್ನು ನಿಯೋಜಿಸಿ ಪ್ರತಿ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಮೆಡಿಕಲ್ ಕಿಟ್ ನೀಡಿ, ಅವರಿಗೆ ತೊಂದರೆ ಇದ್ದರೆ ಧೈರ್ಯ ಹೇಳಿ ಆಸ್ಪತ್ರೆಗೆ ಕರೆತರುವ ಕೆಲಸವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts