More

    ‘ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಯಾಕೆ ಬೇಕು?’ ಲೋಕಸಭೆಯಲ್ಲಿ ಪ್ರಜ್ವಲ್ ರೇವಣ್ಣ ಪ್ರಶ್ನೆ

    ನವದೆಹಲಿ : ಇಂದು ಲೋಕಸಭೆಯಲ್ಲಿ ಕೂಡ ಕರ್ನಾಟಕದ ಮೇಕೆದಾಟು ಯೋಜನೆ ವಿಚಾರ ಪ್ರತಿಧ್ವನಿಸಿತು. ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು, ನಮ್ಮ ರಾಜ್ಯಕ್ಕೆ ನಿಗದಿಪಡಿಸಿರುವ ನೀರನ್ನು ಬಳಸಿ ಮಾಡಬೇಕೆಂದಿರುವ ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಕೋರುವ ಅಗತ್ಯವೇನಿದೆ ಎಂದು ಕೇಂದ್ರ ಜಲಶಕ್ತಿ ಸಚಿವರನ್ನು ಪ್ರಶ್ನಿಸಿದರು.

    ಪ್ರಶ್ನೋತ್ತರ ವೇಳೆಯಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿದ ಪ್ರಜ್ವಲ್​ ಅವರು, “ಕಾವೇರಿ ನ್ಯಾಯಾಧಿಕರಣ ಪ್ರಾಧಿಕಾರದ ಆದೇಶದಲ್ಲಿ ಕರ್ನಾಟಕಕ್ಕೆ ಅಲೊಕೇಟ್​ ಆಗಿರುವ ನೀರಿಗಾಗಿ ಅಣೆಕಟ್ಟು ಕಟ್ಟಲು ಕೆಳಮಟ್ಟದಲ್ಲಿರುವ ರಾಜ್ಯಗಳ ಅನುಮತಿ ಪಡೆಯಬೇಕೆಂದು ಎಲ್ಲೂ ಬರೆದಿಲ್ಲ. ನಮಗೆ ನೀಡಲಾಗಿರುವ ನೀರಿನ ಪ್ರಮಾಣದಲ್ಲಿ ಯೋಜನೆ ಮಾಡುತ್ತಿದ್ದೇವೆ. ಪ್ರಾಧಿಕಾರದ ಅಥವಾ ಸುಪ್ರೀಂ ಕೋರ್ಟ್​ನ ಯಾವುದೇ ಆದೇಶವನ್ನು ಉಲ್ಲಂಘಿಸುತ್ತಿಲ್ಲ. ಆದ್ದರಿಂದ ತಮಿಳುನಾಡಿನ ಅನುಮತಿ ಪಡೆಯುವ ಅವಶ್ಯಕತೆ ಏನಿದೆ” ಎಂದು ಕೇಳಿದರು.

    ಇದನ್ನೂ ಓದಿ: ಜೆಸಿಎಂ ಹೆಗಲಿಗೆ ಜಿಲ್ಲಾ ಉಸ್ತುವಾರಿ? ; ನಾಗೇಶ್‌ಗೆ ಹಾಸನ ಜವಾಬ್ದಾರಿ ? ; ಎರಡ್ಮೂರು ದಿನದಲ್ಲಿ ನೇಮಕ ಅಂತಿಮ

    ಕೇಂದ್ರ ಜಲಶಕ್ತಿ ಸಚಿವರು, ಮೇಕೆದಾಟು ಅಣೆಕಟ್ಟು ಯೋಜನೆ ನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರ ಪಿಎಫ್​ಆರ್​ ಸಲ್ಲಿಸಿದ ನಂತರ ಅದರಂತೆ ಡಿಪಿಆರ್​ ಮಾಡುವ ಅನುಮತಿ ಕೊಟ್ಟಾಗ, ಅದು ಷರತ್ತುಗಳ ಮೇಲೆ ನೀಡಿದ ಅನುಮತಿಯಾಗಿತ್ತು. ಅಂತರರಾಜ್ಯ ನದಿ ಪ್ರದೇಶದಲ್ಲಿ ಮಾಡಲಾಗುವ ಯೋಜನೆಯಾದ್ದರಿಂದ ಎಲ್ಲಾ ಕೆಳಮಟ್ಟದಲ್ಲಿರುವ ರಾಜ್ಯಗಳ ಅನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿತ್ತು ಎಂದು ಉತ್ತರಿಸಿದರು.

    ಭಾರತಕ್ಕೆ ಅಮೆರಿಕದ ಮಿಷನ್ ಡೈರೆಕ್ಟರ್​ ಆಗಿ ವೀಣಾ ರೆಡ್ಡಿ ಕಾರ್ಯಾರಂಭ

    ಜಮೀರ್​ ನಿವಾಸಕ್ಕೆ ಇಡಿ ದಾಳಿ: ಸಿಎಂ ಬೊಮ್ಮಾಯಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts