More

    ಪೆಲ್ವಿಕ್​ ಅಂಗಗಳನ್ನು ಬಲಪಡಿಸಲು ಸರಳವಾದ ‘ಶಲಭಾಸನ’ ಮಾಡಿ!

    ಕೆಳಗಿನ ಬೆನ್ನು, ಹೊಟ್ಟೆ, ಯಕೃತ್​​ ಮತ್ತು ಕರುಳಿನ ಉತ್ತಮ ಕಾರ್ಯನಿರ್ವಹಣೆಗೆ ಸಹಕಾರಿಯಾದುದು, ಶಲಭಾಸನ. ಶಲಭ ಅಂದರೆ ಮಿಡತೆ. ಈ ಆಸನದಲ್ಲಿ ಮಿಡತೆಯ ಆಕಾರವನ್ನು ಹೋಲುವ ಭಂಗಿ ಇರುತ್ತದೆ. ಇಂಗ್ಲೀಷಿನಲ್ಲಿ ಇದಕ್ಕೆ ಲೋಕಸ್ಟ್​ ಪೋಸ್​ ಎಂದು ಕರೆಯುತ್ತಾರೆ. ಪೆಲ್ವಿಕ್​ ಅಂಗಗಳನ್ನು ಬಲಪಡಿಸುವ ಆಸನವಿದು.

    ಪ್ರಯೋಜನಗಳು: ಶಲಭಾಸನವು ಮಧ್ಯಂತರ ಬೆನ್ನಿನ ಭಾಗವನ್ನು ಬಾಗಿಸುವಂತಹ ಭಂಗಿಯಾಗಿದೆ. ಈ ಆಸನದಿಂದ ಮುಖ್ಯವಾಗಿ ಬೆನ್ನಿನ ಕೆಳಭಾಗದ ಸ್ನಾಯುಗಳು ಬಲಗೊಳ್ಳುತ್ತವೆ. ತೊಡೆ, ಮಂಡಿ, ಕಾಲುಗಳ ತೊಂದರೆ ಹತೋಟಿಗೆ ಬರುತ್ತದೆ. ಬೆನ್ನು ಮತ್ತು ಸೊಂಟ ನೋವು ನಿಯಂತ್ರಣವಾಗುತ್ತದೆ. ಹೊಟ್ಟೆಯ ಅಂಗಗಳು ಬಲಗೊಳ್ಳುತ್ತವೆ. ಪೃಷ್ಠದ ಸ್ನಾಯುಗಳು ಬಿಗಿಗೊಳ್ಳುತ್ತವೆ. ಹಸಿವು ಉತ್ತಮಗೊಳ್ಳುತ್ತದೆ.

    ಇದನ್ನೂ ಓದಿ: ಆಗಸ್ಟ್​ 24ರವರೆಗೆ ಯುಎಇಗೆ ಈ ಏರ್​​ಲೈನ್ಸ್​ನ ವಿಮಾನಗಳಿಗೆ ಪ್ರವೇಶವಿಲ್ಲ

    ಮಧುಮೇಹ ಹಾಗೂ ಮಲಬದ್ಧತೆಯ ನಿಯಂತ್ರಣಕ್ಕೆ ಈ ಆಸನದ ಅಭ್ಯಾಸ ಸಹಕಾರಿಯಾಗುತ್ತದೆ. ಕಿಬ್ಬೊಟ್ಟೆಯ ಕೊಬ್ಬು ಕರಗಲು ಸಹಕಾರಿ. ಕುತ್ತಿಗೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಮೂತ್ರದೋಷ ನಿಯಂತ್ರಿಸುತ್ತದೆ. ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

    ಅಭ್ಯಾಸ ಕ್ರಮ: ಕಾರ್ಪೆಟ್​ ಮೇಲೆ ಮಕರಾಸನದಲ್ಲಿ ಮಲಗುವುದು. ಎರಡೂ ಕಾಲುಗಳನ್ನು ಜೋಡಿಸುವುದು. ಎರಡೂ ಕೈಗಳನ್ನು ನೇರವಾಗಿಸಿ, ಮುಷ್ಠಿ ಮಾಡಿಕೊಂಡು ಹೊಟ್ಟೆಯ ಕೆಳಗೆ ತಂದಿರಿಸುವುದು. ಗಲ್ಲದ ಕೆಳಭಾಗವನ್ನು ನೆಲಕ್ಕೆ ಒತ್ತಿ ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ, ಸೊಂಟದ ಕೆಳಗಿನ ಭಾಗದಿಂದ ಕಾಲುಗಳನ್ನು ಸಾಧ್ಯವಾದಷ್ಟೂ ಮೇಲಕ್ಕೆ ಎತ್ತುವುದು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರನ್ನು ಬಿಡುತ್ತಾ ನಿಧಾನವಾಗಿ ಕಾಲುಗಳನ್ನಿಳಿಸಿ ವಿಶ್ರಮಿಸಬೇಕು.

    ಇದನ್ನೂ ಓದಿ: ಮತ್ತೆ ಕರಾಳತೆಯ ಭೀತಿ: ತಾಲಿಬಾನ್​ ಆಳ್ವಿಕೆಯಲ್ಲಿ ಹೆಣ್ಣುಮಕ್ಕಳಿಗೆ ಶಾಲೆ, ಉದ್ಯೋಗ ಅಪರಾಧವಾಗಿತ್ತು!

    ಈ ಆಸನ ಅಭ್ಯಾಸ ಮಾಡಿದ ನಂತರ ಸ್ವಲ್ಪ ಹೊತ್ತು ಮಕರಾಸನದಲ್ಲಿ ವಿಶ್ರಮಿಸಬೇಕು. ಒಮ್ಮೆ ಅಭ್ಯಾಸವಾದ ಮೇಲೆ ಎರಡು-ಮೂರು ಬಾರಿ ಮಾಡಬಹುದು. ಹೃದಯ ಸಂಬಂಧೀ ಸಮಸ್ಯೆ ಇರುವವರು, ಹೊಟ್ಟೆಯ ಸರ್ಜರಿ ಆಗಿರುವವರು ಈ ಆಸನವನ್ನು ಅಭ್ಯಾಸ ಮಾಡುವುದು ಸೂಕ್ತವಲ್ಲ.

    ಆ.23 ರಿಂದ ರಾಜ್ಯದಲ್ಲಿ ಭಾರೀ ಮಳೆ! ದಕ್ಷಿಣ ಒಳನಾಡಲ್ಲಿ ಯೆಲ್ಲೋ ಅಲರ್ಟ್

    ಕಾಲಿನ ನರಗಳ ಸೆಳೆತ ಮತ್ತು ಬೊಜ್ಜು ನಿವಾರಕ, ಈ ಆಸನ! ಋತುಚಕ್ರದ ದೋಷವನ್ನೂ ಪರಿಹರಿಸುತ್ತದೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts