ಗಂಗಾವತಿ: ನಗರದ 24ನೇ ವಾರ್ಡ್ ಲಕ್ಷ್ಮೀಕ್ಯಾಂಪ್ ಸ.ಹಿ.ಪ್ರಾ.ಶಾಲೆ ಮೈದಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶನಿವಾರ ವಿಶ್ವ ಜನಸಂಖ್ಯೆ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ವಿಪಕ್ಷ ನಾಯಕ ನವೀನ್ ಮಾಲಿ ಪಾಟೀಲ್ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ಮೂಲ ಸೌಕರ್ಯಗಳ ಕೊರತೆ ಎದುರಾಗಲಿದ್ದು, ನೈಸರ್ಗಿಕ ಸಂಪತ್ತಿನ ಮೇಲೂ ಪರಿಣಾಮ ಬೀರಲಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಜನರ ಸಹಕಾರ ಮುಖ್ಯವಾಗಿದ್ದು, ಇಲಾಖೆ ಆಧಿಕಾರಿಗಳು ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಕುಟುಂಬ ಕಲ್ಯಾಣ ಜಿಲ್ಲಾ ಅನುಷ್ಠಾನಾಧಿಕಾರಿ ಡಾ.ರವೀಂದ್ರ ನಾಥ ಮಾತನಾಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ, ವೈದ್ಯರಾದ ಡಾ.ರಮೇಶ, ಡಾ.ಶಬ್ರಿನ್, ಆರೋಗ್ಯ ಕಾರ್ಯಕರ್ತ ವೀರೇಶ, ಮುಖ್ಯಶಿಕ್ಷಕ ಮಾನಮ್ಮ ಪತ್ತಾರ್, ಆಶಾ ಕಾರ್ಯಕರ್ತೆಯರಾದ ವಿಜಯಲಕ್ಷ್ಮೀ ಆಚಾರ್ಯ, ಸುಮಾ, ಮೀನಾಕ್ಷಿ, ಸರೋಜಾಬಾಯಿ, ಗೌಸಿಯಾ, ದೀಪಾ, ಗಾಯಿತ್ರಿ, ಸವಿತಾ ಇತರರಿದ್ದರು.