More

    ರಾಜಕಾರಣದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದರೆ ದ್ವೇಷ ಭಾಷಣ ನಿಲ್ಲುತ್ತದೆ: ಸುಪ್ರೀಂ ಕೋರ್ಟ್​

    ನವದೆಹಲಿ: ರಾಜಕಾರಣಿಗಳು ರಾಜಕಾರಣದಲ್ಲಿ ಧರ್ಮವನ್ನು ಬಳಸುವುದನ್ನು ನಿಲ್ಲಿಸಿದರೆ ದ್ವೇಷ ಭಾಷಣಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯಪಟ್ಟಿದೆ.

    ದ್ವೇಷ ಭಾಷಣ ಕುರಿತು ಶಾಹೀನ್​ ಅಬ್ದುಲ್ಲಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಂ.ಜೋಸೆಫ್​, ಜಸ್ಟಿಸ್​ ಬಿ.ವಿ.ನಾಗರತ್ನ ಅವರಿದ್ದ ದ್ವಿಸದಸ್ಯ ಪೀಠವು ಮಾಜಿ ಪ್ರಧಾನ ಮಂತ್ರಿಗಳಾದ ಜವಾಹರಲಾಲ್​ ನೆಹರೂ, ಅಟಲ್​ ಬಿಹಾರಿ ವಾಜಪೇಯಿ ಅವರ ಭಾಷಣಗಳನ್ನು ಕೇಳಲು ಜನರು ದೂರದ ಪ್ರದೇಶಗಳಿಂದ ಬರತುತ್ತಿದ್ದರು ಎಂದು ಉಲ್ಲೇಖಿಸಿದರು.

    ಇದನ್ನೂ ಓದಿ: ಟೆಕ್​ ದೈತ್ಯ ಗೂಗಲ್​ಗೆ ಬಿತ್ತು ಭಾರಿ ಮೊತ್ತದ ದಂಡ; CCI ಆದೇಶ ಎತ್ತಿ ಹಿಡಿದ NCLAT

    ಕೆಲವರು ದ್ವೇಷ ಭಾಷಣಗಳನ್ನು ಮಾಡುವ ಮೂಲಕ ಸಮಾಜದ ಶಾಂತಿ-ಸೌಹಾರ್ದತೆ ಕದಡಲು ಪ್ರಯತ್ನಿಸುತ್ತಾರೆ. ಜನರು ಇಂಥವುಗಳಿಂದ ತಮ್ಮನ್ನು ತಾವು ನಿಗ್ರಹಿಸಬೇಕು ಎಂದು ನ್ಯಾಯಪೀಠ ಹೇಳಿದೆ.

    ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ಕೇರಳದಲ್ಲಿ ನಿರ್ದಿಷ್ಟವಾದ ಸಮುದಾಯದ ವಿರುದ್ದ ಮಾಡಿದ ಭಾಷಣವನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿದರು. ಅರ್ಜಿದಾರರಾದ ಶಾಹೀನ್​ ಅಬ್ದುಲ್ಲಾ ಅವರು ದ್ವೇಷ ಭಾಷಣಗಳ ಆಯ್ದ ಘಟನೆಗಳನ್ನು ನ್ಯಾಯಾಲಯಕ್ಕೆ ತೋರಿಸಿದ್ದಾರೆ ಎಂದು ವಾದವನ್ನು ಮಂಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts