More

    ಭೂಮಿ ಪೂಜೆಗೆ ರಾಜಕೀಯ ಮೇಲಾಟ

    ಮಸ್ಕಿ: ರಾಷ್ಟ್ರೀಯ ಹೆದ್ದಾರಿ 150ಎ ಪಟ್ಟಣದಲ್ಲಿ ಹಾದು ಹೋಗಿರುವ ಅಶೋಕ ವೃತ್ತದಿಂದ ಎಪಿಎಂಸಿವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕಾಗಿ ಡಿವೈಡರ್ ಅಳವಡಿಸಲು ಭೂಮಿ ಪೂಜೆಯನ್ನು ಇನ್ನೆರಡು ದಿನದಲ್ಲಿ ಮಾಡುವುದಾಗಿ ಸಂಸದ ಕರಡಿ ಸಂಗಣ್ಣ ತಿಳಿಸಿದರು.
    ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ರಸ್ತೆ ವಿಸ್ತರಣೆ ಸ್ಥಳದ ಮಾಹಿತಿಯನ್ನು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ದಸ್ತಗೀರ ಮೇಲಿನಮನಿ ಅವರಿಂದ ಪಡೆದು ಭೂಮಿ ಪೂಜೆ ದಿನಾಂಕ ನಿಗದಿ ಮಾಡುವುದಾಗಿ ತಿಳಿಸಿದರು.

    ಇದನ್ನೂ ಓದಿ: ಮುಂಬಯಿ-ಸೋಲಾಪುರ ವಂದೇ ಭಾರತ್ ರೈಲು ಕಲಬುರಗಿವರೆಗೂ ವಿಸ್ತರಿಸಿ ಸಚಿವರಿಗೆ ಸಂಸದ ಡಾ.ಜಾಧವ ಒತ್ತಡ

    ರಸ್ತೆ ವಿಸ್ತರಣೆ ಮತ್ತು ಡಿವೈಡರ್ ಅಳವಡಿಕೆ, ಡ್ರೈನೇಜ್, ಪಾದಚಾರಿಗಳ ರಸ್ತೆ ಬಗ್ಗೆ ಹೆದ್ದಾರಿ ಇಂಜಿನಿಯರ್ ದಸ್ತಗೀರ ಮೇಲಿನ ಮನಿ, ಸಂಸದರಿಗೆ ಮಾಹಿತಿ ನೀಡಿದರು. ಶಾಸಕ ಪ್ರತಾಪಗೌಡ ಪಾಟೀಲ ಇದ್ದರು.

    ಶಾಸಕರಿಂದ ಇಂದು ಭೂಮಿ ಪೂಜೆ

    ಶಾಸಕ ಆರ್.ಬಸನಗೌಡ ತುರ್ವಿಹಾಳ ಜು.16ರಂದು ಮಸ್ಕಿಯ ಅಶೋಕ ವೃತ್ತದ ಬಳಿ ಡಿವೈಡರ್ ಭೂಮಿಪೂಜೆ ಹಮ್ಮಿಕೊಂಡಿದ್ದಾರೆ. ಇದರಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಶಾಸಕರ ಆಪ್ತ ಕಾರ್ಯದರ್ಶಿ ಪತ್ರಿಕೆಗೆ ತಿಳಿಸಿದ್ದಾರೆ. ಡಿವೈಡರ್ ಅಳವಡಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಣವನ್ನು ನಾನು ಬಿಡುಗಡೆ ಮಾಡಿಸಿದ್ದು ನಾನು ಭೂಮಿಪೂಜೆ ಮಾಡುವೆ ಎಂದು ಅಧಿಕಾರಿಗಳಿಗೆ ಸಂಸದರು ಸೂಚಿಸಿದ್ದಾರೆ ಎನ್ನಲಾಗಿದೆ. ಶಾಸಕರು ಭಾನುವಾರ ಭೂಮಿಪೂಜೆ ಮಾಡುವ ಮೂಲಕ ಮೇಲುಗೈ ಸಾಧಿಸಲು ಹೊರಟಂತಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಡಿವೈಡರ್ ಅಳವಡಿಕೆ ಎರಡು ಬಾರಿ ಪೂಜೆಗೊಳ್ಳತ್ತಾ ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts