More

    ನಾನು ಆರ್ಮಿ ಮೇಜರ್, ನನ್ನನ್ನು ಬಂಧಿಸಲು ಸಾಧ್ಯವಿಲ್ಲವೆಂದ.. ಆದರೂ ಬಂಧನಕ್ಕೊಳಗಾದ.. ಏನಿದರ ಅಸಲಿಯತ್ತು?

    ನವದೆಹಲಿ:ಭಾರತೀಯ ಸೇನೆಯಲ್ಲಿ ಮೇಜರ್ ಆಗಿರುವಂತೆ ನಟಿಸಿದ 23 ವರ್ಷದ ಯುವಕನನ್ನು ದೆಹಲಿಯಲ್ಲಿ ಬಂಧಿಸಲಾಗಿದ್ದು, ಆತನಿಂದ ನಕಲಿ ಗುರುತಿನ ಚೀಟಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
    ಸೂರಜ್ ತಿವಾರಿ ವಿರುದ್ಧ ಗುರುವಾರ ಅಪರಾಧವೊಂದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದಾಗ ಈ ವಂಚನೆ ಬೆಳಕಿಗೆ ಬಂದಿದ್ದು, ಈತನನ್ನು ಬಂಧಿಸಲಾ‘ಗಿದೆ.
    ಇದು ಜಾಮೀನು ಪಡೆಯಹುದಾದಅಪರಾಧವಾದ್ದರಿಂದ, ಜಾಮೀನು ಪಡೆಯಲು ಶ್ಯೂರಿಟಿ ಠೇವಣಿ ಮಾಡಲು ಆತನಿಗೆ ತಿಳಿಸಲಾಯಿತು. ಆದರೆ ಆರೋಪಿ ತಾನು ಭಾರತೀಯ ಸೇನೆಯಲ್ಲಿ ಮೇಜರ್ ಎಂದು ಹೇಳಿ ಗುರುತಿನ ಚೀಟಿ ತೋರಿಸಿದ್ದರಿಂದ ಪೊಲೀಸರು ಆತನನ್ನು ಬಂಧಿಸಲಾಗಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಇದನ್ನೂ ಓದಿ:  ಸಂಬಂಧದಲ್ಲಿ ಮದುವೆ ಬೇಡ ಎಂದಿದ್ದಕ್ಕೆ ಅವರಿಬ್ಬರೂ ಓಡಿಹೋದರು.. ಮುಂದೆ?

    “ಗುರುತಿನ ಚೀಟಿಯ ಕಾಗದದ ಕಳಪೆ ಗುಣಮಟ್ಟದ್ದಾಗಿದ್ದು ಅದು ಅನುಮಾನವನ್ನು ಹುಟ್ಟುಹಾಕಿತು. ಪೊಲೀಸರು ಆತನನ್ನು ವಿಚಾರಿಸಿದಾಗ ಅದು ನಕಲಿ ಎಂದು ಆತ ಒಪ್ಪಿಕೊಂಡ. ಪ್ರೇಮ್ ನಗರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ರೋಹಿಣಿ) ಪಿ ಕೆ ಮಿಶ್ರಾ ಹೇಳಿದ್ದಾರೆ.
    ಆತ ತನ್ನ ಶಾಲಾ ದಿನಗಳಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಗೆ ಸೇರಿದ್ದ ಮತ್ತು ಡೆಹ್ರಾಡೂನ್‌ ಐಎಂಎಗೆ ಒಮ್ಮೆ ಭೇಟಿ ನೀಡಿದ್ದು, ಅದರಿಂದ ಆಕರ್ಷಣೆಗೊಂಡ ಆತ ಅಂಥ ಸಮವಸ್ತ್ರ ಧರಿಸಲು ಆಗಾಧ ಒಲವನ್ನು ಬೆಳೆಸಿಕೊಂಡಿದ್ದಾಗಿ ತಿಳಿದುಬಂದಿದೆ ಎಂದು ಡಿಸಿಪಿ ಹೇಳಿದರು.
    ಆದರೆ, ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಲು ಆತನಿಗೆ ಯಾವುದೇ ಶೈಕ್ಷಣಿಕ ಅರ್ಹತೆ ಇರಲಿಲ್ಲ. ಆದ್ದರಿಂದ, ಆತ ನಕಲಿ ಐಡಿ ಪಡೆದು ಮೇಜರ್ ಆಗಿ ನಟಿಸಿದ್ದಾನೆ ಎಂದು ಮಿಶ್ರಾ ಹೇಳಿದರು.
    ನಕಲಿ ಗುರುತಿನ ಚೀಟಿ ತಯಾರಿಸುವಲ್ಲಿ ರಕ್ಷಣಾ ಸಚಿವಾಲಯದ ಯಾವುದಾದರು ಸಿಬ್ಬಂದಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಭೂತಾನ್​ ಮೂಲಕ ಭಾರತದ ಮೇಲೆ ಒತ್ತಡ ಹೇರುವ ಚೀನಾ ತಂತ್ರ; ಅದಕ್ಕೇ ತಿರುಮಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts