More

    ಯಾರ ತಂದೆ-ತಾತನ ಬಗ್ಗೆಯೂ ಮಾತನಾಡಿರಲಿಲ್ಲ, ಮಾತಾಡಿದ್ದು ಹಿಂದಿನ ಪ್ರಧಾನಿ ಬಗ್ಗೆ: ಮೋದಿ

    ನವದೆಹಲಿ: ಕೆಲವು ಸಮಾಜವಾದಿಗಳನ್ನು ನಕಲಿ ಹಾಗೂ ಪರಿವಾರವಾದಿಗಳು ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ವಂಶರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ ಎಂಬುದಾಗಿ ಹೇಳಿದ್ದಾರೆ.

    ಮಾಧ್ಯಮಸಂಸ್ಥೆಯೊಂದರ ನೇರಾನೇರ ಸಂದರ್ಶನದಲ್ಲಿ ಭಾಗಿಯಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮ್ಮ ಆಡಳಿತ, ಅನಿಸಿಕೆ, ಅನುಭವ ಸೇರಿ ಹಲವಾರು ವಿಷಯಗಳ ಬಗ್ಗೆ ಹಂಚಿಕೊಂಡಿದ್ದಾರೆ.

    ಸಮಾಜವಾದ ಎಂದು ಹೇಳುವ ಅನೇಕರದ್ದು ನಕಲಿ ಸಮಾಜವಾದ, ಅಸಲಿನಲ್ಲಿ ಅವರದ್ದು ಪರಿವಾರವಾದ ಎಂದು ಟೀಕಿಸಿರುವ ಅವರು ನಿಜವಾದ ಸಮಾಜವಾದ ಎಂದರೆ ಏನು ಎಂಬುದನ್ನು ಹೇಳಿದ್ದಾರೆ. ಲೋಹಿಯಾ, ಜಾರ್ಜ್​ ಫೆರ್ನಾಂಡಿಸ್, ನಿತೀಶ್​ಕುಮಾರ್ ಕುಟುಂಬಸ್ಥರನ್ನು ನೀವು ರಾಜಕಾರಣದಲ್ಲಿ ನೋಡುತ್ತಿದ್ದೀರಾ? ಅದು ನಿಜವಾದ ಸಮಾಜವಾದ ಎಂದಿರುವ ಮೋದಿ, ವಂಶರಾಜಕಾರಣ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆ ಎಂದು ಹೇಳಿದ್ದಾರೆ.

    ನಾನು ಯಾರ ತಂದೆ-ತಾತನ ಬಗ್ಗೆ ಮಾತನಾಡಿರಲಿಲ್ಲ. ಹಿಂದಿನ ಪ್ರಧಾನಿ ಏನು ಮಾಡಿದ್ದಾರೆ ಎಂದಷ್ಟೇ ಹೇಳಿದ್ದೆ. ಅವರು ಏನು ಮಾಡಿದ್ದರು ಎಂಬುದನ್ನು ತಿಳಿಯುವುದು ದೇಶದ ಹಕ್ಕು. ನಾವು ಮಾತನಾಡದಿದ್ದರೆ ಅವರು ನೆಹರು ಹೆಸರನ್ನು ಹೇಳಿಲ್ಲ ಎಂದು ಹೇಳುತ್ತಾರೆ. ಒಂದು ವೇಳೆ ಹೆಸರು ಹೇಳಿದರೆ ಆಗಲೂ ಅವರಿಗೆ ಸಮಸ್ಯೆ, ಅವರ ಹೆದರಿಕೆ ಏನು ಅಂತ ಅರ್ಥ ಆಗುತ್ತಿಲ್ಲ ಎಂದು ಪ್ರಧಾನಿ ಮೋದಿ ಸೋನಿಯಾ ಕುಟುಂಬ ಕುರಿತು ಪ್ರತಿಕ್ರಿಯಿಸಿದ್ದಾರೆ.

    ಎಲ್ಲರನ್ನೂ ಒಟ್ಟಿಗೇ ಕೊಂಡೊಯ್ಯುವುದು ನನ್ನ ಗುರಿ. ವಿವಿಧತೆಯಲ್ಲಿ ಏಕತೆ ನಮ್ಮ ಮಂತ್ರ ಎಂದಿರುವ ಅವರು ರೈತ ಕಾನೂನುಗಳನ್ನು ರೈತರ ಪ್ರಯೋಜನಕ್ಕಾಗಿ ಮಾಡಲಾಯಿತು. ಆದರೆ ಬಳಿಕ ಅದನ್ನು ರಾಷ್ಟ್ರದ ಹಿತಕ್ಕಾಗಿ ಹಿಂಪಡೆಯಲಾಯಿತು ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ.

    ಹಿಜಾಬ್​ ಕಿಚ್ಚು ಹೊತ್ತಿಸಿದವರ ಶಕ್ತಿಪ್ರದರ್ಶನ: ಅದೇ ಆರು ವಿದ್ಯಾರ್ಥಿನಿಯರಿಂದ ಮತ್ತೆ ತಕರಾರು

    ಹಿಜಾಬ್​-ಕೇಸರಿ ಸಂಘರ್ಷದ ನಡುವೆ ಇದೇನಿದು ಮತ್ತೊಂದು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts