More

    ಮುಂಬರುವ ಸಾಲು ಸಾಲು ಹಬ್ಬಗಳ ಸಮಯದಲ್ಲಿ ಕೋವಿಡ್​ ನಿಯಮಗಳನ್ನು ಮರೆಯದಿರಿ: ಪ್ರಧಾನಿ ಮೋದಿ

    ನವದೆಹಲಿ: ಮುಂಬರುವ ತಿಂಗಳುಗಳಲ್ಲಿ ಸಾಲು ಸಾಲು ಹಬ್ಬಗಳು ಎದುರಾಗಲಿದ್ದು, ಈ ಸಂದರ್ಭದಲ್ಲಿ ಕೊವಿಡ್​-19 ಶಿಷ್ಟಾಚಾರಗಳನ್ನು ಮರೆಯದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಯಲ್ಲಿ ಮನವಿ ಮಾಡಿದರು.

    ಭಾನುವಾರ ಮನ್​ ಕೀ ಬಾತ್​ ರೇಡಿಯೋ ಕಾರ್ಯಕ್ರಮದ 79ನೇ ಆವೃತ್ತಿ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಹಿಂಜರಿಯದೇ ಬಹುದೊಡ್ಡ ಸಂಖ್ಯೆಯಲ್ಲಿ ಕೋವಿಡ್​ ಲಸಿಕೆ ಹಾಕಿಸಿಕೊಳ್ಳಲು ಪ್ರಧಾನಿ ಕರೆ ಕೊಟ್ಟರು. ಲಸಿಕೆ ನಂತರ ಕೆಲವೊಮ್ಮೆ ಜ್ವರ ಕಾಣಿಸಿಕೊಳ್ಳಬಹುದು ಆದರೆ, ಅದು ಸಣ್ಣ ಪ್ರಮಾಣದಲ್ಲಿರುತ್ತದೆ ಮತ್ತು ಅಲ್ಪಾವಧಿ ಆಗಿರುತ್ತದೆ. ಹೀಗಾಗಿ ಹೆದರದೆ ಕರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಪ್ರಧಾನಿ ಹೇಳಿದರು. ಲಸಿಕೆಯನ್ನು ನಿರ್ಲಕ್ಷಿಸಿದರೆ ಮುಂದೆ ಅಪಾಯ ಎದುರಿಸಬಹುದು. ನಿಮ್ಮ ಕುಟುಂಬವನ್ನು ಅಪಾಯಕ್ಕೆ ನೂಕಬಾರದೆಂದರೆ ಎಲ್ಲರೂ ತಪ್ಪದೇ ಲಸಿಕೆ ಪಡೆದುಕೊಳ್ಳಿ ಎಂದರು.

    ಇದೇ ವೇಳೆ ಟೋಕಿಯೋ ಒಲಿಂಪಿಕ್ಸ್​ ಕ್ರೀಡಾಕೂಟದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳನ್ನು ಹುರಿದುಂಬಿಸಿ ಎಂದು ಕರೆ ನೀಡಿದರು.

    ಮುಂಬರುವ ಸಾಲು ಸಾಲು ಹಬ್ಬಗಳ ಬಗ್ಗೆ ಎಲ್ಲರಿಗೂ ಈಗಲೇ ಶುಭಕೋರುತ್ತೇನೆ. ಮಹಾಮಾರಿ ಕರೊನಾ ವೈರಸ್​ ಇನ್ನು ಅಂತ್ಯವಾಗಿಲ್ಲ ಮತ್ತು ನಮ್ಮ ನಡುವೆಯೇ ಇದೆ ಎಂಬುದು ಹಬ್ಬದ ಸಂತೋಷ ಸಮಯದಲ್ಲಿ ನೆನಪಿರಲಿ. ಕರೊನಾ ಸಂಬಂಧಿತ ಶಿಷ್ಟಾಚಾರಗಳನ್ನು ಪಾಲಿಸುವುದನ್ನು ಮರೆಯಬಾರದು ಎಂದು ಮನವಿ ಮಾಡಿದರು.

    ನೀರಿನ ಸಂರಕ್ಷಣೆಯನ್ನು ನಿಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದ ಪ್ರಧಾನಿ ಮೋದಿ, ಮುಂದಿನ ಪೀಳಿಗೆಗಾಗಿ ನೀರನನ್ನು ಸಂರಕ್ಷಿಸುವ ಅವಶ್ಯಕತೆ ಇದೆ ಎಂದು ಹೇಳಿದರು. (ಏಜೆನ್ಸೀಸ್​)

    ಎದುರುಮನೆ ಯುವಕನ ಪರಿಚಯ: ಹೆಣ್ಣು ಮಕ್ಕಳೊಂದಿಗೆ ಮನೆಬಿಟ್ಟ ಮಹಿಳೆಯಿಂದ ಪತಿಗೆ ಶಾಕ್​!

    ಸಂಜೆ ಹೈಕಮಾಂಡ್​ನಿಂದ ಸಂದೇಶ ಬರಲಿದ್ದು, ಬಳಿಕ ಏನಾಗಲಿದೆ ಎಂದು ನಿಮಗೇ ಗೊತ್ತಾಗುತ್ತೆ: ಸಿಎಂ ಬಿಎಸ್​ವೈ

    ಆಗಸ್ಟ್​ 15ರಿಂದ ಈ ರಾಜ್ಯದಲ್ಲಿ ಉಚಿತ ವೈಫೈ: ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಉಡುಗೊರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts