More

    ಈ ಬಾರಿ ರಕ್ಷಾ ಬಂಧನಕ್ಕೆ ಪ್ರಧಾನಿ ಮೋದಿ ಬಯಸಿರುವ ಉಡುಗೊರೆ ಏನು ಗೊತ್ತೇ?

    ನವದೆಹಲಿ: ಕಳೆದ ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ ಕ್ರೀಡಾಪಟುಗಳನ್ನು ಹುರಿದುಂಬಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳಿಗೂ ಮಂಗಳವಾರ ಶುಭಹಾರೈಸಿ, ಸ್ಫೂರ್ತಿದಾಯಕ ಮಾತುಗಳನ್ನು ಆಡಿದರು. ಈ ವೇಳೆ ಅವರು ತಮ್ಮ ತವರು ರಾಜ್ಯದ ಕ್ರೀಡಾಪಟು ಒಬ್ಬರಿಂದ ಈ ವರ್ಷದ ರಕ್ಷಾ ಬಂಧನ ಹಬ್ಬಕ್ಕೆ ವಿಶೇಷ ಉಡುಗೊರೆಯೊಂದನ್ನು ಕೇಳಿದ್ದು ವಿಶೇಷವಾಗಿತ್ತು.

    ಗುಜರಾತ್‌ನ 48 ವರ್ಷದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಾರುಲ್ ದಲ್‌ಸುಖ್‌ಬಾಯಿ ಪಾರ್ಮರ್ ಅವರೊಂದಿಗೆ ಮಾತನಾಡುತ್ತ ಮೋದಿ, ‘ಈ ಬಾರಿ ರಕ್ಷಾ ಬಂಧನಕ್ಕೆ ನಿಮ್ಮ ಅಣ್ಣನಿಗೆ ಉಡುಗೊರೆಯೊಂದನ್ನು ನೀಡುತ್ತೀರಿ ಎಂದು ನಂಬಿರುವೆ’ ಎಂದು ಹೇಳಿದರು. ಈ ಮೂಲಕ ಮುಂಬರುವ ರಕ್ಷಾ ಬಂಧನ ಹಬ್ಬದಂದು ತಮಗೆ ಪದಕದ ಉಡುಗೊರೆ ಬೇಕೆಂದು ಮೋದಿ ಕೇಳಿದರು. ಅಲ್ಲದೆ ಇನ್ನೆರಡು ವರ್ಷಗಳಲ್ಲಿ 50ನೇ ವಯಸ್ಸಿಗೆ ಕಾಲಿಡುತ್ತಿರುವ ನಡುವೆಯೂ ಫಿಟ್ನೆಸ್ ಕಾಯ್ದುಕೊಂಡಿರುವ ಬಗ್ಗೆಯೂ ಪಾರುಲ್‌ಗೆ ಮೆಚ್ಚುಗೆ ಸೂಚಿಸಿದರು.

    ಇದನ್ನೂ ಓದಿ: ಮೋದಿಗೆ ಒಲಿಂಪಿಯನ್‌ಗಳಿಂದ ವಿವಿಧ ಉಡುಗೊರೆ, ಏನೇನು ಕೊಟ್ಟರು ಗೊತ್ತೇ?

    ‘ನೀವೆಲ್ಲರೂ ವಿಜೇತರು, ಎಲ್ಲರಿಗೂ ನೀವೇ ಸ್ಫೂರ್ತಿ ಹಾಗೂ ಮಾದರಿ’ ಎಂದು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿರುವ ಭಾರತದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಹೇಳಿದರು. 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ವರ್ಣ ಜಯಿಸಿದ್ದ ದೇವೇಂದ್ರ ಜಜಾರಿಯಾ ಹಾಗೂ ಮರಿಯಪ್ಪನ್ ತಂಗವೇಲು ಸೇರಿದಂತೆ 10 ಮಂದಿಯೊಂದಿಗೆ ವರ್ಚುವಲ್ ಮೂಲಕ ಮೋದಿ ಮಂಗಳವಾರ ಸಂವಾದ ನಡೆಸಿದರು. ಪ್ಯಾರಾಥ್ಲೀಟ್‌ಗಳ ಕುಟುಂಬ ಸದಸ್ಯರು ಹಾಗೂ ಕೋಚ್‌ಗಳ ಜತೆ ಮೋದಿ ಮಾತನಾಡಿದರು. ಆಗಸ್ಟ್ 24ರಿಂದ ಸೆಪ್ಟೆಂಬರ್ 5ರವರೆಗೆ ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟ ನಡೆಯಲಿದೆ. ಕಳೆದ ಆವೃತ್ತಿಯಲ್ಲಿ ಸ್ವರ್ಣ ಗೆದ್ದಿದ್ದ ತಂಗವೇಲು ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ.

    ಲಾರ್ಡ್ಸ್‌ನಲ್ಲಿ ಕಪಿಲ್ ದೇವ್ ದಾಖಲೆ ಮುರಿದ ಮೊಹಮದ್ ಸಿರಾಜ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts