ಪಿಎಲ್​ಡಿ ಬ್ಯಾಂಕ್ ಆಡಳಿತ ಮಂಡಳಿ ಕೈ ವಶ

ಹಾವೇರಿ: ಸ್ಥಳೀಯ ಪಿಎಲ್​ಡಿ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಲ್ಲಿಕಾರ್ಜುನ ಸಾತೇನಹಳ್ಳಿ, ಉಪಾಧ್ಯಕ್ಷರಾಗಿ ಸುಶೀಲವ್ವ ಕಳ್ಳಿಹಾಳ ಆಯ್ಕೆಯಾಗಿದ್ದಾರೆ.

ಶನಿವಾರ ಆಯೋಜಿಸಿದ್ದ ಚುನಾವಣೆಯಲ್ಲಿ ಹಾವೇರಿ ಬಿನ್ ಸಾಲಗಾರರ ಮತಕ್ಷೇತ್ರದ ನಿರ್ದೇಶಕ ಮಲ್ಲಿಕಾರ್ಜುನ ಸಾತೇನಹಳ್ಳಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇವರು 8 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ, ಎದುರಾಳಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಂಜುನಾಥ ಮಣ್ಣೂರು 7 ಮತಗಳನ್ನು ಪಡೆದು ಸೋತರು.

ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಬೆಂಬಲಿತ ಕರ್ಜಗಿಯ ಸಾಲಗಾರರ ಮತಕ್ಷೇತ್ರದ ನಿರ್ದೇಶಕಿ ಸುಶೀಲವ್ವ ಕಳ್ಳಿಹಾಳ 9 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಡಿಳ್ಳೆಪ್ಪ ಗೊಣ್ಣಿ 6 ಮತಗಳನ್ನು ಪಡೆದು ಪರಾಭವಗೊಂಡರು.

ಪಿಎಲ್​ಡಿ ಬ್ಯಾಂಕ್ ಆಡಳಿತ ಕೈ ವಶವಾದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದ ಎದುರು ಕಾಂಗ್ರೆಸ್ ಮುಖಂಡರು ವಿಜಯೋತ್ಸವ ಆಚರಿಸಿದರು. ಅಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಉಪಾಧ್ಯಕ್ಷೆ ಸುಶೀಲವ್ವ ಗದಿಗೆಪ್ಪ ಕಳ್ಳಿಹಾಳ ಅವರನ್ನು ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಜಿಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಮುಖಂಡರಾದ ಎಸ್​ಎಫ್​ಎನ್ ಗಾಜಿಗೌಡ್ರ, ಈರಪ್ಪ ಲಮಾಣಿ, ಎಂ.ಎಂ. ಮೈದೂರ ಇತರರು ಸನ್ಮಾನಿಸಿದರು.

ಪಿಎಲ್​ಡಿ ಬ್ಯಾಂಕ್ ನಿರ್ದೇಶಕರಾದ ಸುರೇಶ ಚಕ್ರವರ್ತಿ, ಮಹಾದೇವಪ್ಪ ತಳವಾರ, ಗುರುನಾಥ ಮಳ್ಳೂರಮಠ, ಚಂದ್ರಕಾಂತ ಕರ್ಜಗಿ, ಸುನಿಲಕುಮಾರ ಅಟವಾಳಗಿ, ಪರಮೇಶಪ್ಪ ಹಾವೇರಿ, ನಿಂಗಪ್ಪ ತುಕ್ಕಮ್ಮನವರ, ಪರಮೇಶ ಶಿವಣ್ಣನವರ, ಬಸವರಾಜ ಚಾವಡಿ ಇತರರಿದ್ದರು.

Share This Article

Motivation : ಈ ಕಾಲದಲ್ಲಿ ಮೌನವಾಗಿರುವುದು ಒಳ್ಳೆಯದು ಮಾತನಾಡಬೇಡಿ..

ಬೆಂಗಳೂರು: ಮಾತು ಮನುಷ್ಯನಿಗೆ ಮಾತ್ರ ಇರುವ ಶಕ್ತಿ. ಆದರೆ ಈ ಅತ್ಯಮೂಲ್ಯ ( Motivation )…

Fish Eating : ವಾರಕ್ಕೆ ಎರಡು ಬಾರಿಯಾದರೂ ಮೀನು ತಿನ್ನುತ್ತೀರಾ? ಹಾಗಿದ್ರೆ ಈ ಕುರಿತು ತಿಳಿದುಕೊಳ್ಳಿ…

ಬೆಂಗಳೂರು: ಮೀನು ವಿಶ್ವದ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ, ಮೀನುಗಳನ್ನು ವಾರಕ್ಕೆ…

Couples Happiness : ಪತ್ನಿ ತನ್ನ ಪತಿಯ ‘ಈ’ ಭಾಗವನ್ನು ಮುಟ್ಟಲೇಬೇಕು! ಪ್ರತಿದಿನ ಮುಟ್ಟಿದ್ರೆ ಸುಖ,ಪ್ರೀತಿ ಸಿಗುತ್ತೆ!

ಆಚಾರ್ಯ ಚಾಣಕ್ಯರನ್ನು ಭಾರತದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ (Chanakya…