More

    ದೈಹಿಕ, ಮಾನಸಿಕ ಹಿಂಸೆ ಅಪರಾಧ

    ಸಿರವಾರ: ನೆಮ್ಮದಿಯ ಜೀವನಕ್ಕೆ ಕಾನೂನಿನ ಜ್ಞಾನವೂ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶಿವರಾಜ ವಿ.ಸಿದ್ದೇಶ್ವರ್ ಹೇಳಿದರು.
    ಪಟ್ಟಣದ ಮೆಥೋಡಿಸ್ಟ್ ಚರ್ಚ್‌ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.

    ಮನೆಯಲ್ಲಿನ ಹಿರಿಯರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು. ಹಿರಿಯ ನಾಗರಿಕರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಹಿರಿಯ ನಾಗರಿಕರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ನಮ್ಮ ದೇಶದ ಸಂಸ್ಕಾರವನ್ನು ಬೇರೆ ದೇಶದವರು ಅನುಕರಣೆ ಮಾಡುತ್ತಿರುವ ದಿನಗಳಲ್ಲಿ, ಭಾರತದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಪಾಲಕರು ತಮ್ಮ ಜೀವವನ್ನು ತೇಯ್ದು ನಮ್ಮ ಜೀವನ ಕಟ್ಟಿರುತ್ತಾರೆ ಎಂದು ನ್ಯಾಯಾಧೀಶ ಶಿವರಾಜ ವಿ.ಸಿದ್ದೇಶ್ವರ್ ಹೇಳಿದರು.

    ವಕೀಲ ಯಲ್ಲಪ್ಪ ಹಿರೇಬಾದರದಿನ್ನಿ ಉಪನ್ಯಾಸ ನೀಡಿದರು. ಪಿಎಸ್‌ಐ ಗುರುಚಂದ್ರ ಯಾದವ್, ತಾ.ಪಂ. ಕಾರ್ಯದರ್ಶಿ ವೀರೇಶ, ನೀರಾವರಿ ಇಲಾಖೆ ಎಇಇ ವಿಜಯಲಕ್ಷ್ಮೀ ಪಾಟೀಲ್, ವಕೀಲರಾದ ಮಲ್ಲಿಕಾರ್ಜುನ ಪಾಟೀಲ್, ವೆಂಕಟೇಶ ನಾಯಕ ಜಾಲಾಪೂರು, ಶಿವಶರಣ ಲಕ್ಕಂದಿನ್ನಿ, ಕೊರವಯ್ಯ ನಾಯಕ, ಮನೋಹರ ವಿಶ್ವಕರ್ಮ, ವೀರೇಶ ಮಳಗಿ, ಮಲ್ಲೇಶ ಮಾಚನೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts