More

    ಕ್ವಾರಂಟೈನ್‌ ಉಲ್ಲಂಘಿಸಿದರೆ ಕಂಡಲ್ಲಿ ಗುಂಡಿಕ್ಕಿ ಎಂದ ಫಿಲಿಪ್ಪೀನ್ಸ್‌ ಅಧ್ಯಕ್ಷ…!

    ಫಿಲಿಪ್ಪೀನ್ಸ್‌: ಕರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಏನೆಲ್ಲಾ ಕಸರತ್ತು ನಡೆಸಿದರೂ, ಅದನ್ನು ಉಲ್ಲಂಘಿಸುವವರೂ ಅಷ್ಟೇ ಮಂದಿ. ಸೋಂಕು ಹರಡದಂತೆ ಕ್ವಾರಂಟೈನ್‌ನಲ್ಲಿ ಇರಿ ಎಂದರೆ ಅಡ್ಡಾದಿಡ್ಡಿ ರಸ್ತೆಯ ಮೇಲೆ ಅಡ್ಡಾಡುವವರನ್ನು ಕಂಡು ಬೇಸತ್ತ ಫಿಲಿಪ್ಪೀನ್ಸ್‌ ಅಧ್ಯಕ್ಷ ರೊಡ್ರಿಗೋ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಿ ಎಂದು ಆದೇಶಿಸಿದ್ದಾರೆ.

    ‘ಸೋಂಕು ಹರಡದಂತೆ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು. ವೈದ್ಯಕೀಯ ಕಾರ್ಯಕರ್ತರನ್ನು ನಿಂದಿಸುವುದನ್ನು ನಾನೆಂದೂ ಸಹಿಸುವುದಿಲ್ಲ. ಜನರ ಹಿತಾಸಕ್ತಿ ಕಾಪಾಡುವುದು ನನ್ನ ಕರ್ತವ್ಯ. ನಿಮ್ಮ ಜೀವನ ಎಷ್ಟು ತೊಂದರೆಯಲ್ಲಿದೆ ಎನ್ನುವುದನ್ನು ಅರ್ಥ ಮಾಡಿಕೊಂಡು ಮುಂದಡಿ ಇಡಿ, ಇಲ್ಲದಿದ್ದರೆ ನನ್ನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸರಿಗೆ ಎಲ್ಲಾ ಅಧಿಕಾರ ಇದೆ’ ಎಂದು ಬುಧವಾರ ರಾತ್ರಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

    ಸದ್ಯ ಫಿಲಿಪ್ಪೀನ್ಸ್‌ನಲ್ಲಿ ಕೂಡ ಲಾಕ್‌ಡೌನ್‌ ಆದೇಶ ಹೊರಡಿಸಲಾಗಿದೆ. ಅಲ್ಲಿ ಲಾಕ್‌ಡೌನ್‌ ಹಾಗೂ ಕ್ವಾರಂಟೈನ್‌ ಆದೇಶ ಉಲ್ಲಂಘಿಸಿ ಜನರು ಓಡಾಡುವುದು ಕಂಡು ಬಂದಿದೆ. ಅವರನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹಾಗೂ ಮಿಲಿಟಿಯವರು ಪ್ರಯತ್ನಿಸುತ್ತಿದ್ದರೆ ಅಂಥವರ ಮೇಲೆ ಹಲ್ಲೆ ನಡೆಯುತ್ತಿರುವ ಘಟನೆಗಳು ವರದಿಯಾಗಿವೆ. ಇದರಿಂದ ತೀವ್ರ ಆಕ್ರೋಶಗೊಂಡಿರುವ ಅಧ್ಯಕ್ಷರು, ‘ಸಮಸ್ಯೆಯ ಗಂಭೀರತೆಯನ್ನು ನೀವು ಅರಿತುಕೊಳ್ಳಲೇಬೇಕು. ಪೊಲೀಸರು ಮತ್ತು ಮಿಲಿಟರಿ ಪಡೆಗಳ ಜೀವಗಳಿಗೆ ಜನರಿಂದ ತೊಂದರೆ ಇದೆ ಎಂದಾದರೆ ಅಂತವರನ್ನು ಕೊಲ್ಲಿ. ಕೊರೊನಾ ಸೋಂಕಿತರು ಇತರರಿಗೆ ಅಪಾಯ ತಂದೊಡ್ಡುವ ಬದಲು ಸಾಯುವುದೇ ಮೇಲು ಅವರ ಶವ ಸಂಸ್ಕಾರ ನಾವು ನೆರವೇರಿಸುತ್ತೇವೆ’ ಎಂದು ಅಧ್ಯಕ್ಷರು ಹೇಳಿದ್ದಾರೆ.

    ಈ ಮಾತಿಗೆ ಮಾನವ ಹಕ್ಕುಗಳ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ. ‘ಅಧ್ಯಕ್ಷರ ಮಾತುಗಳು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಮುಂದಿನ ದಿನಗಳಲ್ಲಿ ಹಿಂಸಾಚಾರಕ್ಕೆ ನಾಂದಿ ಹಾಡಬಹುದು’ ಎಂದು ನಾವು ಆತಂಕಗೊಂಡಿದ್ದೇವೆ” ಎಂದು ಅದು ಹೇಳಿದೆ. ಫಿಲಿಪ್ಪೀನ್ಸ್‌ನಲ್ಲಿ 2,633 ಕೊರೊನಾ ವೈರಸ್ ಸೋಂಕಿತ ಪ್ರಕರಣ ದೃಢಪಟ್ಟಿದ್ದು, 107 ಮಂದಿ ಮೃತಪಟ್ಟಿದ್ದಾರೆ.

    ಈ ನಡುವೆ, ಲೆಬನಾನ್ ದೇಶಕ್ಕೆ ಫಿಲಿಪ್ಪೀನ್ಸ್‌ ರಾಯಭಾರಿಯಾಗಿದ್ದ ಬರ್ನಾರ್ಡಿಟಾ ಕ್ಯಾಟಲ್ಲಾ ಅವರು ಕೊರೊನಾ ವೈರಸ್‌ನಿಂದಾಗಿ ಇಂದು ಮೃತಪಟ್ಟಿದ್ದಾರೆ. ಸೋಂಕಿನ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.

    ಕ್ಯಾಟಲ್ಲಾ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಫಿಲಿಪ್ಪೀನ್ಸ್‌ ಹಾಗೂ ಲೆಬನಾನ್ ಈ ಎರಡ ದೇಶಗಳ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸಲು ಬರ್ನಾರ್ಡಿಟಾ ಕ್ಯಾಟಲ್ಲಾ ಕೈಗೊಂಡ ಕ್ರಮಗಳು ಸದಾ ಸ್ಮರಣೀಯ ಎಂದು ಸಂತಾಪ ಸೂಚಿಸಿವೆ. (ಏಜೆನ್ಸೀಸ್​)

    ಕರೊನಾ ವೈರಸ್​ ಅವಧಿಯಲ್ಲಿ ತುರ್ತು ಸೇವೆ ಒದಗಿಸಿದ ವಿಮಾನದ ಗಗನ ಸಖಿಯರ ದಿರಿಸು ನೋಡಿ ವಿದೇಶಿಗರು ಗೇಲಿ ಮಾಡಿದ್ದರಂತೆ

    ಕರೊನಾ ವೈರಸ್​ ವಿಚಾರದಲ್ಲಿ ಕಾಂಗ್ರೆಸ್​ ಚಿಲ್ಲರೆ ರಾಜಕಾರಣ ಮಾಡುತ್ತಿದೆ: ಅಮಿತ್​ ಷಾ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts