More

    ಚುನಾವಣಾ ಪ್ರಚಾರ ವೇಳೆ ವೈಯಕ್ತಿಕ ಟೀಕೆ ಸಲ್ಲ

    ಸೊರಬ: ರಾಷ್ಟ್ರೀಯತೆ, ಹಿಂದ್ವುತ ಹಾಗೂ ಅಭಿವೃದ್ಧಿ ಆಧಾರದ ಮೇಲೆ ಬಿಜೆಪಿಯನ್ನು ಜನತೆ ಬೆಂಬಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

    ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಬಿಜೆಪಿ ಹಾಗೂ ಜೆಡಿಎಸ್ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿ, ಅಭಿವೃದ್ಧಿ ಆಧಾರದ ಮೇಲೆ ಚುನಾವಣೆಯನ್ನು ಎದುರಿಸಬೇಕು. ಜನತೆಯ ಎದುರು ನಮ್ಮ ಸಾಧನೆಯನ್ನು ಹೇಳಿ, ಮತ ಯಾಚಿಸಬೇಕು. ಆದರೆ ಶಿಕ್ಷಣ ಸಚಿವರು ಸಾಧನೆಗಳ ಬಗ್ಗೆ ಮಾತನಾಡದೆ, ಹದ್ದು ಮೀರಿ ವೈಯಕ್ತಿಕವಾಗಿ ಟೀಕಿಸುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವಂತಹದಲ್ಲ. ಅವರ ಹೇಳಿಕೆಗಳನ್ನು ಬಿಜೆಪಿ ಖಂಡಿಸುತ್ತದೆ. ಚುನಾವಣೆಯನ್ನು ಹಬ್ಬದಂತೆ ಆಚರಿಸಬೇಕೇ ವಿನಃ, ವೈಯಕ್ತಿಕ ಟೀಕೆ ಮಾಡುತ್ತಾ ಹೋದರೆ ಆರೋಪ-ಪ್ರತ್ಯಾರೋಪಗಳಿಗೆ ಕೊನೆ ಇಲ್ಲದಂತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
    ತಾಲೂಕ ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಾಕಾಲುಕೊಪ್ಪ ಮಾತನಾಡಿ, ವರಿಷ್ಠರ ಸೂಚನೆಯಂತೆ ತಾಲೂಕಿನಲ್ಲಿಯೂ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಒಂದಾಗಿ ಶ್ರಮಿಸುತ್ತಿದ್ದಾರೆ. ಈ ಸಂಬಂಧ ಲೋಕಸಭಾ ಚುನಾವಣೆ ತಾಲೂಕು ಬಿಜೆಪಿ ಉಸ್ತುವಾರಿ ಡಿ.ಎಸ್.ಅರುಣ್ ಹಾಗೂ ಜಿಲ್ಲಾ ಉಸ್ತುವರಿ ರಘುಪತಿ ಭಟ್ಟ ನೇತೃತ್ವದಲ್ಲಿ ಪ್ರತ್ಯೇಕವಾಗಿ ಎರಡು ಪಕ್ಷದ ಮುಖಂಡರ ಸಮನ್ವಯ ಸಭೆ ನಡೆಸಲಾಗಿದೆ. ಇದರಿಂದ ಎರಡು ಪಕ್ಷಗಳು ಸಮನ್ವಯ ಹಾಗೂ ಸೌಹಾರ್ದತೆಯಿಂದ ಚುನಾವಣೆ ಎದರಿಸಲು ಸಜ್ಜಾಗಿವೆ. ಜೆಡಿಎಸ್ ಪಕ್ಷದ ಬೆಂಬಲದಿಂದ ತಾಲೂಕಿನಲ್ಲಿ ಬಿಜೆಪಿಗೆ ಹೆಚ್ಚಿನ ಬಲ ಬಂದಿದೆ ಎಂದರು.
    ಜೆಡಿಎಸ್ ತಾಲೂಕ ಅಧ್ಯಕ್ಷ ಗಣಪತಿ ಟಿ.ಜಿ.ಕೊಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಲಾಗುವುದು. ಈ ಮೂಲಕ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಾಗುವುದು. ಬಿಜೆಪಿ ಜತೆ ಮಾಡಿಕೊಂಡಿರುವ ಮೈತ್ರಿಗೆ ಪೂರಕವಾಗಿ ಸಮನ್ವತೆಯಿಂದ ಕಾರ್ಯನಿರ್ವಹಿಸಲಾಗುವುದು ಎಂದರು.
    ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಜೆಡಿಎಸ್ ಪ್ರಭಾರಿ ಅಣ್ಣಪ್ಪ, ದೇವೇಂದ್ರಪ್ಪ ಚನ್ನಪುರ, ಶ್ರೀಧರ್ ಶೇಟ್, ಅಶೋಕ್ ಶೇಟ್, ನಾಗಪ್ಪ, ತುಳಜಪ್ಪ, ಜಾನಕಪ್ಪ, ಡಿ.ಶಿವಯೋಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts