More

    ಭೂಕಂಪನಕ್ಕೆ ಹೆದರಿ ಊರು ಬಿಡುತ್ತಿರುವ ಜನ; ಜಿಲ್ಲಾಧಿಕಾರಿಯ ಅಭಯಕ್ಕೂ ಕಿವಿಗೊಡದೆ ತೆರಳುತ್ತಿರುವ ಜನತೆ

    ಕಲಬುರಗಿ: ರಾಜ್ಯದ ಕೆಲವೆಡೆ ಮತ್ತೆ ಮತ್ತೆ ಭೂಕಂಪನ ಆಗುತ್ತಿರುವುದು ಕಳೆದ ಕೆಲದಿನಗಳಿಂದ ವರದಿಯಾಗುತ್ತಲೇ ಇದೆ. ಪರಿಣಾಮವಾಗಿ ಎಷ್ಟು ಹೊತ್ತಿಗೆ ಏನಾಗುವುದೋ ಎಂಬ ಭಯದಲ್ಲೇ ಜನರು ಕಾಲಕಳೆಯುತ್ತಿದ್ದಾರೆ. ಅದರಲ್ಲೂ ಈಗ ಕೆಲವು ಪ್ರದೇಶದ ಜನರು ಭೂಕಂಪನದ ಭಯದಿಂದ ಊರು ಕೂಡ ಬಿಡಲಾರಂಭಿಸಿದ್ದಾರೆ.

    ಕಲಬುರಗಿ ಜಿಲ್ಲೆಯ ಚಿಂಚೋಳಿ ಹಾಗೂ ಸೇಡಂ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಕಾರಣ ಅಲ್ಲಿನ ಜನತೆ ಊರು ಬಿಟ್ಟು ಹೋಗಲಾರಂಭಿಸಿದ್ದಾರೆ. ಭೂಕಂಪನ ಆಗಿರುವ ಕೆಲ ಪ್ರದೇಶಗಳಿಗೆ ಕಲಬುರಗಿ ಜಿಲ್ಲಾಧಿಕಾರಿ ಜ್ಯೋತ್ಸ್ನಾ ಭೇಟಿ ನೀಡಿ, ಧೈರ್ಯ ಹೇಳಿದ್ದರೂ ಕಿವಿಗೊಡದ ಜನರು ತಾವಿದ್ದ ಸ್ಥಳ ತೊರೆದು ಹೋಗುತ್ತಿದ್ದಾರೆ.

    ಇದನ್ನೂ ಓದಿ: ರಾಜ್ಯದ ಎರಡು ಜಿಲ್ಲೆಗಳಿಗೆ ಹೊಸ ಜಿಲ್ಲಾಧಿಕಾರಿ: ಉಭಯ ಜಿಲ್ಲೆಗಳ ಡಿಸಿ ಅದಲು-ಬದಲು!

    ಜಿಲ್ಲೆಯ ಗಡಿಕೇಶ್ವರ ಗ್ರಾಮದ ಹಲವು ಜನರು ಊರು ತೊರೆದು ಬೇರೆ ಕಡೆಗೆ ಹೋಗಿದ್ದಾರೆ. ಎರಡು ತಿಂಗಳಿಂದ ತಾಲ್ಲೂಕಿನಲ್ಲಿ ಭೂಕಂಪನ ಸಂಭವಿಸುತ್ತಿದ್ದರೂ ಜಿಲ್ಲಾಧಿಕಾರಿ ಭೇಟಿ ನೀಡಿಲ್ಲ. ಆದರೆ ಇಂದು ಗಡಿಕೇಶ್ವರ ಸೇರಿ ಕೆಲವೆಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಹಿನ್ನೆಲೆಯಲ್ಲಿ ಅವರು ಆಗಮಿಸಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

    ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಕೈಹಾಕಿದ; ಜನರು ಹಿಡಿದು ಹೊಡೆದು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts