More

    ರಸ್ತೆಗೆ ಬಂತು ಮರಿ ಮುಗುಡು ಮೀನು!

    ಮಂಗಳೂರು: ಪಡೀಲ್‌ನ ಫಸ್ಟ್ ನ್ಯೂರೋ ಆಸ್ಪತ್ರೆ ಮುಂಭಾಗ ಗುರುವಾರ ರಸ್ತೆಯಲ್ಲಿ ಉಂಟಾಗಿದ್ದ ಕೃತಕ ನೆರೆ ಸಂದರ್ಭ ಮರಿ ಮುಗುಡು (ಹಾವಿನ ರೀತಿಯ ಉದ್ದದ ಮೀನು) ಮೀನು ಪತ್ತೆಯಾಗಿದೆ.

    ಬಳಿಕ ಸ್ಥಳೀಯರು ಅದನ್ನು ರಕ್ಷಿಸಿ ಸುರಕ್ಷಿತವಾಗಿ ರಸ್ತೆಯ ಬದಿಯ ತೋಡಿನಲ್ಲಿ ಬಿಟ್ಟಿದ್ದಾರೆ. ನಗರದಲ್ಲಿ ಕೃತಕ ನೆರೆ ಹಾವಳಿಯಿಂದ ಅಲ್ಲಲ್ಲಿ ಮೀನು, ಹಾವು ಹಾಗೂ ಇತರ ಜಲಚರಗಳು ರಸ್ತೆ ಹಾಗೂ ಮನೆಗಳಿಗೆ ಬಂದಿರುವ ಕುರಿತು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

    ನಿರಂತರ ಸುರಿದ ಮಳೆಗೆ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಗುರುವಾರ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗ್ಗಿನ ಹೊತ್ತು ನಗರದ ಕೊಟ್ಟಾರ, ಪಡೀಲು, ಜಪ್ಪಿನಮೊಗರು, ಎಕ್ಕೂರು ಸೇರಿದಂತೆ ಹಲವಾರು ಕಡೆ ರಾಜಕಾಲುವೆಗಳು ತುಂಬಿ ಹರಿದಿವೆ.

    ಉಕ್ಕಿ ಹರಿದ ಕೃತಕ ನೆರೆಯಿಂದ ನಗರದ ಕಣ್ಣೂರು, ಕೊಟ್ಟಾರ ಮುಂತಾದ ಕಡೆ ರಾಷ್ಟ್ರೀಯ ಹೆದ್ದಾರಿ, ಮಾಲೆಮಾರ್, ಅಡ್ಯಾರ್, ಮಾಲೆಮಾರ್ ಮುಂತಾಕ ಕಡೆ ಇತರ ಸಂಪರ್ಕ ರಸ್ತೆಗಳು ಕೆಲ ಕಾಲ ಸಂಪರ್ಕ ಕಡಿದುಕೊಂಡಿತು. ನೆರೆಯ ಪ್ರಮಾಣ ತಗ್ಗಿದ ಬಳಿಕ ವಾಹನಗಳು ಇಲ್ಲಿ ನೀರಿನ ನಡುವೆಯೇ ಸಂಚರಿಸಲು ಆರಂಭಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts