More

    ಸೇವಾ ನ್ಯೂನತೆ ಎಸಗಿದ ಟಿ.ವಿ. ಕಂಪನಿಗೆ ದಂಡ

    ಧಾರವಾಡ: ಸೇವಾ ನ್ಯೂನತೆ ಎಸಗಿದ ಟಿ.ವಿ. ಕಂಪನಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
    ನವಲೂರಿನ ವಿನಾಯಕನಗರ ನಿವಾಸಿ ಹಾಗೂ ವಕೀಲ ಸಿ.ಎಸ್. ಹಿರೇಮಠ ಎಂಬುವರು ಝಿಯೋಮಿ ಕಂಪನಿಯ ಟಿವಿಯನ್ನು ೨೦೨೦ರ ಸೆ. ೧೧ರಂದು ಹುಬ್ಬಳ್ಳಿಯ ಕಾಮಾಕ್ಷಿ ಎಂಟರ್‌ಪ್ರೆಸಸ್‌ನಿ೦ದ 22,500 ರೂಪಾಯಿಗೆ ಖರೀದಿಸಿದ್ದರು. ಹೆಚ್ಚುವರಿಯಾಗಿ 552 ರೂ. ಪ್ರೀಮಿಯಮ್ ಪಾವತಿಸಿ ವಿಮೆ ಮಾಡಿಸಿದ್ದರು. 2021ರ ಅಕ್ಟೋಬರ್‌ನಲ್ಲಿ ಟಿವಿಯಲ್ಲಿ ದೋಷ ಕಾಣಿಸಿತ್ತು.

    ಈ ಸಂಬ೦ಧ ಹಿರೇಮಠ ಅವರು ದೋಷ ಸರಿಪಡಿಸುವಂತೆ ಕೋರಿ ದೂರು ನೀಡಿದ್ದರು. ಆದರೂ ಟಿವಿಯಲ್ಲಿನ ದೋಷವನ್ನು ಸರಿಪಡಿಸಿರಲಿಲ್ಲ. ಇದರಿಂದ ದೂರುದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
    ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ಟಿವಿಯಲ್ಲಿ ದೋಷ ಇದ್ದರೂ ಎದುರುದಾರರು ಅದನ್ನು ಟಿವಿಯ ದೋಷ ಸರಿಪಡಿಸಲು ವಿಫಲರಾಗಿ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದು ತಿಂಗಳೊಳಗೆ ಟಿವಿಯಲ್ಲಿನ ದೋಷ ಸರಿಪಡಿಸಿಕೊಡಬೇಕು. ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ 10,000 ರೂ. ಪರಿಹಾರ ಪ್ರಕರಣದ ವೆಚ್ಚ 5,000 ರೂ. ಪಾವತಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಟಿವಿಯ ದೋಷಕ್ಕೆ ಮಾರಾಟಗಾರರಾದ ಕಾಮಾಕ್ಷಿ ಎಂಟರ್‌ಪ್ರೆಸಸ್‌ ಹೊಣೆಗಾರರಲ್ಲ ಎಂದು ಅಭಿಪ್ರಾಯಪಟ್ಟಿರುವ ಆಯೋಗ, ಅವರ ವಿರುದ್ಧದ ದೂರನ್ನು ವಜಾಗೊಳಿಸಿ ಆದೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts