More

    ನರೇಗಾ ಕೆಲಸದಲ್ಲಿ ಅಂಗವಿಕಲರಿಗೆ ರಿಯಾಯಿತಿ

    ಅಳವಂಡಿ: ಅಂಗವಿಕಲರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಪಿಡಿಒ ಕೊಟ್ರಪ್ಪ ಅಂಗಡಿ ತಿಳಿಸಿದರು.

    ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಅಧ್ಯಕ್ಷತೆಯಲ್ಲಿ ಜಿಪಂ, ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ವಿಶೇಷ ಸಮನ್ವಯ ಗ್ರಾಮಸಭೆ ಉದ್ದೇಶಿಸಿ ಬುಧವಾರ ಮಾತನಾಡಿದರು.

    ಅಂಗವಿಕಲರ ಅಭಿವೃದ್ಧಿಗಾಗಿ ಗ್ರಾಪಂ ಅನುದಾನದಲ್ಲಿ ಶೇ.5 ಮೀಸಲಿರುತ್ತದೆ. ನರೇಗಾ ಯೋಜನೆ ಕೆಲಸದಲ್ಲೂ ರಿಯಾಯತಿ ಇದ್ದು, ಇವುಗಳ ಸದುಪಯೋಗ ಪಡೆದುಕೊಳ್ಳಬೇಕು. ಯೋಜನೆಯಡಿ ಪ್ರತ್ಯೇಕ ಜಾಬ್‌ಕಾರ್ಡ್ ನೀಡಲು ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿಸಿದರು.

    ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘದ ಅಧ್ಯಕ್ಷ ಸಿದ್ದಲಿಂಗಯ್ಯ ಗೊರ್ಲೆಕೊಪ್ಪ ಮಾತನಾಡಿ, 1995ರಲ್ಲಿ ಸರ್ಕಾರ ಕೇವಲ 7 ತರಹದ ಅಂಗವೈಕಲ್ಯ ಪರಿಗಣಿಸುತ್ತಿತ್ತು. 2016 ರಿಂದ 21 ರೀತಿಯ ವಿಕಲತೆ ಪರಿಗಣಿಸುತ್ತಿದೆ. ಶೇ.45 ರಿಂದ 75 ದೈಹಿಕ ಅಂಗವಿಕಲತೆ 800 ರೂ. ಮಾಸಾಸನ ಹಾಗೂ 75 ರಿಂದ 100 ವಿಕಲತೆಗೆ 1400 ರೂ. ಮಾಸಾಸನ ಜತೆಗೆ ರಿಯಾಯಿತಿ ದರದಲ್ಲಿ ರೈಲು, ಬಸ್ ಪ್ರಯಾಣ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.

    ಗ್ರಾಪಂ ಉಪಾಧ್ಯಕ್ಷೆ ಶಾರವ್ವ ಇಳಿಗೇರ, ವಿಆರ್‌ಡಬ್ಲೃ ಚನ್ನಮ್ಮ ಗಾಳಿ, ಕಾರ್ಯದರ್ಶಿ ಬಸವರಾಜ, ಕಾಯಕ ಮಿತ್ರ ಗೀತಾ ಕಿಲ್ಲೇದ, ಪ್ರಮುಖರಾದ ಹನುಮಂತ, ಬಸಣ್ಣ, ತೋಟಯ್ಯ, ಪರಶುರಾಮ, ನಾಗರಾಜ, ಮನು, ಪೂರ್ಣಿಮಾ, ಯಂಕಪ್ಪ, ಶ್ರೀದೇವಿ, ಶೈಲಶ್ರೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts