More

    ನಾಳೆ ಯಾತ್ರಿನಿವಾಸ ಉದ್ಘಾಟನೆ

    ಪರಶುರಾಮಪುರ: ಶ್ರೀ ಗುರು ಚೆಲುಮೇರುದ್ರಸ್ವಾಮಿ ರಥೋತ್ಸವ, ದನಗಳ ಹಾಗೂ ಜಾನಪದ ಜಾತ್ರಾಮಹೋತ್ಸವದ ಅಂಗವಾಗಿ ನಾಗಗೊಂಡನಹಳ್ಳಿ ವೇದಾವತಿ ನದಿ ದಡದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಯಾತ್ರಿನಿವಾಸ ಫೆ.4ರಂದು ಉದ್ಘಾಟನೆಗೊಳ್ಳಲಿದೆ.

    ವೇದಾವತಿ ನದಿ ತಟದಲ್ಲೇ ಬಸವಾದಿ ಶರಣರ ಪರಂಪರೆ ಸಾರುವ ಶ್ರೀ ಚಿಲುಮೇರುದ್ರ ಸ್ವಾಮಿಯ ಗದ್ದುಗೆ ಇದೆ. ಇಲ್ಲಿನ ಚಿಲುಮೆರುದ್ರ ಸ್ವಾಮೀಜಿ ಅನಾದಿ ಕಾಲದಿಂದಲೂ ಪಶುಪಾಲನೆ, ಸಮಾಜೋಪಯೋಗಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಈ ಭಾಗದ ಜನರ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ.

    ಶ್ರೀಮಠದಲ್ಲಿ ಫೆ.2ರಂದು ಆರಂಭಗೊಂಡಿರುವ ಧಾರ್ಮಿ ಕಾರ್ಯಗಳು 7ರ ವರೆಗೆ ಜರುಗಲಿವೆ. ಫೆ.4ರಂದು ಶ್ರೀ ಶಿವಮೂರ್ತಿ ಮುರುಘಾ ಶರಣರ ಸಾನ್ನಿಧ್ಯದಲ್ಲಿ ಚಿಲುಮೆರುದ್ರಸ್ವಾಮಿ ರಥೋತ್ಸವ ಜರುಗಲಿದೆ. ಮಠದ ಶ್ರೀ ಬಸವಕಿರಣ ಸ್ವಾಮೀಜಿ ಉಪಸ್ಥಿತರಿರುವರು. 50 ಲಕ್ಷ ರೂ. ವೆಚ್ಚದ ಯಾತ್ರಿನಿವಾಸವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸುವರು.

    ಮಾಜಿ ಸಚಿವ ಡಿ.ಸುಧಾಕರ, ತಹಸೀಲ್ದಾರ್ ಮಲ್ಲಿಕಾರ್ಜುನಪ್ಪ, ತಾಪಂ ಮಾಜಿ ಅಧ್ಯಕ್ಷ ಜಿ.ವೀರೇಶ, ಜಿಪಂ ಸದಸ್ಯೆ ಚಂದ್ರಿಕಾ, ತಾಪಂ ಸದಸ್ಯೆ ಶಿವಮ್ಮ, ಗ್ರಾಪಂ ಅಧ್ಯಕ್ಷೆ ಭೀಮಕ್ಕ, ಸದಸ್ಯರಾದ ಶಾಂತಾ, ರೂಪಾ, ಮಂಜುನಾಥ ಗದ್ದುಗೆ, ಮಠದ ಸೇವಾ ಸಮಿತಿ ಉಪಾಧ್ಯಕ್ಷ ಎಚ್.ಓಬಳೇಶಪ್ಪ, ಕಾರ್ಯದರ್ಶಿ ಜೆ.ಎಂ.ಬೊಮ್ಮಯ್ಯ, ಸಹ ಕಾರ್ಯದರ್ಶಿ ಜಿ.ಟಿ.ರವಿಕುಮಾರ, ಎಂ.ಉಮಾ ಮಹೇಶ್ವರಯ್ಯ, ರವಿಚಂದ್ರ, ಸಿಪಿಐ ಆನಂದಪ್ಪ ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts