More

    ಸಮಗ್ರ ಕೃಷಿ ಪದ್ಧತಿ ತರಲಿದೆ ಅಧಿಕ ಲಾಭ

    ಪರಶುರಾಮಪುರ: ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಕೃಷಿ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬಹುದು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎಸ್.ಪಿ.ನಟರಾಜ್ ಹೇಳಿದರು.

    ರಸಗೊಬ್ಬರ ಸಮರ್ಪಕ ಬಳಕೆ ಕುರಿತು ರೈತರಿಗೆ ದೇವರಮರಿಕುಂಟೆ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಬೆಳೆಗಳಿಗೆ ಸಾವಯವ ಗೊಬ್ಬರ ಹಾಕುವುದರಿಂದ ಉತ್ತಮ ಇಳುವರಿ ಜತೆಗೆ ಭೂಮಿಯ ಸತ್ವ ಕಾಪಾಡಬಹುದು. ಕೃಷಿ ಜತೆಗೆ ಉಪ ಕಸುಬುಗಳಾದ ಕುರಿ, ಮೇಕೆ, ಎಮ್ಮೆ, ಹಸು, ಕೋಳಿ ಸಾಕಣೆ, ಹೈನುಗಾರಿಕೆ, ಸಿರಿಧಾನ್ಯಗಳ ಬೆಳೆಯುವುದರಿಂದ ಆರ್ಥಿಕ ಸಂಕಷ್ಟದಿಂದ ಹೊರ ಬರಬಹುದು ಎಂದರು.

    ಪ್ರಗತಿಪರ ರೈತ ಆರ್.ಎ.ದಯಾನಂದ ಮೂರ್ತಿ ಮಾತನಾಡಿ, ಭೂಮಿ ಫಲವತ್ತತೆ ಹೆಚ್ಚಳ, ಉತ್ತಮ ಇಳುವರಿ, ವಿಷಮುಕ್ತ ಆಹಾರ ಉತ್ಪಾದನೆಗೆ ಸಾವಯವ ಕೃಷಿ ಸಹಕಾರಿಯಾಗಿದೆ. ಬೆಳೆಗಳಿಗೆ ನಿಯಮಿತವಾಗಿ ಜೀವಾಮೃತ, ಕೊಟ್ಟಿಗೆ ಗೊಬ್ಬರ ಬಳಸುವುದರಿಂದ ಕ್ರಿಮಿನಾಶಕ ಬಳಕೆ ಅಗತ್ಯವೇ ಇರುವುದಿಲ್ಲ ಎಂದು ತಿಳಿಸಿದರು.

    ಬಬ್ಬೂರು ಕೃಷಿ ಫಾರಂನ ವಿಜ್ಞಾನಿ ಓಂಕಾರಪ್ಪ, ಮಣ್ಣು ವಿಜ್ಞಾನಿಗಳಾದ ಡಾ.ಜ್ಯೋತಿ, ಕೆಂಚಮ್ಮ, ಅನ್ನಪೂರ್ಣ, ರೈತರಾದ ಪಿಲ್ಲಹಳ್ಳಿ ಚಿತ್ರಲಿಂಗಪ್ಪ, ಸಿದ್ದೇಶ್, ರುದ್ರಮುನಿಯಪ್ಪ, ಆರ್.ಪ್ರಸನ್ನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts