More

    ಗುಣಮಟ್ಟದ ಶೇಂಗಾ ಬೀಜ ವಿತರಣೆ

    ಪರಶುರಾಮಪುರ: ಕೆಒಎಫ್ ಸರ್ಕಾರದ ನಿರ್ದೇಶನದಂತೆ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಶೇಂಗಾ ವಿತರಿಸಲಾಗುವುದು ಎಂದು ಎಣ್ಣೆಬೀಜ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಲ್.ಹನುಮಂತಪ್ಪ ತಿಳಿಸಿದರು.

    ಗ್ರಾಮದ ಬೈಪಾಸ್ ರಸ್ತೆಯ ಶ್ರೀ ಕೃಷ್ಣಭವನದ ಬಳಿ ಕೆಒಎಫ್ ಪೂರೈಸಿದ ಟಿಎಂವಿ2 ಕಡೆಲೇಕಾಯಿ ಮೂಟೆಗಳನ್ನು ಸಂಗ್ರಹಿಸುವ ವೇಳೆ ಅದರ ಬೀಜಗಳನ್ನು ಪರೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಸಾಧ್ಯವಾದಷ್ಟೂ ಸ್ಥಳೀಯ ಕೃಷಿಕರ ಬಳಿ ಬಿತ್ತನೆ ಬೀಜ ಪಡೆದುಕೊಂಡು ಬಿತ್ತನೆ ಮಾಡಿದರೆ ನಿರೀಕ್ಷಿತ ಇಳುವರಿ ಪಡೆಯಬಹುದು ಎಂದರು.

    ರೈತ ಸಂಪರ್ಕ ಕೇಂದ್ರದಲ್ಲಿ ಈ ಬಾರಿ ಬಿತ್ತನೆ ಬೀಜ ಮತ್ತು ಲಘು ಪೋಷಕಾಂಶಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ವ್ಯವಸ್ಥೆ ಮಾಡಿಕೊಂಡಿದೆ ಎಂದು ತಿಳಿಸಿದರು.

    ಈ ವರ್ಷ ಕೃಷಿ ಇಲಾಖೆಯ ಮೂಲಕ ಬಿತ್ತನೆ ಬೀಜಗಳನ್ನು ಪಡೆಯಲು ಬರುವ ರೈತರು ಎಫ್‌ಐಡಿ ನಂಬರ್ ನೀಡಿದರೆ ಸಾಕು ಯಾವುದೇ ದಾಖಲೆಗಳನ್ನೂ ಕೊಡುವ ಅವಶ್ಯಕತೆಯಿಲ್ಲ ಎಂದರು.

    ಖಾತೆದಾರರಲ್ಲದವರು ಬಿತ್ತನೆ ಬೀಜ ಕೊಳ್ಳಲು ಪಹಣಿ, ಆಧಾರ್‌ಕಾರ್ಡ್, ಎಫ್‌ಐಡಿ ನಂಬರ್, ಜಾತಿ ಪ್ರಮಾಣ ಪತ್ರ ತರಲೇಬೇಕು. ಆಂಧ್ರದ ಮಾದರಿಯಂತೆ 4 ಸಾವಿರ ರೂ.ಗೆ ಒಂದು ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ವಿತರಿಸಬೇಕು ಎಂದು ಹೇಳಿದರು.

    ಟಿಎಂವಿ2 ಬಿತ್ತನೆ ಶೇಂಗಾದ ಬೀಜಗಳ ಗುಣಮಟ್ಟವನ್ನು ಪರೀಕ್ಷಿಸಲಾಯಿತು. ಸಂಘದ ಕಾರ್ಯದರ್ಶಿ ಕೆ.ವಿ.ಕರಿಯಪ್ಪ, ಕೃಷಿ ಅಧಿಕಾರಿ ಎನ್.ಗಿರೀಶ್, ಕೃಷಿ ಅನುವುಗಾರರಾದ ಹನುಮಂತರಾಯ, ತಿಮ್ಮಣ್ಣ, ಗ್ರಾಮಸ್ಥರಾದ ತಿಮ್ಮಯ್ಯ, ರಾಮಪ್ಪ, ಕರಿಯಣ್ಣ, ತಿಪ್ಪೇಸ್ವಾಮಿ, ರಾಮಣ್ಣ, ಸಾಕಮ್ಮ ಇತರರಿದ್ದರು.

    ಜೂ.1ರ ಬಳಿಕ ಸರ್ಕಾರ ನಿಗದಿಪಡಿಸುವ ದರಕ್ಕೆ ರೈತ ಸಂಪರ್ಕ ಕೇಂದ್ರವೂ ಸೇರಿ ಕೆಒಎಫ್ ಸಂಗ್ರಹಿಸಿರುವ ಕಟ್ಟಡಗಳ ಬಳಿ ಹೋಬಳಿಯ ವಿವಿಧ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ಕ್ರಮವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
    ಎನ್.ಗಿರೀಶ್ ಕೃಷಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts