More

    ನಂದಿ ಬೆಟ್ಟದಲ್ಲಿ ಪ್ಯಾರಾಗ್ಲೈಡಿಂಗ್; ಪ್ರಾಯೋಗಿಕವಾಗಿ ಮೂರು ತಿಂಗಳು ಅವಕಾಶ

    ಚಿಕ್ಕಬಳ್ಳಾಪುರ: ಇಷ್ಟು ದಿನ ನಂದಿ ಗಿರಿಧಾಮದಲ್ಲಿ ನಿಂತು ಪ್ರಾಕೃತಿಕ ಸೊಬಗು ಸವಿಯುತ್ತಿದ್ದ ಪ್ರವಾಸಿಗರು ಇನ್ಮುಂದೆ ಮನಾಲಿ, ನೈನಿತಾಲ್, ಶಿಲ್ಲಾಂಗ್‌ಗಳಲ್ಲಿ ಇರುವಂತೆಯೇ ಪ್ಯಾರಾ ಗ್ಲೈಡಿಂಗ್ ಮೂಲಕ ಹಕ್ಕಿಯಂತೆ ಹಾರಾಡಿ, ಗಿರಿಯ ದೃಶ್ಯ ವೈಭವ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ..!

    ಜಿಲ್ಲೆಯ ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣದ ಜತೆಗೆ ಪ್ಯಾರಾ ಗ್ಲೈಡಿಂಗ್‌ಗೆ ಅವಕಾಶ ನೀಡುವಂತೆ ಹಲವು ವರ್ಷಗಳ ಒತ್ತಾಯಕ್ಕೆ ಇದೀಗ ಸ್ಪಂದನೆ ಸಿಕ್ಕಿದೆ. ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆ ಡಿ.24 ರಿಂದ ಮೂರು ತಿಂಗಳು ಪ್ರಾಯೋಗಿಕವಾಗಿ ಖಾಸಗಿ ಸಂಸ್ಥೆಯ ಮೂಲಕ ಪ್ರವಾಸಿಗರಿಗೆ ಪ್ಯಾರಾ ಗ್ಲೈಡಿಂಗ್‌ಗೆ ಅವಕಾಶ ನೀಡಿದೆ.

    ಇದನ್ನೂ ಓದಿ: PHOTO GALLERY| ನಟಿ ಸಮಂತಾ ನಯಾ ಅವತಾರ್ ನೋಡಿದ್ರೆ ನೀವು ನಿಬ್ಬೆರಗಾಗುವುದು ಗ್ಯಾರಂಟಿ!

    ಕೇಂದ್ರ ವಾಯುಯಾನ ಸಂಸ್ಥೆ, ಪೊಲೀಸ್, ಕಂದಾಯ, ತೋಟಗಾರಿಕೆ, ಪ್ರವಾಸೋದ್ಯಮ ಇಲಾಖೆ ಪ್ಯಾರಾ ಗ್ಲೈಡಿಂಗ್‌ಗೆ ಗ್ರೀನ್ ಸಿಗ್ನಲ್ ನೀಡಿದೆ. ಇದಕ್ಕಾಗಿ ನುರಿತ ಇಬ್ಬರು ಪೈಲಟ್‌ಗಳನ್ನು ನಿಯೋಜಿಸಿದ್ದು ನಿಗದಿತ ಶುಲ್ಕ ಪಾವತಿಸಿ, ತಜ್ಞರ ಜತೆಗೆ ಪ್ರವಾಸಿಗರು ಆಕಾಶದಲ್ಲಿ ಹಾರಾಡಬಹುದು. ಸಂಗ್ರಹವಾಗುವ ಶುಲ್ಕದಲ್ಲಿ ಶೇ.12 ತೋಟಗಾರಿಕೆ ಇಲಾಖೆ, ಉಳಿದ ಹಣ ಉಸ್ತುವಾರಿಯ ಖಾಸಗಿ ಸಂಸ್ಥೆ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

    ಪ್ರವಾಸೋದ್ಯಮಕ್ಕೆ ಉತ್ತೇಜನ: ಕಲೆ ಮತ್ತು ವಾಸ್ತು ಶಿಲ್ಪದಿಂದ ಬೆರಗು ಮೂಡಿಸುವ ಆಲಯಗಳು, ಮೋಡಗಳನ್ನೇ ತಬ್ಬಿಕೊಂಡಿರುವ ಪಾತಾಳ ರೂಪಿ ಟಿಪ್ಪು ಡ್ರಾಪ್, ಬೇಸಿಗೆ ಅರಮನೆ, ಊಟಿಯನ್ನು ನೆನಪಿಸುವ ವಾತಾವರಣ, ಹಚ್ಚಹಸಿರಿನ ಸಸ್ಯ ಸಂಪತ್ತು, ನಾನಾ ಬಗೆಯ ಪಕ್ಷಿಗಳು, ಐತಿಹಾಸಿಕ ಸ್ಮಾರಕಗಳು, ನದಿಗಳ ಉಗಮ, ಕೋಟೆ ಕೊತ್ತಲಗಳನ್ನು ಹೊಂದಿರುವ ಗಿರಿಧಾಮ ಪ್ರವಾಸಿಗರನ್ನು ಆಕರ್ಷಿಸುತ್ತದೆ. ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಬೆಟ್ಟಕ್ಕೆ ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ಐಟಿ ಬಿಟಿ ಟೆಕ್ಕಿ, ಪ್ರತಿಷ್ಠಿತ ಸಂಸ್ಥೆಗಳ ನೌಕರರು, ಪ್ರೇಮಿಗಳು, ನವ ದಂಪತಿ, ಕುಟುಂಬಗಳು ಪ್ರಕೃತಿ ರಮ್ಯ ತಾಣಕ್ಕೆ ಭೇಟಿ ನೀಡುತ್ತಾರೆ.
    ಈಗ ಪ್ಯಾರಾ ಗ್ಲೈಡಿಂಗ್‌ಗೆ ಅವಕಾಶ ನೀಡಿರುವುದು ಪ್ರವಾಸೋದ್ಯಮದ ಉತ್ತೇಜನ ಜತೆಗೆ ಮನರಂಜನೆಗೆ ಸಹಕಾರಿಯಾಗಿದೆ.

    ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ನಿಜವಾಗಿಯೂ ಗೆದ್ದೋರು ನಾವೇ! ಭರವಸೆ ಮತ್ತು ಪ್ರಜಾಪ್ರಭುತ್ವ ಗೆದ್ದಿದೆ ಎಂದ ಬಿಜೆಪಿ

    ಮರು ಆರಂಭ ಸಂತಸ: ಈ ಮೊದಲು ಗಿರಿಧಾಮದಲ್ಲಿ ನುರಿತ ತರಬೇತುದಾರರು, ತಂತ್ರಜ್ಞರಿಗೆ ಮಾತ್ರ ಬೆಳಗ್ಗೆ ಮತ್ತು ಸಂಜೆ ಪ್ಯಾರಾಚೂಟ್‌ನಲ್ಲಿ ಹಾರಲು ಅವಕಾಶ ನೀಡಲಾಗಿತ್ತು. ಇದನ್ನು ನೋಡಿ ಹಲವರು ಖುಷಿಪಡುತ್ತಿದ್ದುದಲ್ಲದೇ ನಮಗೂ ಒಂದು ಅವಕಾಶ ಸಿಗುತ್ತದೆಯೇ? ಎಂಬ ಉದ್ಘಾರ ತೆಗೆಯುತ್ತಿದ್ದರು. ಆದರೆ ಒಪ್ಪಿಗೆ ಸಿಗುತ್ತಿರಲಿಲ್ಲ. ಇದರ ನಡುವೆ ಅಸುರಕ್ಷತೆ, ಅಹಿತಕರ ವಾತಾವರಣ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಎಲ್ಲರಿಗೂ ಪ್ಯಾರಾಚೂಟ್‌ನಲ್ಲಿ ಹಾರುವುದನ್ನು ನಿಷೇಧಿಸಲಾಗಿತ್ತು. ಆದರೆ,ಈಗ ಪ್ಯಾರಾ ಗೈಡ್ಲಿಂಗ್ ಪ್ರಾರಂಭವಾಗುತ್ತಿದೆ. ಮೂರು ತಿಂಗಳು ಪ್ರಾಯೋಗಿಕ ಅನುಮತಿ ಸಿಕ್ಕಿದೆ. ಪ್ರವಾಸಿಗರ ಸ್ಪಂದನೆ, ಸುರಕ್ಷತೆ ಪರಿಗಣಿಸಿ ಮುಂದುವರಿಸುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

    ಪ್ಯಾರಾಗ್ಲೈಡಿಂಗ್ ತಾಣ: ದೇಶದ ಪ್ಯಾರಾಗ್ಲೈಡಿಂಗ್ ತಾಣದಲ್ಲಿ ನಂದಿ ಬೆಟ್ಟವೂ ಒಂದು. ಮನಾಲಿ, ನೈನಿತಾಲ್, ಶಿಲ್ಲಾಂಗ್, ಜೈಪುರ, ಯೆಲಗಿರಿ, ಗಂಗ್‌ಟಾಕ್, ರಾಣಿಖೇತ್ ಸೇರಿ ಹಲವು ತಾಣಗಳಲ್ಲಿ ಪ್ಯಾರಾಗ್ಲೈಡಿಂಗ್ ಅವಕಾಶ ಇದೆ.

    ಕೇಂದ್ರ ಕಚೇರಿಯಿಂದ ಖಾಸಗಿ ಸಂಸ್ಥೆಯ ಮೂಲಕ ನಂದಿ ಬೆಟ್ಟದಲ್ಲಿ ಪ್ಯಾರಾಗ್ಲೈಡಿಂಗ್ ನಡೆಸಲು ಅನುಮತಿ ಸಿಕ್ಕಿದೆ. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳ, ಇಲಾಖೆಗೆ ಆದಾಯ ಏರಿಕೆಯ ನಿರೀಕ್ಷೆ ಮೂಡಿದೆ.
    ಗೋಪಾಲ್, ನಂದಿ ಗಿರಿಧಾಮ ವಿಶೇಷಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts