More

    ಐಪಿಎಲ್​ನಲ್ಲಿ ಆಡುತ್ತೀರಾ? ವರದಿಗಾರನ ಪ್ರಶ್ನೆಗೆ ಬಾಬರ್​ ಅಜಮ್​ ಕೊಟ್ಟ ಪ್ರತಿಕ್ರಿಯೆ ವೈರಲ್​

    ಸಿಡ್ನಿ: ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ಇಂದು (ನ.13) ನಡೆಯಲಿರುವ ಟಿ20 ವಿಶ್ವಕಪ್ (T20 World Cup 2022)​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಬಾಬರ್​ ಅಜಾಮ್ (Babar Azam)​ ನೇತೃತ್ವದ ಪಾಕಿಸ್ತಾನ ತಂಡ ಕ್ರಿಕೆಟ್​ ಜನಕ ಇಂಗ್ಲೆಂಡ್ (England)​ ತಂಡವನ್ನು ಎದುರಿಸಲಿದೆ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಐಪಿಎಲ್​ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಬಾಬರ್​ ಅಜಮ್​ ತಬ್ಬಿಬ್ಬಾದ ಪ್ರಸಂಗ ಜರುಗಿತು.

    ಐಪಿಎಲ್ (IPL) ಆಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಮಾತನಾಡಿ, ನಿಮಗೆ ಮತ್ತು ನಿಮ್ಮ ತಂಡಕ್ಕೆ ಇದರಿಂದ ಏನಾದರೂ ಸಹಾಯ ಆಗಬಹುದೆಂದು ನೀವು ಭಾವಿಸುತ್ತೀರಾ ಮತ್ತು ಭವಿಷ್ಯದಲ್ಲಿ ನೀವು ಐಪಿಎಲ್​ ಆಡುವ ಭರವಸೆ ಇದೆಯೇ? ಎಂದು ವರದಿಗಾರ ಕೇಳಿದ ಪ್ರಶ್ನೆಗೆ ಬಾಬರ್ ಸಂಪೂರ್ಣವಾಗಿ ದಿಗ್ಭ್ರಮೆಗೊಂಡಂತೆ ನೋಡಿದರು.

    ವರದಿಗಾರನ ಪ್ರಶ್ನೆಗೆ ಉತ್ತರಿಸಲಾಗದೇ ತಮ್ಮ ಬಲ ಭಾಗದಲ್ಲಿ ಕುಳಿತಿದ್ದ ತಂಡದ ಮೀಡಿಯಾ ಮ್ಯಾನೇಜರ್​ ಕಡೆ ಬಾಬರ್​ ನೋಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪಾಕ್​ ಮೀಡಿಯಾ ಮ್ಯಾನೇಜರ್​, ಈ ಕ್ಷಣದಲ್ಲಿ ನಾವು ವಿಶ್ವಕಪ್​ ಫೈನಲ್​ ಕುರಿತಾದ ಪ್ರಶ್ನೆಗಳನ್ನು ಮಾತ್ರ ಸ್ವೀಕರಿಸುತ್ತೇವೆ.​ ಫೈನಲ್​ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಿ ಎಂದರು. ಆದರೆ, ಬಾಬರ್​ ಈ ಪ್ರಶ್ನೆಯಿಂದ ಕೊಂಚ ವಿಚಲಿತರಾಗಿರುವಂತೆ ಕಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಇಂದು (ನ.13) ಮಧ್ಯಾಹ್ನ 1.30ಕ್ಕೆ ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ಫೈನಲ್​ ಪಂದ್ಯ ನಡೆಯಲಿದ್ದು, ಟ್ರೋಫಿಗಾಗಿ ಪಾಕ್​ ಮತ್ತು ಇಂಗ್ಲೆಂಡ್​ ಕಾದಾಡಲಿವೆ. (ಏಜೆನ್ಸೀಸ್​)

    MRI ಸ್ಕ್ಯಾನಿಂಗ್​ ಮಾಡಿಸಲು ಬರ್ತಿದ್ದ ಮಹಿಳೆಯರಿಗೆ ಈತ ರಹಸ್ಯವಾಗಿ ಎಸಗುತ್ತಿದ್ದ ನೀಚ ಕೃತ್ಯ ಬಯಲು!

    ಒಂದು ವೇಳೆ ಪಾಕ್​ ಟಿ20 ವಿಶ್ವಕಪ್​​ ಗೆದ್ದರೆ… ಬಾಬರ್​ ಅಜಾಮ್​ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ಗವಾಸ್ಕರ್​

    ಕೋಟಿ ಕೋಟಿ ಬಾಚಿಕೊಳ್ಳುತ್ತಿರುವ ಕಾಂತಾರ ಸಿನಿಮಾ ಮತ್ತೊಂದು ವಿವಾದದ ಸುಳಿಯಲ್ಲಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts