More

    ನರೇಂದ್ರ ಮರಸಣಿಗೆ ಅವರಿಗೆ ಪ.ಗೋ.ಪ್ರಶಸ್ತಿ

    ಮಂಗಳೂರು ‘ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪದ್ಯಾಣ ಗೋಪಾಲಕೃಷ್ಣ ಪ್ರಶಸ್ತಿ (ಪ.ಗೋ.ಪ್ರಶಸ್ತಿ)ಯನ್ನು ವಿಜಯವಾಣಿ ಹೆಬ್ರಿ ವರದಿಗಾರ ನರೇಂದ್ರ ಮರಸಣಿಗೆ ಅವರಿಗೆ ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಹತ್ತು ಸಾವಿರ ರೂ.ನಗದು, ಪ್ರಶಸ್ತಿ ಲಕ, ಸ್ಮರಣಿಕೆ ಒಳಗೊಂಡಿದೆ. ನರೇಂದ್ರ ನರೇಂದ್ರ ಮರಸಣಿಗೆ ಅವರ ‘ಮತ್ತಾವಿಗೆ ಮತ್ಯಾವಾಗ ಸೇತುವೆ’ ವಿಶೇಷ ವರದಿಗೆ ಈ ಪ್ರಶಸ್ತಿ ಲಭಿಸಿದೆ.
    ಪ್ರಶಸ್ತಿ ಪ್ರದಾನ ಮಾಡಿದ ಮೆಸ್ಕಾಂ ತಾಂತ್ರಿಕ ನಿರ್ದೇಶಕ ರಮೇಶ್ ಮಾತನಾಡಿ ‘ ಸಮಾಜಮುಖಿ ವರದಿಗಳ ಪರಿಣಾಮ
    ಅನೇಕ ಅಭಿವೃದ್ಧಿಗಳು ಕಾರ್ಯಗತವಾಗಿವೆ. ಪ್ರಶಸ್ತಿ ನೀಡುವ ಮೂಲಕ ಇಂತಹ ಪತ್ರಕರ್ತರನ್ನು ಪ್ರೋತ್ಸಾಹಿಸುವುದು ಶ್ಲಾಘನೀಯ ಎಂದರು.
    ಪ್ರಶಸ್ತಿ ಸ್ವೀಕರಿಸಿದ ನರೇಂದ್ರ ಮರಸಣಿಗೆ ಮಾತನಾಡಿ ‘ಗ್ರಾಮೀಣ ಪತ್ರಕರ್ತರು ಸವಾಲಿನ ನಡುವೆ ಕೆಲಸ ಮಾಡುತ್ತಿದ್ದಾರೆ.
    ಮತ್ತಾವು ತೀರಾ ಗ್ರಾಮೀಣ ಪ್ರದೇಶವಾಗಿದ್ದು, ಮೂಲ ಸೌಲಭ್ಯ ವಂಚಿತ ಊರಾಗಿದೆ. ಜತೆಗೆ ನಕ್ಸಲ್ ಪೀಡಿತ ಪ್ರದೇಶವಾಗಿದೆ. ಮಳೆಗಾಲದ ಆರು ತಿಂಗಳು ಇಲ್ಲಿಗೆ ತೆರಳುವುದಕ್ಕೆ ಹರಸಾಹಸ ಪಡಬೇಕು. ಮತ್ತಾವಿಗೆ ಸೇತುವೆ ನಿರ್ಮಿಸುವುದಾಗಿ ಆಡಳಿತ ವರ್ಗ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಪತ್ರಿಕೆಯಲ್ಲಿ ವರದಿ ಮಾಡುವ ಮೂಲಕ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸ ಮಾಡಿದ್ದೇನೆ ಎಂದರು.
    ಹಿರಿಯ ಪತ್ರಕರ್ತ ಶ್ರೀಕರ ಎಲ್.ಭಂಡಾರ್ಕರ್ ಅತಿಥಿಯಾಗಿದ್ದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು,
    ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ.ಆರ್., ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು.
    ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪ್ರಶಸ್ತಿ ಪುರಸ್ಕೃತರ ವಿವರ ನೀಡಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಮಹಮ್ಮದ್ ಆರ್ಿ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts