More

    ಗಮನ ಸೆಳೆದ ಮಯೂರೋತ್ಸವ

    ಹುಬ್ಬಳ್ಳಿ: ನಗರದಲ್ಲಿ ಮಯೂರ ನೃತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಮಯೂರೋತ್ಸವ-ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.

    ಸುಮಾರು 400 ಜನ ನೃತ್ಯ ಪಟುಗಳು ವಿವಿಧ ಪ್ರಕಾರದ ನೃತ್ಯಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿನಿಯರು ನೃತ್ಯದ ಮೂಲಕ ಪ್ರದರ್ಶಿಸಿದ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ ನೃತ್ಯ ರೂಪಕವು ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ನೃತ್ಯ ಪಟುಗಳ ಕಿಂಕಿಣಿಗಳ ನಾದ, ನಿನಾದ, ಅವರ ಹಾವಭಾವ ಮನಸೂರೆಗೊಂಡವು.

    ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಉದ್ಯಮಿ ಅನಂತಪದ್ಮನಾಭ ಐತಾಳ ಪಾಲ್ಗೊಂಡಿದ್ದರು. ಇತಿಹಾಸ ತಜ್ಞ ಡಾ. ಕರುಣಾ ವಿಜಯೇಂದ್ರ ಅವರಿಗೆ ಮಯೂರ ಪುರಸ್ಕಾರದಿಂದ ಸತ್ಕರಿಸಲಾಯಿತು.

    ಅಕಾಡೆಮಿ ಅಧ್ಯಕ್ಷೆ ವಿದುಷಿ ಹೇಮಾ ವಾಘ್ಮೂೕಡೆ ಪ್ರಸ್ತಾವಿಕ ಮಾತನಾಡಿದರು. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ವಿದ್ವತ್ ಪೂರ್ಣ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts