More

    ಲಾಕ್‌ಡೌನ್‌ ಮುಗಿದ ಸಂಭ್ರಮ… ನಡುವೆ ಗ್ಲಾಸ್‌ ಇಟ್ಟರು, ಕಿಸ್‌ ಕೊಟ್ಟರು! ಚೀನಾದಲ್ಲಿನ ಈ ‘ಭಯಂಕರ’ ಸ್ಪರ್ಧೆಗೆ ವಿಶ್ವವ್ಯಾಪಿ ಟೀಕೆ

    ಬೀಜಿಂಗ್‌: ಇತ್ತೀಚಿನ ದಿನಗಳಲ್ಲಿ ಚೀನಾ ಹೆಸರು ಕೇಳಿದರೇನೇ ಬೆಚ್ಚಿ ಬೀಳುವ ಹಾಗಾಗಿದೆ. ಕರೊನಾ ವೈರಸ್‌ ಎಂಬ ಮಹಾಮಾರಿಯನ್ನು ವಿಶ್ವವ್ಯಾಪಿ ಹರಡಿಸಿ, ತನ್ನ ದೇಶದ ಮೃತರ ಸಂಖ್ಯೆಯನ್ನು ಮುಚ್ಚಿಟ್ಟಿರುವ ಚೀನಾ ಈಗ ತನಗೇನೂ ಆಗಿಯೇ ಇಲ್ಲ ಎನ್ನುವಂತೆ ಹಲವೆಡೆಗಳಲ್ಲಿ ಲಾಕ್‌ಡೌನ್‌ ಮುಕ್ತಾಯಗೊಳಿಸಿಬಿಟ್ಟಿದೆ.

    ಇಷ್ಟೇ ಆದರೆ ಪರವಾಗಿಲ್ಲ. ಲಾಕ್‌ಡೌನ್‌ನಿಂದ ಸುಮಾರು ಎರಡು ತಿಂಗಳು ಮುಚ್ಚಿದ್ದ ಹಲವಾರು ಕಂಪನಿಗಳು ಈಗ ಕಾರ್ಯಾರಂಭ ಮಾಡಿವೆ. ಮನೆಯಲ್ಲಿ ಕುಳಿತು ಬೋರ್‌ ಆಗಿದ್ದ ಸಿಬ್ಬಂದಿಗೆ ಪುನಃ ಉತ್ತೇಜನ ತುಂಬಲು ಅನೇಕ ಕಂಪನಿಗಳು ಮುತ್ತಿನ ಸ್ಪರ್ಧೆ ಏರ್ಪಡಿಸಿದ್ದವು! ಅತಿ ದೀರ್ಘ ಕಾಲದವರೆಗೆ ಲಿಪ್‌ಲಾಕ್‌ ಮಾಡಿಟ್ಟುಕೊಂಡವರಿಗೆ ಬಹುಮಾನ ನೀಡುವ ಸ್ಪರ್ಧೆ ಇದು.

    ಮದುವೆಯಾದವರು ತಮ್ಮ ಸಂಗಾತಿಯನ್ನು ಕರೆತರಬೇಕು, ಇಲ್ಲದಿದ್ದರೆ ಆಯ್ಕೆ ಅವರದ್ದು ಎಂದು ಹೇಳಲಾಗಿತ್ತು. ಇಷ್ಟು ಹೇಳಿದ ಮೇಲೆ ಸಿಬ್ಬಂದಿ ಸುಮ್ಮನೆ ಬಿಟ್ಟಾರೆಯೆ? ಅತ್ಯಂತ ಉತ್ಸಾಹದಿಂದ ಈ ಕಿಸ್‌ ಕಾಂಪಿಟೀಷನ್‌ನಲ್ಲಿ ಭಾಗವಹಿಸಿದ್ದರು.

    ಆದರೆ ಕರೊನಾ ವೈರಸ್‌ಗೆ ದೇಹ ಸಂಪರ್ಕವೂ ಒಂದು ಕಾರಣ ಎನ್ನುವ ಹಿನ್ನೆಲೆಯಲ್ಲಿ ಈ ಸ್ಪರ್ಧೆಯಲ್ಲಿ ಒಂದೇ ಒಂದು ಕಂಡಿಷನ್‌ ಇತ್ತು. ಅದೇನೆಂದರೆ ಕಿಸ್‌ ‍ಪಡೆದು ಕೊಳ್ಳುವವರ ನಡುವೆ ಒಂದು ಉದ್ದನೆಯ ಗ್ಲಾಸ್‌ ಹಾಕಲಾಗಿತ್ತು. ಈ ಗ್ಲಾಸ್‌ ಮೂಲಕ ಅವರು ಮುತ್ತು ಕೊಡಬೇಕು. ಹಾಗೆ ಅತಿ ಹೆಚ್ಚು ಹೊತ್ತು ಗ್ಲಾಸಿಗೆ ಮುತ್ತಿಕ್ಕುವವರಿಗೆ ಬಹುಮಾನ ಎಂದು. ನಡುವೆ ಗ್ಲಾಸ್‌ ಇದ್ದರೂ ಪರವಾಗಿಲ್ಲ ಎಂದು ಅನೇಕ ಮಂದಿ ಇದರಲ್ಲಿ ಪಾಲ್ಗೊಳ್ಳಲು ಉತ್ಸುಕತೆ ತೋರಿದ್ದರು.

    ಈ ಸಿಬ್ಬಂದಿಯ ಉತ್ಸಾಹವನ್ನು ಕಂಡು ಅನೇಕ ಕಂಪನಿಗಳು ಈ ಸ್ಪರ್ಧೆಯ ವೀಡಿಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಕೆಲವರು ತಮಗೂ ಇಂಥ ಸ್ಪರ್ಧೆ ಇದ್ದಿದ್ದರೆ ಚೆನ್ನಾಗಿತ್ತು ಎಂದು ಕಮೆಂಟ್‌ ಮಾಡಿದರೆ, ಬಹುತೇಕ ಮಂದಿ ಚೀನಾವನ್ನು ವಾಚಾಮಗೋಚರವಾಗಿ ನಿಂದಿಸಿದ್ದಾರೆ. ಇದೊಂದು ‘ಕಿಲ್ಲರ್‌ ಕಿಸ್‌’ ಕಾಂಪಿಟೀಷನ್‌ ಎಂದು ತೆಗಳಿದ್ದಾರೆ.

    ನಡುವೆ ಗ್ಲಾಸ್‌ ತೋರಿಕೆಗೆ ಇಟ್ಟು, ಅದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಅಸಲಿಗೆ ಇದು ಹೇಗಿತ್ತು ಎಂದು ಯಾರಿಗೆ ಗೊತ್ತು? ಈಗಾಗಲೇ ಇಡೀ ವಿಶ್ವಕ್ಕೆ ಸೋಂಕು ಹಚ್ಚಿಸಿ ತನ್ನ ದೇಶದಲ್ಲಿ ವೈರಸ್‌ ಅನ್ನು ಸಂಪೂರ್ಣವಾಗಿ ತೊಲಗಿಸುವ ಮುನ್ನವೇ ಇಂಥದ್ದೊಂದು ಸ್ಪರ್ಧೆ ಏರ್ಪಡಿಸಿರುವ ಚೀನಾಕ್ಕೆ ಬುದ್ಧಿ ಇಲ್ಲ ಎಂದು ಸಹಸ್ರಾರು ಮಂದಿ ಖಂಡಿಸಿದ್ದಾರೆ. ಆದರೆ ನಡುವೆ ಗ್ಲಾಸ್ ಇರುವ ಕಾರಣ, ವೈರಸ್‌ ಹರಡಲು ಸಾಧ್ಯವೇ ಇಲ್ಲ ಎಂದು ಕಂಪನಿಗಳು ಸಮಜಾಯಿಷಿ ನೀಡಿವೆ.

    ಚೀನಾದಲ್ಲಿ 83 ಸಾವಿರಕ್ಕೂ ಅಧಿಕ ಕರೊನಾ ಸೋಂಕಿತರು ಇಲ್ಲಿಯವರೆಗೆ ಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಸಾವಿನ ಸಂಖ್ಯೆಯೇ ಲಕ್ಷ ಮೀರಿರುವ ಬಗ್ಗೆ ಸಂದೇಹವಿದೆ. ಇನ್ನೂ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಏರುತ್ತಿದ್ದರೂ ತನಗೆ ಇದರ ಸಂಬಂಧವೇ ಇಲ್ಲ ಎನ್ನುವಂತೆ ಸರ್ಕಾರ ಹಲವು ಕಡೆಗಳಲ್ಲಿ ಲಾಕ್‌ಡೌನ್‌ ಮುಕ್ತಾಯ ಮಾಡಿದೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts