More

    ಸಾವಯವ ಆಹಾರ ಪದ್ಧತಿ ಪ್ರದರ್ಶನ ಶ್ಲಾಘನೀಯ – ಮಹಾಂತೇಶ ಅವಾರಿ ಅಭಿಮತ

    ಹುನಗುಂದ: ಮೂರು ದಶಕಗಳ ಹಿಂದೆ ಇದ್ದ ಸಾವಯವ ಕೃಷಿ ಮತ್ತು ಆಹಾರ ಪದ್ಧತಿ ಮಾಯವಾಗಿದ್ದು, ಅದನ್ನು ಮರಳಿ ಬಳಕೆಗೆ ತರುವುದು ಅಗತ್ಯವಾಗಿದೆ ಎಂದು ಲಯನ್ಸ್ ಕಾನ್ವೆಂಟ್ ಸ್ಕೂಲ್ ನಿರ್ದೇಶಕ, ವಿಜಯ ಮಹಾಂತೇಶ ಬ್ಯಾಂಕ್ ನಿರ್ದೇಶಕ ಮಹಾಂತೇಶ ಅವಾರಿ ಹೇಳಿದರು.

    ಪಟ್ಟಣದ ಲಯನ್ಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ ಮಾಸಾಚರಣೆ ಅಂಗವಾಗಿ ವಿಜ್ಞಾನ ವಿಷಯದ ಚಿತ್ರ ಬಿಡಿಸುವುದು ಮತ್ತು ಸಾವಯವ ಕೃಷಿ ಪರಿಕಲ್ಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಪೂರೈಸಲು ಹೈಬ್ರೀಡ್ ಬೆಳೆ ಬೆಳೆಯಲಾಗುತ್ತಿದೆ. ರಾಸಾಯನಿಕ ಗೊಬ್ಬರ ಉಪಯೋಗಿಸುತ್ತಿರುವುದರಿಂದ ತಿನ್ನುವ ಆಹಾರದಲ್ಲಿ ಪೋಷಕಾಂಶ ಸಿಗುತ್ತಿಲ್ಲ. ಅದನ್ನೇ ಮಕ್ಕಳು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಚಿತ್ರದ ಜೊತೆಗೆ ಮೂರು ದಶಕಗಳ ಹಿಂದಿನ ಸಾವಯವ ಆಹಾರ ಪದ್ಧತಿಯನ್ನು ತೋರಿಸಿದ್ದು ಶ್ಲಾಘನೀಯ ಎಂದರು.

    ಲಯನ್ಸ್ ಕಾನ್ವೆಂಟ್ ಸ್ಕೂಲ್ ನಿರ್ದೇಶಕ ಶಿವಾನಂದ ಕಂಠಿ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸುವುದು ಮುಖ್ಯ. ಆಸಕ್ತಿ ಇರುವ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನ ಮತ್ತು ಸಾಧನೆಯತ್ತ ಮಕ್ಕಳು ತೊಡಗಿಕೊಳ್ಳುವುದು ಮುಖ್ಯವಾಗಿದೆ ಎಂದರು.

    ಮಕ್ಕಳು ವಿವಿಧ ಚಿತ್ರಗಳನ್ನು ಬಿಡಿಸಿ ಅವುಗಳಿಗೆ ದವಸ ಧಾನ್ಯಗಳನ್ನು ತುಂಬುವ ಮೂಲಕ ವಿನೂತನವಾಗಿ ರಾಷ್ಟ್ರೀಯ ಪೋಷಣ ಮಾಸಾಚರಣೆ ಆಚರಿಸಿದರು.

    ಮುಖಂಡ ಅಪ್ಪು ಆಲೂರ, ನಿವೃತ್ತ ಶಿಕ್ಷಕರಾದ ಸಂಗಣ್ಣ ಎಮ್ಮಿ, ಸಂಗಮೇಶ ಮಠ, ಮುಖ್ಯಶಿಕ್ಷಕಿ ಶ್ರೀದೇವಿ ಬಳಿಗಾರ, ಶಿಕ್ಷಕರಾದ ಪ್ರತಿಭಾ ಹಳ್ಳೂರ, ಮಹಾಂತಮ್ಮ ಭಾವಿಕಟ್ಟಿ, ಸುವರ್ಣಾ ಕಠಾರಿ, ಮಲ್ಲಣ್ಣ ಗೋನಾಳ, ದಿಲ್ಶಾದ್ ಧನ್ನೂರ, ಅಶ್ವಿನಿ ಹಳ್ಳೂರ, ಶ್ರೀದೇವಿ ಪೂಜಾರಿ, ಶೋಭಾ ಹಳಪೇಟಿ, ಜಯಶ್ರೀ ಬೇಡರ, ಸರಸ್ವತಿ ಗೌಡಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts