More

    ಮನೆ ತೆರವಿಗೆ ಗುಡ್ಡದ ಚನ್ನಾಪುರ ಗ್ರಾಮಸ್ಥರ ವಿರೋಧ

    ಬಂಕಾಪುರ: ಕುಂದೂರ ಗ್ರಾಮದ ಸ್ಮಶಾನಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ನಿರ್ವಣಗೊಂಡಿದ್ದ ಮನೆಗಳ ತೆರವಿಗೆ ಗುಡ್ಡದ ಚನ್ನಾಪುರ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ.

    ಕುಂದೂರ ಮತ್ತು ಗುಡ್ಡದ ಚನ್ನಾಪುರ ಮಧ್ಯೆ ಇರುವ ಸರ್ಕಾರಿ ಜಾಗದಲ್ಲಿ ಮೂರು ಎಕರೆಯಷ್ಟು ಜಮೀನನ್ನು ಕುಂದೂರ ಗ್ರಾಮದ ಸ್ಮಶಾನಕ್ಕೆ ಈ ಹಿಂದಿನ ತಹಸೀಲ್ದಾರ್ ಮಂಜೂರು ಮಾಡಿದ್ದರು. ಆದರೆ, ಇದಕ್ಕೆ ಗುಡ್ಡದಚನ್ನಾಪುರ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತ, ನಮ್ಮ ಗ್ರಾಮದ ಹದ್ದಿನಲ್ಲಿ ಸ್ಮಶಾನಕ್ಕೆ ಜಾಗ ಕೊಡುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಬಂದಿದ್ದರು.

    ತಹಸೀಲ್ದಾರ್ ಅವರಿಂದ ಆದೇಶ ಪಡೆದಿದ್ದ ಕುಂದೂರ ಪಿಡಿಒ ಸುಧೀರ ಹಡಗಲಿ ಅವರು ಸ್ಮಶಾನಕ್ಕೆ ಮೀಸಲಿಟ್ಟ ಜಾಗದಲ್ಲಿ ನಿರ್ವಣಗೊಂಡಿದ್ದ ಎರಡು ಮನೆಗಳನ್ನು ಪೊಲೀಸ್ ಬಂದೋಬಸ್ತ್​ನಲ್ಲಿ ಜೆಸಿಬಿ ಮೂಲಕ ನೆಲಸಮಗೊಳಿಸಿದರು.

    ನಂತರ ಗುಡ್ಡದ ಚನ್ನಾಪುರ ಗ್ರಾಮಸ್ಥರ ವಿರೋಧ ತೀವ್ರವಾಗಿದ್ದನ್ನು ಗಮನಿಸಿದ ಉಪತಹಸೀಲ್ದಾರ್ ಎಂ.ಎಸ್. ಪಾಟೀಲ ಹಾಗೂ ಪಿಎಸ್​ಐ ಸಂತೋಷ ಪಾಟೀಲ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದರು. ನಂತರ ಎಲ್ಲರನ್ನು ಸಮಾಧಾನಪಡಿಸಿ, ಮರು ಸರ್ವೆ ಕಾರ್ಯ ನಡೆಸಿದ ಬಳಿಕ ಮನೆ ತೆರವು ಕಾರ್ಯ ಮಾಡಲಾಗುವುದು ಎಂದರು.

    ಕುಂದೂರ ಪಿಡಿಒ ಸುಧೀರ ಹಡಗಲಿ ಮತ್ತು ಗ್ರಾಮಲೆಕ್ಕಾಧಿಕಾರಿ ಮಂಜು ಮುಳಗುಂದ ಕೆಲವರ ಕುಮ್ಮಕ್ಕಿನಿಂದ ಯಾವುದೇ ಮುನ್ಸೂಚನೆ ನೀಡದೇ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿನ ಬಡವರ ಮನೆಗಳನ್ನು ಕೆಡವಿ ಅಧಿಕಾರದ ದರ್ಪ ತೋರಿದ್ದಾರೆ. ಇದರಿಂದ ಬಡವರು ಬೀದಿ ಪಾಲಾಗಿದ್ದಾರೆ. ಸ್ಥಳೀಯ ಶಾಸಕ, ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಸೂಕ್ತ ಕ್ರಮ ಕೈಗೊಂಡು ಬಡವರಿಗೆ ನ್ಯಾಯ ಒದಗಿಸಬೇಕು.

    | ಷಣ್ಮುಖ ಕಾಳಣ್ಣವರ. ಗ್ರಾ.ಪಂ. ಅಧ್ಯಕ್ಷರು ಗುಡ್ಡದ ಚನ್ನಾಪುರ

    ಈ ಹಿಂದಿನ ತಹಸೀಲ್ದಾರರು ಕುಂದೂರ ಗ್ರಾಮಕ್ಕೆ ಸ್ಮಶಾನಕ್ಕೆ ಜಾಗ ನೀಡಿದ್ದಾರೆ. ಆದರೆ, ಆ ಜಾಗದಲ್ಲಿ ಕೆಲವರು ಮನೆ ನಿರ್ವಿುಸಿಕೊಂಡಿದ್ದರು. ಆದ್ದರಿಂದ ತಹಸೀಲ್ದಾರರ ಆದೇಶ ಪಡೆದು ತೆರವು ಕಾರ್ಯಾಚರಣೆ ಕೈಗೊಂಡಿದ್ದೇನೆ.

    | ಸುಧೀರ ಹಡಗಲಿ ಪಿಡಿಒ ಕುಂದೂರ ಗ್ರಾ.ಪಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts