More

    ಮೇಲ್ಸೇತುವೆಗೆ ಸಾವರ್ಕರ್ ಹೆಸರು: ಪ್ರತಿಪಕ್ಷ ನಾಯಕರ ವಿರೋಧ

    ಬೆಂಗಳೂರು: ಇಲ್ಲಿನ ಯಲಹಂಕದ ಮೇಲ್ಸೇತುವೆಗೆ ಸ್ವಾತಂತ್ರೃವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಹೆಸರಿಡಲು ನಿರ್ಧರಿಸಿರುವುದನ್ನು ವಿರೋಧ ಪಕ್ಷಗಳ ಕೆಲವು ನಾಯಕರು ಖಂಡಿಸಿದ್ದಾರೆ.

    ‘‘ಸಾವರ್ಕರ್ ಹೆಸರಿಡುವುದು ಈ ಮಣ್ಣಿನ ಸ್ವಾತಂತ್ರೃ ಯೋಧರಿಗೆ ಮಾಡುವ ಅವಮಾನ. ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು ನಮ್ಮ ನಾಡಿನ ಸ್ವಾತಂತ್ರೃ ಹೋರಾಟಗಾರರ ಹೆಸರನ್ನು ಇಡಬೇಕು’’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

    ‘‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ತೆರೆ ಹಿಂದಿನ ಸೂತ್ರಧಾರರೇ ಹೊರತು, ಚುನಾಯಿತ ಸರ್ಕಾರವಲ್ಲ ಎಂಬುದು ಈ ನಾಮಕರಣ ನಿರ್ಧಾರದಿಂದ ಬಯಲಾಗಿದೆ. ಇಂತಹ ಜನವಿರೋಧಿ ನಿರ್ಧಾರಗಳಿಗಾಗಿ ನೀವು ವಿರೋಧ ಪಕ್ಷಗಳ ಸಹಕಾರ ಬಯಸುತ್ತಿದ್ದೀರಾ’’ ಎಂದು ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಇನ್ನೊಂದೆಡೆ ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ‘‘ಸಾವರ್ಕರ್ ಹೆಸರಿಡುತ್ತಿರುವುದು ನಾಡಿನ ಅಭ್ಯುದಯಕ್ಕೆ ಹೋರಾಡಿದವರಿಗೆ ಮಾಡುತ್ತಿರುವ ಅವಮಾನ. ನಮ್ಮ ನಾಡಿನ ಹೋರಾಟಗಾರರ ಹೆಸರನ್ನೇ ಇಡಬೇಕು. ನಮ್ಮ ನಾಡಿನವರ ಹೆಸರನ್ನು ಬೇರೆ ರಾಜ್ಯದವರು ಇಡುತ್ತಾರೆಯೇ? ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು’’ ಎಂದಿದ್ದಾರೆ.

    ಬೆಂಗಳೂರಿನ ಯಲಹಂಕದ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡಲು ನಿರ್ಧರಿಸಲಾಗಿದೆ. ಈ ತೀರ್ಮಾನವನ್ನು ವಿರೋಧ ಪಕ್ಷಗಳ ನಾಯಕರಾದ ಸಿದ್ದರಾಮಯ್ಯ,…

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಮೇ 27, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts