More

    27ರಲ್ಲಿ 10 ಮಾತ್ರ ಬಳಕೆ

    ಮರಿದೇವ ಹೂಗಾರ ಹುಬ್ಬಳ್ಳಿ
    ಪಿಎಂ ಕೇರ್ಸ್ ನಿಧಿಯಡಿ ಇಲ್ಲಿನ ಕಿಮ್ಸ್​ಗೆ ಕಳೆದ ವಾರ 27 ವೆಂಟಿಲೇಟರ್​ಗಳನ್ನು ನೀಡಲಾಗಿದೆ. ವೆಂಟಿಲೇಟರ್ ಕೊರತೆ ಹಿನ್ನೆಲೆಯಲ್ಲಿ ಇವುಗಳನ್ನು ಒದಗಿಸಲಾಗಿದ್ದರೂ ಈ ಪೈಕಿ 10 ಮಾತ್ರ ಬಳಕೆಯಾಗುತ್ತಿವೆ. ಎಲ್ಲವನ್ನೂ ಬಳಸಿಕೊಳ್ಳಲು ಕಿಮ್್ಸ ಆಡಳಿತಕ್ಕೆ ಕೆಲವು ಅಡಚಣೆಗಳು ಎದುರಾಗುತ್ತಿವೆ.
    ಈ ಮೊದಲೇ ಕಿಮ್ಸ್​ನಲ್ಲಿರುವ 100 ವೆಂಟಿಲೇಟರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಪಿಎಂ ಕೇರ್ಸ್ ನಿಧಿಯಡಿ ಕಳೆದ ವಾರ ನೀಡಿದ 27 ವೆಂಟಿಲೇಟರ್​ಗಳ ಸಂಪೂರ್ಣ ಬಳಕೆಗೆ ಸಿದ್ಧತೆ ನಡೆದಿದೆ. ಆದರೆ, ಈ ನಿಟ್ಟಿನಲ್ಲಿ ನಾನಾ ಕಾರಣಗಳಿಂದಾಗಿ ವಿಳಂಬವಾಗುತ್ತಿದೆ.
    ಒಂದು ವೆಂಟಿಲೇಟರ್ ಜೋಡಣೆಗೆ ಅದಕ್ಕೆ ತಕ್ಕುದಾದ ಜಾಗ ಬೇಕು. ಜೋಡಣೆಗೆ ಟೆಕ್ನಿಷಿಯನ್ ಬೇಕು. ವೈರ್, ಸ್ವಿಚ್, ಆಕ್ಸಿಜನ್ ಫ್ಲೋ ಮೀಟರ್, ಪ್ರೆಷರ್ ವೀಕ್ಷಣೆ ನಿರಂತರ ಅತ್ಯಗತ್ಯ. ಇವೆಲ್ಲವೂ ಕಿಮ್್ಸ ಆಡಳಿತ ಮಂಡಳಿಗೆ ತ್ವರಿತಗತಿಯಲ್ಲಿ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ.
    ಒಂದು ವೆಂಟಿಲೇಟರ್ ಚಾಲನೆಯಲ್ಲಿದ್ದಾಗ ಪ್ರತಿ ನಿಮಿಷಕ್ಕೆ 40 ಲೀಟರ್ ಆಕ್ಸಿಜನ್ ಜಗ್ಗುತ್ತದೆ. ಆದರೆ, ಈಗಾಗಲೇ 100 ವೆಂಟಿಲೇಟರ್​ಗಳಿಗೆ ಆಕ್ಸಿಜನ್ ಪೂರೈಕೆ ಮಾಡುವುದೇ ಒಂದು ಸವಾಲಿನ ವಿಷಯವಾಗಿದೆ. ಏಕೆಂದರೆ, ಜಿಲ್ಲೆಗೆ ಸದ್ಯ ಪೂರೈಕೆಯಾಗುತ್ತಿರುವ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸಿಲ್ಲ. ಹೀಗಾಗಿ, ಮತ್ತಷ್ಟು ವೆಂಟಿಲೇಟರ್ ಅಳವಡಿಸಿದರೆ, ಅದಕ್ಕೆ ಆಕ್ಸಿಜನ್ ಒದಗಿಸುವುದು ಕಷ್ಟಕರವಾಗಿದೆ.
    ಅಲ್ಲದೆ, ರೋಗಿಗೆ ವೆಂಟಿಲೇಟರ್ ಅಳವಡಿಸಿದಾಗ ನಿರಂತರ ನಿಗಾವಣೆ ಅತ್ಯಗತ್ಯ. ಈಗಿರುವ ವೆಂಟಿಲೇಟರ್ ನೋಡಿಕೊಳ್ಳಲು ಸದ್ಯದ ಸಿಬ್ಬಂದಿ ಸಾಲುತ್ತಿಲ್ಲ. ಹೆಚ್ಚುವರಿ ವೆಂಟಿಲೇಟರ್ ಅಳವಡಿಸಿದರೆ, ಅದಕ್ಕೆ ಅಗತ್ಯ ಇರುವ ಸಿಬ್ಬಂದಿ ಹೊಂದಿಸುವುದು ಕಿಮ್್ಸ ಆಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ತಕ್ಷಣವೇ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದು ಕೂಡ ಸುಲಭದ ವಿಷಯವಲ್ಲ. ಏಕೆಂದರೆ, ವೆಂಟಿಲೇಟರ್ ನೋಡಿಕೊಳ್ಳಲು ನುರಿತ ಹಾಗೂ ಅನುಭವಿ ಸಿಬ್ಬಂದಿಯೇ ಬೇಕಾಗುತ್ತದೆ. ವೆಂಟಿಲೇಟರ್ ಅಳವಡಿಕೆಗೆ ಜಾಗದ ಸಮಸ್ಯೆಯೂ ಕಾಡುತ್ತಿದೆ. ಎಲ್ಲಿ ಅಳವಡಿಸಿದರೆ ಸೂಕ್ತ ಎಂಬ ಬಗೆಗೆ ಪರಿಶೀಲನೆ ಹಾಗೂ ಸಮಾಲೋಚನೆಯಲ್ಲಿ ಕಿಮ್್ಸ ಆಡಳಿತ ತೊಡಗಿದೆ. ಈಗಾಗಲೇ ಬಯೋಮೆಡಿಕಲ್ ಇಂಜಿನಿಯರ್ ಒಬ್ಬರು ವೆಂಟಿಲೇಟರ್ ಜೋಡಣೆಯಲ್ಲಿ ನಿರತರಾಗಿದ್ದಾರೆ. ವೆಂಟಿಲೇಟರ್ ನೀಡಿದ ಕಂಪನಿಯ ಟೆಕ್ನಿಷಿಯನ್ ಬಂದರೆ ಜೋಡಣೆ ಕೆಲಸ ಮತ್ತಷ್ಟು ಸುಲಭವಾಗಲಿದೆ. ಅವರು ಬರುವವರೆಗೆ ಇರುವ 27ರ ಪೈಕಿ 10 ವೆಂಟಿಲೇಟರ್​ಗಳನ್ನು ಅಳವಡಿಕೆ ಮಾಡಿ ಬಳಸುತ್ತಿದ್ದಾರೆ. ಇನ್ನುಳಿದವುಗಳನ್ನು ಕಂಪನಿ ಟೆಕ್ನಿಷಿಯನ್​ಗಳು ಬಂದ ನಂತರವೇ ಅಳವಡಿಸಿಕೊಳ್ಳಲಾಗುವುದು ಎಂದು ಕಿಮ್್ಸ ಮೂಲಗಳು ತಿಳಿಸಿವೆ.


    ಪಿಎಂ ಕೇರ್ಸ್ ನಿಧಿಯಡಿ 27 ವೆಂಟಿಲೇಟರ್​ಗಳು ಕಿಮ್ಸ್​ಗೆ ಬಂದಿವೆ. ಅದರಲ್ಲಿ 10 ಬಳಕೆ ಮಾಡುತ್ತಿದ್ದೇವೆ. ಇನ್ನಷ್ಟು ವೆಂಟಿಲೇಟರ್​ಗಳನ್ನು ಹಂತಹಂತವಾಗಿ ಜೋಡಣೆ ಮಾಡಿ ಅಳವಡಿಸಲಾಗುವುದು. ಯಾವುದನ್ನೂ ನಿರುಪಯುಕ್ತಗೊಳಿಸುವುದಿಲ್ಲ.
    | ಡಾ. ಅರುಣಕುಮಾರ ಚವ್ಹಾಣ ಕಿಮ್್ಸ ಪ್ರಭಾರ ವೈದ್ಯಕೀಯ ಅಧೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts