More

    ಒಬ್ಬರ ರಕ್ತದಾನ ಮೂವರಿಗೆ ಉಪಯೋಗ

    ಮೂಡಿಗೆರೆ: ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮೂವರ ಜೀವವನ್ನು ಉಳಿಸಬಹುದು. ಹಾಗಾಗಿ ದಾನಗಳಲ್ಲಿ ರಕ್ತದಾನಕ್ಕೆ ಶ್ರೇಷ್ಠವಾದ ಸ್ಥಾನವಿದೆ ಎಂದು ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ನಾರಾಯಣ್ ಎಸ್. ಮಾವರ್ಕರ್ ಹೇಳಿದರು.

    ತೋಟಗಾರಿಕಾ ಮಹಾವಿದ್ಯಾಲಯ, ಎನ್‌ಎಸ್‌ಎಸ್ ಘಟಕ, ರೋಟರಿ ಕ್ಲಬ್, ರೋಟರ‌್ಯಾಕ್ಟ್, ರಕ್ತನಿಧಿ ಕೇಂದ್ರ, ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಆಶ್ರಯದಲ್ಲಿ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯವಂತ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ 6 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ಮಾಹಿತಿ ನೀಡಿದರು.
    ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ವೈದ್ಯ ಡಾ. ಮುರಳೀಧರ್ ಮಾತನಾಡಿ, ರಕ್ತದಾನದಿಂದ ಆಗುವ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
    ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ 45 ಯೂನಿಟ್ ರಕ್ತ ಸಂಗ್ರಹಿಸಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.
    ರೋಟರಿ ಸಂಸ್ಥೆಯ ಕೆ.ಎಲ್.ತೇಜಸ್ವಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜೋನ್-8ರ ಅಸಿಸ್ಟೆಂಟ್ ಗವರ್ನರ್ ವಿನೋದ್‌ಕುಮಾರ್, ರೋಟರ‌್ಯಾಕ್ಟ್ ಅಧ್ಯಕ್ಷ ಕಾರ್ತಿಕ್, ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಡಾ. ಭರತ್‌ಕುಮಾರ್, ರೋಟರ‌್ಯಾಕ್ಟ್ ಕೋ-ಆರ್ಡಿನೇಟರ್ ಡಾ.ನಾಗರಾಜ್, ಧನಂಜಯ ಸ್ವಾಮಿ, ನರೇಂದ್ರ ಶೆಟ್ಟಿ,ಪ್ರಸಾದ್, ಆದರ್ಶ, ಪ್ರದೀಪ್‌ಕುಮಾರ್ ನವೀನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts