More

    ಎರಡೇ ದಿನಗಳಲ್ಲಿ 50 ಬಾರಿ ಟ್ರಾಫಿಕ್ ನಿಯಮ ಮುರಿದ ಕಾರು! ಡ್ರೈವರ್​ ಸಿಕ್ಕಾಗ ಬಯಲಾಗಿದ್ದು ಬೇರೆಯದ್ದೇ ಕಥೆ

    ಬೀಜಿಂಗ್: ಒಂದು ದಿನದಲ್ಲಿ ನೀವು ಎಷ್ಟು ಬಾರಿ ಟ್ರಾಫಿಕ್ ನಿಯಮವನ್ನು ಮುರಿದು ಗಾಡಿ ಓಡಿಸಬಹುದು. ಹೆಚ್ಚೆಂದರೆ ಮೂರ್ನಾಲ್ಕು ಬಾರಿ. ಆದರೆ ಇಲ್ಲೊಂದು ಕಾರು ಕೇವಲ ಎರಡೇ ದಿನಗಳಲ್ಲಿ ಬರೋಬ್ಬರಿ 50 ಬಾರಿ ಟ್ರಾಫಿಕ್ ನಿಯಮ ಮುರಿದಿದೆ. ಅದರ ಡ್ರೈವರ್​ನ್ನು ಹುಡುಕಿದಾಗ ಬೇರೆಯದ್ದೇ ಕಥೆಯೊಂದು ಬಯಲಾಗಿದೆ.

    ಚೀನಾದಲ್ಲಿ ಲು ಹೆಸರಿನ ಯುವತಿಯೊಬ್ಬಳು ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳಂತೆ. ಆದರೆ ಆತನಿಗೆ ಬೇರೆ ಹುಡುಗಿಯರೊಂದಿಗೆ ಸಲುಗೆ ಇದ್ದು, ಈ ಯುವತಿಯ ಕಡೆ ಗಮನ ಕಡಿಮೆ ಮಾಡಿದ್ದನಂತೆ. ಅದಾದ ಮೇಲೆ ಇಬ್ಬರದ್ದೂ ಬ್ರೇಕ್ ಅಪ್ ಆಗಿದೆ.

    ಬ್ರೇಕ್​ ಅಪ್ ಆದ ಸಿಟ್ಟಿದ್ದ ಲು ಹೇಗಾದರೂ ಮಾಡಿ ಆತನ ಮೇಲೆ ದ್ವೇಷ ತೀರಿಸಿಕೊಳ್ಳಬೇಕೆಂದು ಪ್ಲಾನ್ ಮಾಡಿದ್ದಾಳೆ. ಆಕೆಯನ್ನು ಇಷ್ಟ ಪಡುತ್ತಿದ್ದ ಮತ್ತೊಬ್ಬ ಯುವಕನೊಂದಿಗೆ ಸಂಪರ್ಕ ಸಾಧಿಸಿಕೊಂಡಿದ್ದಾಳೆ. ನೀನು ಒಂದು ವೇಳೆ ನನ್ನ ಎಕ್ಸ್​ ಬಾಯ್​ ಫ್ರೆಂಡ್​ನ ಕಾರನ್ನು ಬಾಡಿಗೆಗೆ ತಂದುಕೊಡುವುದಾದರೆ ನಾನು ನಿನ್ನೊಂದಿಗೆ ಡೇಟ್​ಗೆ ಬರುತ್ತೇನೆ ಎಂದು ಹೇಳಿದ್ದಾಳೆ. ಡೇಟ್​ ಆಸೆಯೊಂದಿಗೆ ಆತ ಆಕೆಯ ಎಕ್ಸ್​ ಬಾಯ್​ಫ್ರೆಂಡ್​ನ ಕಾರನ್ನು ಕಷ್ಟ ಪಟ್ಟು ಬಾಡಿಗೆಗೆ ಪಡೆದಿದ್ದಾನೆ.

    ಬಾಡಿಗೆ ಕಾರು ಪಡೆದ ಲು ಕಾರಿನಲ್ಲಿ ನಗರದಾದ್ಯಂತ ಸಂಚರಿಸಿದ್ದಾಳೆ. ಪಕ್ಕದಲ್ಲಿ ಹಾಲಿ ಬಾಯ್​ಫ್ರೆಂಡ್​ನ್ನು ಕೂರಿಸಿಕೊಂಡು ಎಲ್ಲೆಡೆ ಸಿಗ್ನಲ್ ಜಂಪ್ ಮಾಡುತ್ತಾ ಸಾಗಿದ್ದಾಳೆ. ಬರೋಬ್ಬರಿ 49 ಬಾರಿ ಸಿಗ್ನಲ್ ಜಂಪ್ ಮಾಡಿದ್ದಾಳೆ. ಒಂದು ಸ್ಥಳದಲ್ಲಿ ಓವರ್ ಸ್ಪೀಡ್​ನಲ್ಲಿ ಗಾಡಿ ಓಡಿಸಿದ್ದಾಳೆ. ಕಾರಿನ ಸಂಚಾರದ ಸಿಸಿ ಕ್ಯಾಮರಾ ದೃಶ್ಯವನ್ನು ಕಂಡ ಪೊಲೀಸರು ಯುವತಿಗಾಗಿ ಹುಡುಕಾಟ ನಡೆಸಿದ್ದಾರೆ. ಆಕೆಯನ್ನು ಮತ್ತು ಆಕೆಯೊಂದಿಗೆ ಕಾರಿನಲ್ಲಿದ್ದ ಯುವಕನನ್ನು ಬಂಧಿಸಲಾಗಿದೆ. (ಏಜೆನ್ಸೀಸ್)

    ಅಜ್ಜಿಯ ಬಾಲ್ಯದ ಕನಸನ್ನ ನನಸಾಗಿಸಿದ ಮೊಮ್ಮಗಳು; ಖುಷಿಯಿಂದ ಕಣ್ಣೀರಿಟ್ಟ ಅಜ್ಜಿ

    ಜೈಲಿನ ಸಿಬ್ಬಂದಿ ಮುಖಕ್ಕೆ ಕಾರದ ಪುಡಿ ಎರಚಿ ಏಳು ಮಂದಿ ಕೈದಿಗಳು ಎಸ್ಕೇಪ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts