More

    ರಸ್ತೆ ಮೇಲೆ ರಾಶಿ ಮಾಡುವಂತಿಲ್ಲ: ತೆರವುಗೊಳಿಸಲು ಹಡಗಲಿ ತಾಲೂಕು ಆಡಳಿತಕ್ಕೆ ನ್ಯಾಯಾಧೀಶರ ನೋಟಿಸ್

    ಹೂವಿನಹಡಗಲಿ: ರೈತರು ಮೆಕ್ಕೆಜೋಳ ಸೇರಿ ಇತರ ಬೆಳೆಗಳನ್ನು ರಸ್ತೆ ಮೇಲೆ ಒಕ್ಕಣೆ ಮಾಡುತ್ತಿದ್ದು, ಅಪಘಾತಗಳಾಗುವ ಸಂಭವವಿದೆ. ಆದ್ದರಿಂದ ಕೂಡಲೇ ತೆರವುಗೊಳಿಸುವಂತೆ ತಾಲೂಕು ಆಡಳಿತ ಸೇರಿ ಸಂಬಂಧಿಸಿದ ಇಲಾಖೆಗಳಿಗೆ ತಾಲೂಕು ಸಿವಿಲ್ ನ್ಯಾಯಾಧೀಶೆ ಪ್ರಿಯಾ ರವಿ ಜೋಗಳೇಕರ್ ಶುಕ್ರವಾರ ನೋಟಿಸ್ ನೀಡಿದ್ದಾರೆ.

    ತಾಲೂಕಿನ ರಾಜ್ಯ ಹೆದ್ದಾರಿ ಸೇರಿ ಹಳ್ಳಿಗಳ ರಸ್ತೆಗಳ ಮೇಲೆ ರೈತರು ಸಜ್ಜೆ, ನವಣೆ, ತೊಗರಿ, ರಾಗಿ, ಹೈಬ್ರೀಡ್ ಜೋಳ ಮತ್ತು ಮೆಕ್ಕೆಜೋಳ ಹಾಕಿ ಒಕ್ಕಣೆ ಮಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಜನ ಓಡಾಡುವ ರಸ್ತೆಗಳ ಮೇಲೆ ರಾಶಿ ಹಾಕುವವರ ವಿರುದ್ಧ ಕ್ರಮ ಕೈಗೊಂಡು, ಫಸಲು ತೆರವು ಮಾಡಬೇಕೆಂದು ತಹಸೀಲ್ದಾರ್, ಕೃಷಿ ಇಲಾಖೆ, ತಾಪಂ ಇಒ, ಪೊಲೀಸ್, ಲೋಕೋಪಯೋಗಿ ಇಲಾಖೆಗೆ ನೀಡಿರುವ ನೋಟಿಸ್‌ನಲ್ಲಿ ಸೂಚಿಸಿದ್ದಾರೆ. ನ್ಯಾಯಾಧೀಶರ ನೋಟಿಸ್ ಜಾರಿಯಾಗುತ್ತಿದ್ದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ಮೇಲೆ ಹಾಕಿರುವ ರಾಶಿ ತೆರವು ಮಾಡಬೇಕು. ಇಲ್ಲದಿದ್ದರೆ ನೋಟಿಸ್ ನೀಡಲಾಗುವುದು ಎಂದು ತಾಲೂಕ ಆಡಳಿತ ಸೂಚನೆ ನೀಡಿದೆ.

    ತಾಪಂ ಇಒ ಯು.ಎಚ್.ಸೋಮಶೇಖರ ಮಾತನಾಡಿ, ತಾಲೂಕಿನ 26 ಗ್ರಾಪಂ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಪಂಚಾಯಿತಿ ವ್ಯಾಪ್ತಿಯ ರಸ್ತೆಗಳಲ್ಲಿ ಯಾವುದೇ ಫಸಲು ಒಣಗಿಸಲು ಹಾಕದಂತೆ ಹಾಗೂ ಹಾಕಿದ್ದರೆ ತೆರವುಗೊಳಿಸಲು ಡಂಗುರ ಸಾರಬೇಕು. ರಸ್ತೆಯ ಮೇಲಿನ ರಾಶಿ ತೆರವು ಮಾಡದಿದ್ದರೆ ನೋಟಿಸ್ ನೀಡಿ ಫಸಲು ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts