More

    ನ್ಯಾಮತಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

    ನ್ಯಾಮತಿ: ಪಟ್ಟಣದ ಕೋಡಿಕೊಪ್ಪ ರಸ್ತೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಕಿವಿ, ಗಂಟಲು, ಮೂಗು, ದಂತ, ಕೆಮ್ಮು ದಮ್ಮು, ಅಸ್ತಮಾ, ಮೂಳೆ ಸಂಬಂಧಿತ ಸಮಸ್ಯೆಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.

    ಆರೋಗ್ಯ ತಪಾಸಣೆ ಶಿಬಿರದಲ್ಲಿ 180ಕ್ಕೂ ಹೆಚ್ಚು ಜನ ಸೌಲಭ್ಯ ಪಡೆದುಕೊಂಡರು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದವರನ್ನು ಶಿವಮೊಗ್ಗದ ಆಸ್ಪತ್ರೆಗೆ ಬರುವಂತೆ ತಿಳಿಸಲಾಯಿತು.

    ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿಶ್ವವಿದ್ಯಾನಿಲಯ ಪುರ್ಲೆ ಮತ್ತು ನ್ಯಾಮತಿ ಸರ್ಕಾರಿ ಮಾದರಿ ಶಾಲೆ ಮತ್ತು ಹಳೆ ವಿದ್ಯಾರ್ಥಿಗಳ ಸಂಘ ಸಂಯುಕ್ತಾಶ್ರಯದಲ್ಲಿ ನಡೆಸಲಾಯಿತು.

    ಶಾಲೆ ಮುಖ್ಯಶಿಕ್ಷಕ ಶಿವಾನಂದಪ್ಪ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆರುಂಡಿ ಹಂಪಣ್ಣ, ಸುಬ್ಬಯ್ಯ ಆಸ್ಪತ್ರೆ ವ್ಯವಸ್ಥಾಪಕ ಪ್ರಶಾಂತ್, ವೈದ್ಯರಾದ ತೇಜಸ್ವಿನಿ, ಮೋನಿಸಾ, ಪೂಜಾರೆಡ್ಡಿ, ಆಶಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts