More

    ಈಗ ಪರಿಸ್ಥಿತಿ ಕೈಮೀರಿದೆ

    ಹನಗೋಡು: ಮಳೆ ಹಾಗೂ ಹವಾಮಾನ ವ್ಯತ್ಯಾಸದ ಪರಿಣಾಮದಿಂದ ತಂಬಾಕು ಸಸಿಗಳ ಉಸಿರಾಟಕ್ಕೆ ಅಡಚಣೆಸಯಾಗಿ ಬೆಳೆಗೆ ಕಟಕಲು ರೋಗಲಕ್ಷಣ ಕಾಣಿಸಿಕೊಂಡಿದ್ದು, ಸಕಾಲದಲ್ಲಿ ರೈತರು ತಂಬಾಕು ಎಲೆ ಮೇಲೆ ಪೊಟಾಶಿಯಂ ನೈಟ್ರೇಟ್ ದ್ರಾವಣ ಸಿಂಪಡಣೆ ಮಾಡಿದ್ದರೆ ರೋಗ ಹತೋಟಿಗೆ ತರಬಹುದಿತ್ತು ಎಂದು ಹುಣಸೂರು ತಂಬಾಕು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಮಚಂದ್ರು ತಿಳಿಸಿದರು.

    ಜು.29ರಂದು ‘ವಿಜಯವಾಣಿ’ಯಲ್ಲಿ ಪ್ರಕಟಗೊಂಡ ‘ತಂಬಾಕು ಬೆಳೆಗೆ ವಕ್ಕರಿಸಿದ ಕಟಕಲು ರೋಗ’ ವರದಿಯ ಪರಿಣಾಮ ಹನಗೋಡು ಹೋಬಳಿ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆ ಪ್ಲಾಟ್ ಫಾರಂ 62 ಹಾಗೂ ಎಚ್.ಡಿ.ಕೋಟೆ ಪ್ಲಾಟ್ ಫಾರಂ ವ್ಯಾಪ್ತಿಯ ಗ್ರಾಮಗಳಿಗೆ ವಿವಿಧ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಭೇಟಿ ನೀಡಿದ್ದರು.

    ತಂಬಾಕು ಸಂಶೋಧನಾ ಮಂಡಳಿ ವಿಜ್ಞಾನಿಗಳಾದ ಡಾ.ಮಹದೇವಸ್ವಾಮಿ, ಡಾ.ಶ್ರೀನಿವಾಸ್ ಹಾಗೂ ತಂಬಾಕು ಹರಾಜು ಮಾರುಕಟ್ಟೆಯ ಹಿರಿಯ ಹರಾಜು ಅಧೀಕ್ಷಕರ ನೇತೃತ್ವದ ತಂಡದೊಂದಿಗೆ ಬೆಳೆ ಹಾನಿಯಾಗಿರುವ ದೊಡ್ಡಹೆಜ್ಜೂರು, ಚಿಕ್ಕಹೆಜ್ಜೂರು, ಕಚುವಿನಹಳ್ಳಿ, ನೇರಳಕುಪ್ಪೆ, ಚಂದನಗಿರಿ ಹಾಗೂ ಹಾಗೂ ಕೆ.ಜಿ.ಹಬ್ಬನಕುಪ್ಪೆ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದರು.

    ನಂತರ ರೈತರೊಂದಿಗೆ ಮಾತನಾಡಿದ ತಂಬಾಕು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಮಕೃಷ್ಣನ್, ಹವಾಮಾನ ವ್ಯತ್ಯಾಸ, ಒಮ್ಮೆ ಜೋರುಮಳೆ-ಬಿಸಿಲಿನ ತಾಪದಿಂದಾಗಿ ಸಸಿ ಉಸಿರಾಟದ ಸಮಸ್ಯೆಯಿಂದ ಹಾಗೂ ಬ್ಯಾಕ್ಟೀರಿಯಾದಿಂದ ಆಗಿರಬಹುದೆಂದು ಶಂಕೆ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಪ್ರಥಮ ಬಾರಿಗೆ ಈ ರೀತಿಯ ರೋಗ ಕಾಣಿಸಿಕೊಂಡಿದ್ದು, ಈಗಾಗಲೇ ರೋಗದಿಂದ ಎಲೆಗಳು ಹಾಳಾಗಿವೆ. ಈಗ ಏನೂ ಮಾಡಲು ಸಾಧ್ಯವಿಲ್ಲ, ರೋಗದ ಬಗ್ಗೆ ಸಂಶೋಧನೆ ನಡೆಸಿ, ಸೂಕ್ತ ಔಷಧೋಪಚಾರ ಕಂಡುಹಿಡಿಯಲಾಗುವುದೆಂದು ತಿಳಿಸಿ, ಬೆಳೆ ರೋಗ ಪರೀಕ್ಷೆಗೆ ರೋಗದ ಎಲೆಗಳನ್ನು ಒಳಪಡಿಸಲಾಗುವುದೆಂದು ತಿಳಿಸಿದರು

    ತಂಬಾಕು ಬೆಲೆ ನಷ್ಟಕ್ಕೊಳಗಾದ ರೈತ ಚಿಕ್ಕಹೆಜ್ಜೂರು ಪಾಪಾಣ್ಣ ಮಾತನಾಡಿ, ತಂಬಾಕು ಬೆಳೆಯನ್ನೇ ನಂಬಿಕೊಂಡು ರೈತರು ಬ್ಯಾಂಕ್ ಹಾಗೂ ಖಾಸಗಿ ವ್ಯಕ್ತಿಗಳಿಂದ ಬಡ್ಡಿ ಸಾಲ ಮಾಡಿದ್ದಾರೆ. ರೋಗ ಕಾಣಿಸಿಕೊಂಡಿರುವುದರಿಂದ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ಮಹದೇವಸ್ವಾಮಿ, ಡಾ.ಶ್ರೀನಿವಾಸ್, ಕಟ್ಟೆಮಳಲವಾಡಿ ತಂಬಾಕು ಮಂಡಳಿಯ ಮಾರುಕಟ್ಟೆಯ ಹರಾಜು ಅಧೀಕ್ಷಕರಾದ ವೀರಭದ್ರನಾಯ್ಕ, ಚಿಲ್ಕುಂದ ಮಾರುಕಟ್ಟೆಯ ಅಧೀಕ್ಷಕ ಸಿದ್ದರಾಜು, ಕಂಪಲಪುರ ಮಾರುಕಟ್ಟೆಯ ಅಧಿಕ್ಷಕ ಸಿ.ಆರ್.ಮೀನಾ, ಎಚ್.ಡಿ.ಕೋಟೆಯ ತಂಬಾಕು ಹರಾಜು ಮಾರುಕಟ್ಟೆಯ ಅಧೀಕ್ಷಕ ಆರ್.ಕಾಂಬ್ಳೆ, ಕ್ಷೇತ್ರಾಧಿಕಾರಿ ಶಂಭೂಲಿಂಗೇಗೌಡ ಹಾಗೂ ಐ.ಟಿ.ಸಿ.ಕಂಪನಿಯ ಕ್ಷೇತ್ರಾಧಿಕಾರಿಗಳಾದ ಶೇಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts