More

    ನೋಟಾಗೆ 3,989 ಮತಗಳು

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಗ್ರಾಮಾಂತರ ಜಿಲ್ಲೆಯಲ್ಲಿ ಜೆಡಿಎಸ್ ನೆಲೆ ಕಿತ್ತುಕೊಂಡು, ಬಿಜೆಪಿಗೊಂದು ಸ್ಥಾನಕೊಟ್ಟು ಮೂರರಲ್ಲಿ ಕಾಂಗ್ರೆಸ್ ಕೈ ಹಿಡಿದ ಮತದಾರ ಮತ್ತೊಂದೆಡೆ ನೋಟಾಗೂ ಮತಚಲಾಯಿಸಿ ಮೂರು ಪಕ್ಷದೊಂದಿಗೆ ಮತ್ಯಾವ ಅಭ್ಯರ್ಥಿಗೂ ನಮ್ಮ ಮತವಿಲ್ಲ ಎಂದು ೋಷಿಸಿದ್ದಾನೆ.
    ಈ ಬಾರಿ ನಾಲ್ಕೂ ವಿಧಾನಸಭಾ ಕ್ಷೇತ್ರದಲ್ಲಿ 7,46,873 ಮತ ಚಲಾವಣೆಯಾಗಿದ್ದರೆ ಮತ್ತೊಂದೆಡೆ 3,989 ಮತಗಳು ನೋಟಾಗೆ ಬಿದ್ದಿವೆ. ನೋಟಾಗೆ ಮತಚಲಾವಣೆಯಲ್ಲಿ ದೇವನಹಳ್ಳಿ ಮುಂದಿದ್ದು 1,509 ಮತಗಳು ಚಲಾವಣೆಯಾಗಿವೆ. ನಂತರದಲ್ಲಿ ದೊಡ್ಡಬಳ್ಳಾಪುರದಲ್ಲಿ 1,010, ನೆಲಮಂಗಲದಲ್ಲಿ 975 ಹಾಗೂ ಹೊಸಕೋಟೆಯಲ್ಲಿ 497 ಮತಗಳು ಚಲಾವಣೆಯಾಗಿವೆ.

    ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಮತಪ್ರಮಾಣ ಹೆಚ್ಚಾಗಿದೆ. ಇದರ ನಡುವೆ 1,31,017 ಮತದಾರರು ಹಕ್ಕು ಚಲಾಯಿಸಿಲ್ಲ. 4,35,835 ಪುರುಷ, 4,41,907 ಮಹಿಳೆ ಹಾಗೂ 148 ಇತರೆ ಸೇರಿ 8,77,890 ಮತದಾರರ ಪೈಕಿ ನಾಲ್ಕೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 7,46,873 ಮತಗಳು ಚಲಾವಣೆಯಾಗಿವೆ. ಎರಡು ಕಡೆ ಚುನಾವಣಾ ಗುರುತಿನ ಚೀಟಿ ಇಟ್ಟುಕೊಂಡಿರುವವರು, ಸ್ವ ಗ್ರಾಮಗಳಲ್ಲಿ ಮತಹಾಕಿದವರು, ಮತದಾನದ ರಜೆಯನ್ನು ದುರಪಯೋಗ ಮಾಡಿಕೊಂಡವರು. ಅನಾರೋಗ್ಯಪೀಡಿತರು ಸೇರಿ ಇನ್ನು ಅನೇಕ ಕಾರಣಗಳಿಂದ ಲಕ್ಷಾಂತರ ಮತದಾರರು ಮತದಾನದ ಹಕ್ಕನ್ನು ಚಲಾವಣೆ ಮಾಡಿಲ್ಲ ಎನ್ನಲಾಗಿದೆ.

    ಹೊಸಕೋಟೆಯಲ್ಲಿ ಹೆಚ್ಚು ಮತ: ಜಿಲ್ಲೆಯ ನಾಲ್ಕೂ ತಾಲೂಕಿಗೆ ಹೋಲಿಸಿದರೆ ಈ ಬಾರಿ ಹೊಸಕೋಟೆಯಲ್ಲಿ ದಾಖಲೆ ಮತದಾನವಾಗಿದೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರವಾರು ಹೋಲಿಸಿದರೂ ಹೊಸಕೋಟೆ ಎರಡೇ ಸ್ಥಾನ ಪಡೆದುಕೊಂಡಿದೆ. 2,34,079 ಮತದಾರರ ಪೈಕಿ 2,12,890 ಮತದಾರರು ಹಕ್ಕು ಚಲಾಯಿಸಿದ್ದಾರೆ. ಶೇ.90.95 ಮತಚಲಾವಣೆಯಾಗುವ ಮೂಲಕ ಜಿಲ್ಲೆಯಲ್ಲಿ ದಾಖಲೆ ಬರೆದಿದೆ. ಎರಡನೇ ಸ್ಥಾನದಲ್ಲಿ ದೇವನಹಳ್ಳಿ ಶೇ.84.71, ಮೂರನೇ ಸ್ಥಾನದಲ್ಲಿ ದೊಡ್ಡಬಳ್ಳಾಪುರ 84.52 ಹಾಗೂ ಕಡೇ ಸ್ಥಾನದಲ್ಲಿ 79.69 ಮತಚಲಾವಣೆಯಾಗಿದೆ.

    55 ಇತರೆ ಮತ ಚಲಾವಣೆ: ಈ ಬಾರಿ ಪುರುಷ ಹಾಗೂ ಮಹಿಳಾ ಮತದಾರರು ಹೊರತುಪಡಿಸಿ 55 ಇತರೆ ಮತಗಳು ಚಲಾವಣೆಯಾಗಿವೆ. ಅದರಲ್ಲೂ ನೆಲಮಂಗಲದಲ್ಲಿ ಅತಿ ಹೆಚ್ಚು ಅಂದರೆ 43 ಇತರೆ ಮತಚಲಾವಣೆಯಾಗಿದೆ. ನಂತರದಲ್ಲಿ ಹೊಸಕೋಟೆಯಲ್ಲಿ 8, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿಯಲ್ಲಿ ತಲಾ 2 ಮತ ಚಲಾವಣೆಯಾಗಿವೆ. ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಒಟ್ಟು 148 ಇತರೆ ಮತದಾರಿದ್ದಾರೆ. ಮತದಾನದಲ್ಲಿ ಪುರುಷರ ಪ್ರಮಾಣ ಹೆಚ್ಚಿದ್ದು 3,74,588 ಹಕ್ಕು ಚಲಾಯಿಸಿದ್ದರೆ. 3,72,230 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ ಹೊಸಕೋಟೆಯಲ್ಲಿ ಮಾತ್ರ ಮಹಿಳೆಯರ ಮತ ಪ್ರಮಾಣ ಹೆಚ್ಚಿದ್ದು ಪುರುಷರಿಗಿಂತ 936 ಮತ ಚಲಾವಣೆಯಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts