More

    ಮತಾಂತರಗೊಂಡವರಿಗಿಲ್ಲ ಜಾತಿ ಮೀಸಲಾತಿ: ಹೈಕೋರ್ಟ್ ಆದೇಶ

    ಚೆನ್ನೈ: ದೇಶದಲ್ಲಿ ಮತಾಂತರ ಪಿಡುಗಾಗಿ ಕಾಡುತ್ತಿರುವ ನಡುವೆಯೇ ಮಹತ್ವದ ಆದೇಶವೊಂದು ಹೊರಬಿದ್ದಿದೆ. ಮತಾಂತರಗೊಂಡವರು ತಮ್ಮ ಹಿಂದಿನ ಜಾತಿಯ ಮೀಸಲಾತಿಯನ್ನು ಕೇಳುವಂತಿಲ್ಲ ಎಂಬುದಾಗಿ ಹೈಕೋರ್ಟ್ ಆದೇಶ ನೀಡಿದೆ.

    ಇಸ್ಲಾಮ್​ಗೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬ ಮೀಸಲಾತಿ ಸಲುವಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್ ಶನಿವಾರ ಈ ಆದೇಶವನ್ನು ನೀಡಿದೆ. ಇನ್ನೊಂದು ಧರ್ಮಕ್ಕೆ ಮತಾಂತರಗೊಂಡ ಮೇಲೆ ಜಾತಿಯ ಮೀಸಲಾತಿ ಕೇಳುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಹಿಂದುಳಿದ ವರ್ಗದ ಹಿಂದೂ ವ್ಯಕ್ತಿಯೊಬ್ಬ ಇಸ್ಲಾಮ್​ಗೆ ಮತಾಂತರಗೊಂಡು ಜಾತಿ ಮೀಸಲಾತಿ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶ ಜಿ.ಆರ್. ಸ್ವಾಮಿನಾಥನ್ ನೇತೃತ್ವದ ಪೀಠ ಈ ಆದೇಶ ನೀಡಿದೆ. ದೂರುದಾರ ವ್ಯಕ್ತಿ 2008ರಲ್ಲಿ ಇಸ್ಲಾಮ್​ಗೆ ಮತಾಂತರಗೊಂಡಿದ್ದು, 2018ರಲ್ಲಿ ತಮಿಳುನಾಡು ಕಂಬೈನ್ಡ್​ ಸಿವಿಲ್ ಸರ್ವಿಸಸ್ ಎಕ್ಸಾಮ್​ಗೆ ಹಾಜರಾಗಿದ್ದ. ಆದರೆ ಈತ ಸಾಮಾನ್ಯ ವರ್ಗದಲ್ಲಿ ಪರಿಗಣಿಸಲ್ಪಟ್ಟಿದ್ದರಿಂದ ಅರ್ಹತೆ ಪಡೆಯದಿರುವುದು ತಿಳಿದುಬಂದಿದೆ. ಆಗ ಈತ ರಾಜ್ಯ ಸರ್ಕಾರದ ಉದ್ಯೋಗಕ್ಕೆ ಸಂಬಂಧಿಸಿದಂತೆ ತನ್ನ ಜನ್ಮತಃ ಜಾತಿ ಮೀಸಲಾತಿ ಪರಿಗಣಿಸುವಂತೆ ಕೋರಿದ್ದ. ತನ್ನನ್ನು ಹಿಂದುಳಿದ ಮುಸ್ಲಿಂ ಎಂದು ಪರಿಗಣಿಸಬೇಕು ಎಂದು ಆತ ಕೇಳಿದ್ದ. ತಮಿಳುನಾಡು ಸರ್ಕಾರ ಕೆಲವು ಮುಸ್ಲಿಮರನ್ನು ಅತಿ ಹಿಂದುಳಿದ ಸಮುದಾಯ ಎಂದು ಪರಿಗಣಿಸುತ್ತಿದೆ. ಆದರೆ ನ್ಯಾಯಾಲದಲ್ಲಿ ಈತನ ಅರ್ಜಿ ತಿರಸ್ಕೃತಗೊಂಡಿದ್ದು, ಮತಾಂತರಗೊಂಡರೆ ಜಾತಿ ಮೀಸಲಾತಿ ಅನ್ವಯಿಸುವುದಿಲ್ಲ ಎಂಬ ಆದೇಶ ಹೊರಬಿದ್ದಿದೆ.

    ಐಸಿಯುನಲ್ಲಿ ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಆಗ್ತಿತ್ತು ಅಂತ ಆಫ್ ಮಾಡಿದ ವೃದ್ಧೆ; ಸಾವಿಗೀಡಾದ ರೋಗಿ

    ಒಂದೇ ಒಂದು ಬ್ರೇಕ್ ಫೇಲ್​: ಅಪಘಾತಕ್ಕೆ ಒಳಗಾದ್ವು 4 ಲಾರಿ, 3 ಕಾರು, 2 ಬೈಕ್, ಒಂದು ತಳ್ಳುವ ಗಾಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts