More

    ಕ್ರಿಕೆಟ್ ಪಂದ್ಯ ಇಲ್ಲದೆ 100 ದಿನ….! ಆಟ ಪುನರಾರಂಭಕ್ಕೆ ಪ್ರಯತ್ನ

    ಬೆಂಗಳೂರು: ಕರೊನಾ ಮಹಾಮಾರಿಯ ಹಾವಳಿ ಶುರುವಾದ ಬಳಿಕ ಜಾಗತಿಕ ಕ್ರೀಡಾ ಚಟುವಟಿಕೆಗಳೆಲ್ಲ ಸ್ತಬ್ಧಗೊಂಡಿದ್ದವು. ಇದೀಗ ಕರೊನಾ ನಿಯಂತ್ರಣಕ್ಕೆ ಬಾರದಿದ್ದರೂ, ಕ್ರೀಡಾ ಚಟುವಟಿಕೆಗಳೆಲ್ಲ ಒಂದೊಂದಾಗಿ ಪುನರಾರಂಭಗೊಳ್ಳುತ್ತಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭಕ್ಕೂ ಪ್ರಯತ್ನಗಳು ನಡೆಯುತ್ತಿವೆ. ಇದರ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಲ್ಲದೆ ಭಾನುವಾರಕ್ಕೆ ಭರ್ತಿ ನೂರು ದಿನಗಳಾಗಿವೆ.

    ಮಾರ್ಚ್ 13ರಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ಪ್ರವಾಸಿ ನ್ಯೂಜಿಲೆಂಡ್ ನಡುವೆ ನಡೆದ ಏಕದಿನವೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಬಳಿಕ ಕರೊನಾ ಹಾವಳಿ ಮತ್ತು ಎಲ್ಲ ಪ್ರಮುಖ ಕ್ರಿಕೆಟ್ ದೇಶಗಳಲ್ಲೂ ಲಾಕ್​ಡೌನ್ ಘೋಷಣೆಯಾದ ಕಾರಣ ಕ್ರಿಕೆಟ್ ಚಟುವಟಿಕೆ ಸ್ತಬ್ಧಗೊಂಡಿದೆ. ಮಾರ್ಚ್ 16ರ ನಂತರ ಪ್ರಥಮ ದರ್ಜೆ, ಲಿಸ್ಟ್ ಎ ಪಂದ್ಯಗಳೂ ನಡೆದಿಲ್ಲ. ಸದ್ಯ ಇಂಗ್ಲೆಂಡ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆ ಆರಂಭಕ್ಕೆ ಯೋಜನೆ ಹಾಕಿಕೊಳ್ಳಲಾಗಿದ್ದು, ಜುಲೈ 8ರಿಂದ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ನಿಗದಿಯಾಗಿದೆ.

    ಪ್ರಮುಖ ಕ್ರಿಕೆಟ್ ದೇಶಗಳ ಪೈಕಿ ಭಾರತದಲ್ಲೇ ಅತಿ ಹೆಚ್ಚಿನ ಕರೊನಾ ಪ್ರಕರಣ ದಾಖಲಾಗಿದ್ದು, ದೇಶದಲ್ಲಿ ಸದ್ಯಕ್ಕೆ ಕ್ರಿಕೆಟ್ ಚಟುವಟಿಕೆ ಪುನರಾರಂಭದ ನಿರೀಕ್ಷೆ ಇಲ್ಲ. ಟಿ20 ಏಷ್ಯಾಕಪ್, ವಿಶ್ವಕಪ್​ಗಳು ಮುಂದೂಡಿಕೆಯಾದರೆ ಐಪಿಎಲ್ 13ನೇ ಆವೃತ್ತಿ ಆಯೋಜನೆಯತ್ತ ಬಿಸಿಸಿಐ ಒಲವು ಹೊಂದಿದೆ. ಹೀಗಾಗಿ ಟೀಮ್ ಇಂಡಿಯಾ ಮತ್ತೆ ಕಣಕ್ಕಿಳಿಯುವುದನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಇನ್ನಷ್ಟು ದಿನ ಕಾಯಬೇಕು ಎಂಬುದು ಸ್ಪಷ್ಟವಿಲ್ಲ.

    ಸಂಘರ್ಷದ ನಡುವೆಯೇ ಮಹೋನ್ನತ ಸಾಹಸ; 72 ತಾಸುಗಳಲ್ಲಿ ಗಾಲ್ವಾನ್​ ನದಿ ಸೇತುವೆ ಕಾಮಗಾರಿ ಪೂರ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts