More

    ವಿವಾದಾತ್ಮಕ ಅಂಶ ಪಾಠ ಇಲ್ಲ

    ಉಡುಪಿ: ಪ್ರಾಥಮಿಕ ಶಾಲೆಗಳ 6ನೇ ತರಗತಿಯ ಸಮಾಜಶಾಸ್ತ್ರದ ಪಠ್ಯ ಪುಸ್ತಕದಲ್ಲಿ ಹಿಂದುಗಳ ಧಾರ್ಮಿಕ ನಂಬಿಕೆಗಳನ್ನು ವಿಡಂಬನೆ ಮಾಡುವ ವಿವಾದಾತ್ಮಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಪಾಠ ಮಾಡದಂತೆ ಶಿಕ್ಷಕರಿಗೆ ಸೂಚನೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಯಾಗ ಯಜ್ಞಗಳನ್ನು ಮಾಡುವುದರಿಂದ ಹಿಂದೆ ಆಹಾರದ ಕೊರತೆ ಉಂಟಾಗಿತ್ತು ಎಂಬ ಅಂಶ ಪಠ್ಯದಲ್ಲಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವಾರದಿಂದ ಚರ್ಚೆಗಳಾಗುತ್ತಿತ್ತು. ಈ ಅಂಶವನ್ನು ಗಮನಿಸಿದ ಪರ್ಯಾಯ ಶ್ರೀ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಗಳು ವಿಷಾದ ವ್ಯಕ್ತಪಡಿಸಿ, ಪಠ್ಯದಲ್ಲಿ ಮಕ್ಕಳಿಗೆ ತಪ್ಪು ಸಂದೇಶ ನೀಡುವುದು ಸರಿಯಲ್ಲ ಎಂಬ ಧ್ವನಿ ಸಂದೇಶವನ್ನು ಸಚಿವ ಸುರೇಶ್ ಕುಮಾರ್ ಅವರಿಗೆ ಕಳುಹಿಸಿದ್ದರು.
    ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ಈ ಪಠ್ಯಪುಸ್ತಕ ಈ ವರ್ಷ ಪ್ರಕಟವಾಗಿಲ್ಲ. ಪಠ್ಯ ಪರಿಷ್ಕರಿಸಲೂ ಮುಂದಾಗಿಲ್ಲ. ಆದರೆ ಈ ವಿವಾದಾತ್ಮಕ ಅಂಶವನ್ನು ಪಾಠ ಮಾಡಬಾರದು ಎಂದು ಶಿಕ್ಷಕರಿಗೆ ಸೂಚನೆ ನೀಡಲಾಗುವುದು. ಮುಂದಿನ ವರ್ಷ ಪಠ್ಯ ಪರಿಷ್ಕರಣೆ ಸಂದರ್ಭ ಈ ಭಾಗವನ್ನು ತೆಗೆಯುವುದಾಗಿ ತಿಳಿಸಿದ್ದಾಗಿ ಪರ್ಯಾಯ ಅದಮಾರು ಮಠದ ಮೂಲಗಳು ‘ವಿಜಯವಾಣಿ’ಗೆ ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts