More

    ಕೇಜ್ರಿವಾಲ್​ ಪ್ರಮಾಣವಚನಕ್ಕೆ ಯಾವುದೇ ಮುಖ್ಯಮಂತ್ರಿ ಅಥವಾ ರಾಜಕಾರಣಿಗೆ ಆಹ್ವಾನವಿಲ್ಲ: ದೆಹಲಿಯ ಜನರೆಲ್ಲರಿಗೂ ಸ್ವಾಗತವೆಂದ ಎಎಪಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿಕೊಂಡಿರುವ ಎಎಪಿ ಪಕ್ಷದ ಅಧ್ಯಕ್ಷ ಅರವಿಂದ್​ ಕೇಜ್ರಿವಾಲ್​ ಭಾನುವಾರದಂದು ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬೇರೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಾಗಲೀ ಅಥವಾ ರಾಜಕಾರಣಿಗಾಗಲೀ ಆಹ್ವಾನ ನೀಡಿಲ್ಲವೆಂದು ಪಕ್ಷ ಸ್ಪಷ್ಟಪಡಿಸಿದೆ.

    ಎರಡನೆಯ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಅರವಿಂದ್​ ಕೇಜ್ರಿವಾಲ್​ ತಮ್ಮನ್ನು ದೆಹಲಿಯ ಮಗ ಎಂದು ಕರೆದುಕೊಂಡಿದ್ದಾರೆ. ಹಾಗಾಗಿ ಕೇಜ್ರಿವಾಲ್​ ಮೇಲೆ ನಂಬಿಕೆ ಇಟ್ಟು ಮತ ನೀಡಿದ ದೆಹಲಿಯ ಸರ್ವ ಜನರಿಗೂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸ್ವಾಗತ ಕೋರುವುದಾಗಿ ಪಕ್ಷದ ವಕ್ತಾರ ಗೋಪಾಲ್​ ರೈ ತಿಳಿಸಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಅವರು, “ಬೇರೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಳನ್ನಾಗಲೀ ಅಥವಾ ರಾಜಕಾರಣಿಗಳನ್ನಾಗಲೀ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ. ದೆಹಲಿಯ ಪ್ರತಿ ನಾಗರಿಕರಿಗೂ ಕಾರ್ಯಕ್ರಮಕ್ಕೆ ಬಂದು ಅವರ ಮಗ/ಸಹೋದರರಾಗಿರುವ ಕೇಜ್ರಿವಾಲ್​ಗೆ ಹರಸಲು ಸ್ವಾಗತಿಸಲಾಗಿದೆ.” ಎಂದು ತಿಳಿಸಿದ್ದಾರೆ.

    ಭಾನುವಾರದಂದು ದೆಹಲಿಯಲ್ಲಿರುವ ರಾಮ್​ಲೀಲಾ ಮೈದಾನದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅರವಿಂದ್​ ಕೇಜ್ರಿವಾಲ್​ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಚಿವ ಸಂಪುಟ ಪಟ್ಟಿಯಲ್ಲಿ ಬಹುತೇಕ ಹಳೆಯ ಸಚಿವರ ಹೆಸರೇ ಇರಲಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts