More

    ನವಮಂಗಳೂರು ಬಂದರಿಗೆ ಬಂದ 260 ಮೀಟರ್ ಉದ್ದದ ಬೃಹತ್ ನೌಕೆ

    ಮಂಗಳೂರು: ಕೊಲಂಬೋದಿಂದ ನವಮಂಗಳೂರು ಬಂದರಿಗೆ ಎಂ.ವಿ.ಎಸ್‌ಎಸ್‌ಎಲ್ ಬ್ರಹ್ಮಪುತ್ರ ವಿ084 ಎಂಬ ಬೃಹತ್ ಕಂಟೈನರ್ ನೌಕೆ ಆಗಮಿಸುವ ಮೂಲಕ ದಾಖಲೆ ನಿರ್ಮಿಸಿದೆ. ಇದುವರೆಗೆ ಬಂದರು ನಿರ್ವಹಿಸಿದ ನೌಕೆಗಳಲ್ಲಿ ಅತ್ಯಂತ ದೊಡ್ಡ ಹಾಗೂ ಅತಿ ಹೆಚ್ಚಿನ ಪ್ರಮಾಣದ ಕಂಟೈನರ್ ಹೊಂದಿದ್ದ ನೌಕೆ ಇದು.

    260 ಮೀಟರ್ ಉದ್ದ ಹಾಗೂ 32.35 ಮೀಟರ್ ಬೂಂ, 50,900 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದೆ. 1521 ಟಿಇಯು ಪ್ರಮಾಣದ ಕಂಟೈನರ್‌ಗಳಲ್ಲಿ 25864.40 ಮೆಟ್ರಿಕ್ ಟನ್ ಕಚ್ಚಾ ಗೋಡಂಬಿಯೊಂದಿಗೆ ಆಗಮಿಸಿದ ನೌಕೆ ಮಂಗಳೂರಿನಿಂದ 300 ಟಿಇಯು ಸರಕನ್ನು ಕೊಲಂಬೋಗೆ ಹೊತ್ತೊಯ್ದಿದೆ.

    ಎನ್‌ಎಂಪಿಟಿಯಲ್ಲಿ 2000ನೇ ಇಸವಿಯಲ್ಲಿ 2 ಸಾವಿರ ಟಿಇಯುನಷ್ಟು ಕಂಟೈನರ್ ನಿರ್ವಹಿಸಲಾಗಿದ್ದರೆ, 2020-21ರಲ್ಲಿ 1.5 ಲಕ್ಷ ಟಿಇಯು ನಿರ್ವಹಿಸಲಾಗಿದೆ. ಕಂಟೈನರ್ ನಿರ್ವಹಣೆ ನಿರಂತರ ಏರುತ್ತಾ ಬಂದಿದೆ. ಇದುವರೆಗೆ ಕಂಟೈನರುಗಳನ್ನು ಬಂದರಿನ ವಿವಿಧ ಸರಕು ಬರ್ತ್‌ಗಳಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು. ಈ ಸರಕು ಏರುತ್ತಿರುವ ಹಿನ್ನೆಲೆಯಲ್ಲಿ ನಂ.14ನೇ ಜೆಟ್ಟಿಯನ್ನು ಪಿಪಿಪಿ ಆಧಾರದಲ್ಲಿ ಮಂಗಳೂರು ಕಂಟೈನರ್ ಜೆಎಸ್‌ಡಬ್ಲ್ಯೂ ಸಂಸ್ಥೆಗೆ ಯಾಂತ್ರೀಕೃತ ನಿರ್ವಹಣೆಗಾಗಿ ಹಸ್ತಾಂತರಿಸಲಾಗಿದೆ.

    ಬೃಹತ್ ಕಂಟೈನರ್ ನೌಕೆ ನಿರ್ವಹಣೆ ಮೂಲಕ ದಾಖಲೆ ಮಾಡಿರುವುದಕ್ಕೆ ಬಂದರು ಅಧ್ಯಕ್ಷ ಡಾ.ಎ.ವಿ.ರಮಣ ಹರ್ಷ ವ್ಯಕ್ತಪಡಿಸಿದ್ದು ಆನ್‌ಲೈನ್ ಮೂಲಕ ಗೇಟ್‌ನಲ್ಲಿ ಪ್ರವೇಶ, ಸುಧಾರಿತ ಸ್ಟೋರೇಜ್, ಉತ್ತಮ ಸೇವೆ ಮತ್ತು ಸ್ಪರ್ಧಾತ್ಮಕ ದರಗಳಿಂದಾಗಿ ಇದು ಸಾಧ್ಯವಾಗಿದೆ ಎಂದವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts