More

    ದೆಹಲಿ ಗ್ಯಾಂಗ್​ ರೇಪ್​ ಅಪರಾಧಿಗಳಿಗೆ ಗಲ್ಲು ಮುಂದೂಡಿಕೆ; ನಮಗ್ಯಾಕೆ ಶಿಕ್ಷೆ ಎಂದು ಬೇಸರ ವ್ಯಕ್ತಪಡಿಸಿದ ನಿರ್ಭಯಾ ತಾಯಿ

    ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಸದ್ಯದ ಮಟ್ಟಿಗೆ ಮುಂದೂಡಲಾಗಿದೆ.

    ಜ.22ರಂದು ಬೆಳಗ್ಗೆ 7ಗಂಟೆಗೆ ಅಪರಾಧಿಗಳನ್ನು ನೇಣಿಗೇರಿಸಬೇಕು ಎಂದು ದೆಹಲಿ ಪಟಿಯಾಲ ಕೋರ್ಟ್​ ಆದೇಶ ನೀಡಿತ್ತು. ಆದರೆ ಅಪರಾಧಿಗಳಲ್ಲಿ ಓರ್ವನಾದ ಮುಕೇಶ್​ ಸಿಂಗ್​ ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದಾನೆ. ಹಾಗೇ ಮರಣದಂಡನೆ ಆದೇಶವನ್ನು ಮರುಪರಿಶೀಲನೆ ಮಾಡುವಂತೆ ದೆಹಲಿ ಕೋರ್ಟ್​ಗೂ ಅರ್ಜಿ ಹಾಕಿದ್ದಾನೆ. ರಾಷ್ಟ್ರಪತಿಗಳು ದಯಾ ಅರ್ಜಿಯನ್ನು ಇನ್ನೂ ತಿರಸ್ಕರಿಸಿಲ್ಲ. ಅರ್ಜಿ ತಿರಸ್ಕರಿಸಿದರೂ 14 ದಿನಗಳ ಬಳಿಕವಷ್ಟೇ ಅಪರಾಧಿಗಳನ್ನು ಗಲ್ಲಿಗೇರಿಸಬೇಕಾಗುತ್ತದೆ. ನಿಯಮಗಳು ಹೀಗಿರುವಾಗ ಅಪರಾಧಿಗಳನ್ನು ಜ.22ಕ್ಕೆ ಗಲ್ಲಿಗೇರಿಸಲಾಗದು ಎಂದು ದೆಹಲಿ ಸರ್ಕಾರ ಹೇಳಿದೆ.

    ನಿಯಮಗಳು ಏನೇ ಇರಲಿ. ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ದಿನವನ್ನು ಮುಂದೂಡಿದ್ದಕ್ಕೆ ನಿರ್ಭಯಾ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ.

    ಅಂದು ಅಪರಾಧಿಗಳಿಗೆ ಡೆತ್​ ವಾರಂಟ್ ಜಾರಿಗೊಳಿಸಿ, ನೇಣಿಗೇರಿಸುವ ದಿನವನ್ನು ನ್ಯಾಯಾಲಯ ಘೋಷಣೆ ಮಾಡಿದಾಗ, ನನ್ನ ಮಗಳಿಗೆ ಇಂದು ನ್ಯಾಯ ಸಿಕ್ಕಿತು, ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇದ್ದ ನಂಬಿಕೆ ಹೆಚ್ಚಾಯಿತು ಎಂದು ಹೇಳಿದ್ದರು.

    ಆದರೆ ಇಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಪರಾಧಿಗಳಿಗೆ ಗಲ್ಲು ವಿಧಿಸಲು ಸರ್ಕಾರ ವಿಳಂಬ ಮಾಡುತ್ತಿದೆ. ಜೈಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಅದ್ಯಾಕೆ ಅಪರಾಧಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ನನಗ್ಯಾಕೆ ಶಿಕ್ಷೆ? ಎಂದು ಪ್ರಶ್ನೆ ಮಾಡಿದ್ದಾರೆ.
    ನನ್ನ ಮಗಳು ಏಳು ವರ್ಷದ ಹಿಂದೆ ಮೃತಪಟ್ಟಿದ್ದಾಳೆ. ಇನ್ನೂ ನಾವು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts