ಹೊಸ ವರ್ಷ ಚೇತನಕ್ಕೆ ದಿಕ್ಸೂಚಿಯಾಗಲಿ

01gkl1
Published on

ಗುರುಮಠಕಲ್: ಜೀವನದಲ್ಲಿ ಉತ್ಸಾಹವನ್ನು ಕಳೆಯದಿರಿ, ವರ್ಷವು ಬದಲಾವಣೆಯಾಗುವಂತೆ ಜೀವನವು ಹೊಸ ಚೇತನಕ್ಕೆ ದಿಕ್ಸೂಚಿಯಾಗಲಿ ಎಂದು ಶ್ರೀ ಶಾಂತವೀರ ಗುರು ಮುರುಘರಾಜೇಂದ ಸ್ವಾಮೀಜಿ ಹೇಳಿದರು.


ಪಟ್ಟಣದ ಖಾಸಾಮಠ ಆವರಣದಲ್ಲಿ ಶನಿವಾರ ಶ್ರೀಮಠದಿಂದ 2022ನೇ ವರ್ಷದ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ ವರ್ಷ ಕರೊನಾ ವೈರಸ್ದಿಂದ ಜಗತ್ತು ತಲ್ಲಣಗೊಂಡಿತ್ತು. ಆರ್ಥಿಕವಾಗಿ ಹಿನ್ನೆಡೆ ಸಾಧಿಸಿತ್ತು. ಎಲ್ಲರೂ ಸಂಕಷ್ಟಕ್ಕೆ ಒಳಗಾಗಿ ಖಿನ್ನತೆ ಬೆಳೆಸಿಕೊಂಡಿದ್ದರು ಅಲ್ಲದೆ ಉತ್ತಮ ಆಹಾರದ ಕಡೆ ಹೆಚ್ಚಿನ ಒಲವು ತೋರುವಂತೆ ಮಾಡಿತ್ತು. ಆದರೂ ಕರೊನಾ ಸೋಂಕು ಹಲವು ಪಾಠಗಳನ್ನು ಮಾನವನಿಗೆ ಕಲಿಸಿಕೊಟ್ಟಿದೆ ಎಂದರು.


ಪುರಸಭೆ ಅಧ್ಯಕ್ಷ ಪಾಪಣ್ಣ ಮನೆ ಮಾತನಾಡಿ, ಪರಿವರ್ತನೆ ಜಗದ ನಿಯಮವಾಗಿದೆ. ಪರಿವರ್ತನೆಗೆ ಒಲವು ತೋರಿ ಜೀವನದಲ್ಲಿ ಯಶಸ್ಸು ಆಗಬೇಕು. ನಿರುತ್ಸಾಹಕ್ಕೆ ಒಳಗಾಗವಾರದು ಎಂದರು.

ಶರಣು ಅವಂಟಿ, ನರಸರಡ್ಡಿ ಗಡ್ಡೆಸುಗೂರ, ಸಂತೋಷಕುಮಾರ ನಿರೇಟಿ, ನಾರಾಯಣರಡ್ಡಿ, ಭಾಗಿರಡ್ಡಿ, ಮೋಗುಲಪ್ಪ ನಾಯ್ಕಿನ್, ಅಖಂಡೇಶ್ವರ ಹಿರೇಮಠ, ವೆಂಕಟೇಶ, ವಿಜಯ ಪವಾರ, ಸುರೇಶ ರಾಠೋಡ, ಗುರು ತಲಾರಿ, ಕುಮಾರ ಗದ್ವಾಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net